ಗುರುಮಹಿಮೆ ಸಾರುವ ಶ್ರೀ ಗುರ್ವಷ್ಟಕ : ನಿತ್ಯಪಾಠ

ಶ್ರೀ ಶಂಕರಾಚಾರ್ಯ ವಿರಚಿತ ಶ್ರೀಗುರ್ವಷ್ಟಕ ಮತ್ತು ಕನ್ನಡ ಸರಳಾರ್ಥ ಇಲ್ಲಿದೆ….


ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರುಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||1
ತಾನು ಸುರೂಪಿ; ತನ್ನ ಪತ್ನಿಯೂ ಸುಂದರಿ. ಕೀರ್ತಿಯೂ ಎಲ್ಲಕಡೆ ಹರಡಿದೆ. ಸಂಪತ್ತು ಮೇರು ಪರ್ವತದಷ್ಟಿದೆ. ಏನಿದ್ದರೇನು!? ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ ಫಲವೇನು…?

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾಂಧವಾಃ ಸರ್ವಮೇದ್ಧಿಜಾತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||2||
ಮದುವೆಯಾಗಿ ಪತ್ನಿ ಮನೆಗೆ ಬಂದಳು, ಸಂಪತ್ತು ದೊರೆಯಿತು, ಮಕ್ಕಳು ಆದರು, ಮೊಮ್ಮಕ್ಕಳೂ ಆದರು, ಮನೆ ಕಟ್ಟಿಯಾಯಿತು, ಬಾಂಧವರೂ ಇರುವರು… ಏನಿದ್ದರೇನು!? ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ ಫಲವೇನು?

ಷಡಂಗಾದಿ ವೇದೋ ಮುಖೇ ಶಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||3||
ವೇದ, ವೇದಾಂಗ, ಶಾಸ್ತ್ರ, ವಿದ್ಯೆಗಳೆಲ್ಲವೂ ಕಂಠಪಾಠವಾಗಿವೆ. ಒಳ್ಳೆಯ ಪದ್ಯ, ಗದ್ಯಗಳನ್ನು ರಚಿಸುವ ಕವಿತ್ವವಿದೆ. ಏನಿದ್ದರೇನು!? ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ ಫಲವೇನು…?

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ಚಾನ್ಯಃ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||4||
ವಿದೇಶಗಳಲ್ಲಿ ಗೌರವಸಂಪನ್ನ; ಸ್ವದೇಶದಲ್ಲಿ ನಿಶ್ಚಿಂತ; ಆಚರಣೆಯ ಪಾಲನೆಯಲ್ಲಿ ಸಮಾನರಾದ ಮತ್ತೊಬ್ಬರಿಲ್ಲ! ಏನಿದ್ದರೇನು!? ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ ಫಲವೇನು…?

ಕ್ಷಮಾಮಂಡಲೇ ಭೂಪಭೂಪಾಲವೃಂದೈಃ
ಸದಾಸೇವಿತಂ ಯಸ್ಯ ಪಾದಾರವಿಂದಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||5||
ಭೂಮಂಡಲದಲ್ಲೇ ಎಲ್ಲ ಕಡೆಯ ರಾಜರಿಂದ, ರಾಜಸಮೂಹದಿಂದ ಸೇವೆ ಮಾಡಿಸಿಕೊಳ್ಳಲ್ಪಡುವ ಭಾಗ್ಯಶಾಲಿ. ಏನಾದರೇನು!? ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ ಫಲವೇನು…?

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್
ಜಗದ್ವಸ್ತುಸರ್ವಂ ಕರೇ ಯತ್ಪ್ರಸಾದಾತ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||6||
ದಾನದಿಂದ ದಶ ದಿಕ್ಕುಗಳಲ್ಲಿಯೂ ಕೀರ್ತಿ ಹಬ್ಬಿದೆ. ಜಗತ್ತಿನ ಎಲ್ಲ ವಸ್ತುಗಳೂ ತನ್ನ ಕೈಯಲ್ಲೇ ಇದೆ. ಏನಿದ್ದರೇನು!? ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ ಫಲವೇನು…?

ಯೋಗೋ ಭೋಗೋ ವಾ ವಾಜಿರಾಜೌ
ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||7||
ಯೋಗದಲ್ಲಿ ಮನಸ್ಸಿಲ್ಲ; ಭೋಗದಲ್ಲೂ ಮನಸ್ಸಿಲ್ಲ; ಕುದುರೆಗಳ ಕಲೆ ಹಾಕುವ ಮನಸ್ಸಿಲ್ಲ; ರಾಜನಾಗುವ ಮನಸ್ಸಿಲ್ಲ; ಪತ್ನಿಯ ಸಹವಾಸಕ್ಕೂ ಮನಸ್ಸಿಲ್ಲ; ಸಂಪತ್ತಿನಲ್ಲಂತೂ ಮನಸ್ಸಿಲ್ಲವೇ ಇಲ್ಲ. ಈ ವೈರಾಗ್ಯದಿಂದ ತಾನೆ ಏನು!? ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ ಫಲವೇನು…?

ಅರಣ್ಯೇ ವಾ ಸ್ವಸ್ಯ ಗೇಹೇ ಕಾರ್ಯೇ
ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||8||
ಅರಣ್ಯಕ್ಕೆ ಹೋಗಲು ಮನಸ್ಸಿಲ್ಲ; ಮನೆಯಲ್ಲಿರಲು ಮನಸ್ಸಿಲ್ಲ; ಕೆಲಸದಲ್ಲಿ ಮನಸ್ಸಿಲ್ಲ; ದೇಹದ ಮೇಲೆ ಮನಸ್ಸಿಲ್ಲ. ಸಂಪತ್ತಿನ ಮೇಲೂ ಮನಸ್ಸಿಲ್ಲ. ಏನಾದರೇನು!? ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ ಫಲವೇನು…?

Leave a Reply