ಬದುಕಿನ ನಿಯಮಾತೀತ ಹತೋಟಿಗೆ ಒಳಗಾಗಿ…

ಇದು ಒಬ್ಬ ಸಂತನ ಉತ್ತರ. ಹೀಗೆಯಾಗಲಿ ಹಾಗಾಗಲಿ ಪ್ರಶ್ನೆಗಳಿಗೆ ಅಂಥ ಮಹತ್ವವಿಲ್ಲ. ಹಾಗೆಯೇ ಉತ್ತರಗಳೂ ಸ್ವಲ್ಪ ಆಚೆ ಈಚೆ ಅಷ್ಟೇನೂ ಮುಖ್ಯವಾದವುಗಳಲ್ಲ. ಪ್ರಶ್ನೆಗಳಿಲ್ಲದಂತೆ, ಉತ್ತರಗಳಿಗೆ ಹಪಹಪಿಸದಂತೆ ಬದುಕಬೇಕು ಆಗ ಮಾತ್ರ ನೀವು ‘ನಿಜ’ ದಲ್ಲಿ ಬದುಕುತ್ತಿದ್ದೀರಿ | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

Life has to be lived without questions and without answers… Osho

ಒಮ್ಮೆ, ಝೆನ್ ನ ಮಹಾ ವೃದ್ಧ ಡಾ. D.T. ಸುಝುಕಿಯವರನ್ನು ಅವರ ಉಪನ್ಯಾಸ ಮುಗಿದ ಮೇಲೆ ಶಿಷ್ಯನೊಬ್ಬ ಪ್ರಶ್ನೆ ಮಾಡಿದ.

“ ನಿಮ್ಮ ಉಪನ್ಯಾಸದಲ್ಲಿ ನೀವು ‘ನಿಜ’ (reality) ಎನ್ನುವ ಪದವನ್ನು ಉಪಯೋಗ ಮಾಡುವಾಗಲೆಲ್ಲ, ನೀವು ಈ ಭೌತಿಕ ಜಗತ್ತಿನ ನಿಜದ ಬಗ್ಗೆ ಮಾತನಾಡುತ್ತಿರುತ್ತೀರೋ ಅಥವಾ ಅಧ್ಯಾತ್ಮದ ಜಗತ್ತಿನ ಪರಮ ಸತ್ಯದ ಬಗ್ಗೆ ಮಾತನಾಡುತ್ತಿರುತ್ತೀರೋ ? “

ಸಮಾಧಾನದಿಂದ ಪ್ರಶ್ನೆ ಕೇಳಿಸಿಕೊಂಡ ಮಾಸ್ಟರ್ ಸುಝುಕಿ, ಒಂದು ಮಾತನ್ನೂ ಆಡದೆ, ಕಣ್ಣು ಮುಚ್ಚಿಕೊಂಡರು.

ಪ್ರಶ್ನೆ ಕೇಳಿದಾಗಲೆಲ್ಲ ಹೀಗೆ ಕಣ್ಣು ಮುಚ್ಚಿಕೊಳ್ಳುವ ಸುಝುಕಿಯವರ ನಡೆಯನ್ನು ‘Doing a Suzuki’ ಎಂದೇ ಅವರ ವಿದ್ಯಾರ್ಥಿಗಳು ತಮಾಷೆ ಮಾಡುತ್ತಿದ್ದರು. ಹೀಗೆ ಕಣ್ಣು ಮುಚ್ಚಿಕೊಂಡಾಗ ಅವರು ಆಳ ಧ್ಯಾನದಲ್ಲಿ ಮುಳುಗಿದ್ದಾರೋ ಅಥವಾ ನಿದ್ದೆ ಹೋಗಿಬಿಟ್ಟಿದ್ದಾರೋ ಎನ್ನುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಒಂದು ಪೂರ್ಣ ನಿಮಿಷದ ನಂತರ ( ತುಂಬ ದೀರ್ಘ ಅನಿಸುವಷ್ಚು ) ಡಾ. ಸುಝುಕಿ ನಿಧಾನವಾಗಿ ಕಣ್ಣು ತೆರೆದು ಉತ್ತರಿಸಿದರು, “ ಹೌದು “

ಇದು ಒಬ್ಬ ಸಂತನ ಉತ್ತರ. ಹೀಗೆಯಾಗಲಿ ಹಾಗಾಗಲಿ ಪ್ರಶ್ನೆಗಳಿಗೆ ಅಂಥ ಮಹತ್ವವಿಲ್ಲ. ಹಾಗೆಯೇ ಉತ್ತರಗಳೂ ಸ್ವಲ್ಪ ಆಚೆ ಈಚೆ ಅಷ್ಟೇನೂ ಮುಖ್ಯವಾದವುಗಳಲ್ಲ. ಪ್ರಶ್ನೆಗಳಿಲ್ಲದಂತೆ, ಉತ್ತರಗಳಿಗೆ ಹಪಹಪಿಸದಂತೆ ಬದುಕಬೇಕು ಆಗ ಮಾತ್ರ ನೀವು ‘ನಿಜ’ ದಲ್ಲಿ ಬದುಕುತ್ತಿದ್ದೀರಿ.

ಹಾಗಾಗಿ ಬದುಕಿನತ್ತ ಧಾವಿಸಿರಿ – ಇದೊಂದೇ ನೀವು ದೇವರನ್ನು ಕಾಣಬಹುದಾದ ದೇವಾಲಯ. ಮತ್ತು ಪ್ರಶ್ನೆಗಳನ್ನು ಕಳೆದುಕೊಳ್ಳುತ್ತ, ಉತ್ತರಗಳನ್ನು ನಿರಾಕರಿಸುತ್ತ ಸುಮ್ಮನಾಗಿಬಿಡಿ, ಮುಗ್ಧವಾಗಿ, ಅಜ್ಞಾನಿಯಾಗಿ. ಬದುಕನ್ನ ಸೇರಿಕೊಳ್ಳಿ, ಬದುಕು ನಿಮ್ಮನ್ನು ತನ್ನ ನಿಯಮಾತೀತ ಹತೋಟಿಗೆ ಸೇರಿಸಿಕೊಳ್ಳಲಿ.

Osho, The Revolution, Ch 1 (excerpt)

Leave a Reply