ದೇವರನ್ನು ಪ್ರೀತಿಸುವುದೇ ಸುಲಭ! : ಓಶೋ ವಿಚಾರ ಧಾರೆ

ದೇವರನ್ನ ತುಂಬ ಸುಲಭವಾಗಿ ಪ್ರೀತಿಸಿಬಿಡಬಹುದು, ಮನುಷ್ಯರನ್ನ ಪ್ರೀತಿಸೋದು ಬಲು ಕಷ್ಟ! ~ ಓಶೋ ರಜನೀಶ್ । ಕನ್ನಡಕ್ಕೆ: ಹರೀಶ್ ಎಂ ಜಿ

ದೇವರ ಪರಿಪೂರ್ಣತೆ ನಿಮ್ಮ ಮನಸ್ಸಿನಲ್ಲಿದೆ, ಆಲೋಚನೆಗಳಲ್ಲಿದೆ. ಪರಿಪೂರ್ಣನಾದ ದೇವರು ನಿಮ್ಮ ಮನಸ್ಸಿನ ಕಲ್ಪನೆ ಮಾತ್ರ. ಆತ ನಿಮ್ಮ ಮನಸ್ಸಿನ ಪ್ರೊಜೆಕ್ಷನ್ ಮಾತ್ರ ಮತ್ತು ಆತನನ್ನು ನೀವು ತುಂಬ ಸುಲಭವಾಗಿ ಪ್ರೀತಿಸಬಹುದು, ಏಕೆಂದರೆ ಆತನಿಲ್ಲ. ಆತನಿಲ್ಲದಿರುವುದರಿಂದ ಆತನನ್ನು ಪ್ರೀತಿಸಲು ಯಾವ ಸಮಸ್ಯೆಯೂ ಇಲ್ಲ.

ಒಂದು ಹುಡುಗಿಯನ್ನೋ ಹುಡುಗನನ್ನೋ ಪ್ರೀತಿಸಲು ಹಲವು ಸಮಸ್ಯೆಗಳಿವೆ. ನಿಮ್ಮ ಅಭಿರುಚಿಗಳು ವಿಭಿನ್ನವಾಗಿರುತ್ತವೆ, ನಿಮ್ಮ ಆದ್ಯತೆಗಳು ಬೇರೆಬೇರೆಯಾಗಿರುತ್ತವೆ. ನೀವು ಸಿನಿಮಾಕ್ಕೆ ಹೋಗಬೇಕೆಂದು ಆಸೆಪಡುತ್ತಿರಿ, ನಿಮ್ಮ ಹೆಂಡತಿ ತಲೆ ನೋವು ಯಾವ ಸಿನಿಮಾನು ಬೇಡ ಅನ್ನುತ್ತಾಳೆ. ನೀವು ಸುಖ ನಿದ್ರೆಗೆ ಜಾರಬೇಕೆಂದು ಆಶಿಸುತ್ತೀರಿ ಗಂಡ ಗೊರಕೆ ಹೊಡೆಯುತ್ತಾನೆ. ಹೆಂಡತಿಯ ಮೈ ವಾಸನೆ ಸಹಿಸಲಾಗುವುದಿಲ್ಲ…

ನಿಮ್ಮ ದೇವರಲ್ಲಿ ಎಲ್ಲವು ಸುಂದರ ಏಕೆಂದರೆ ಅವನ ಜೊತೆ ನೀವು ಎಂದೂ ಮಲಗುವುದಿಲ್ಲ. ಆತ ಗೊರಕೆ ಹೊಡೆಯಲಿ ಬಿಡಿ. ನೀವು ಅವನ ಜೊತೆ ಬಾಳುವುದಿಲ್ಲ, ಮೈಯಿಂದ ಗಬ್ಬು ವಾಸನೆ ಬರಲಿ ಬಿಡಿ. ದೇವರು ನಿಮ್ಮ ಮನಸ್ಸಿನ ಶುದ್ದ ಕಲ್ಪನೆಯಷ್ಟೇ. ಉಸಿರಾಡುವ ಮನುಷ್ಯರ ಸಂಪರ್ಕದಲ್ಲಿ ಬದುಕುವುದು ಸಂಪೂರ್ಣ ವಿಭಿನ್ನ ಅನುಭವ. ಹಾಗೆ ಬದುಕುವುದು ನಿಮ್ಮ ಪ್ರೀತಿಯ ನಿಜವಾದ ಅಗ್ನಿ ಪರೀಕ್ಷೆಯು ಕೂಡ. ದೇವರನ್ನ ತುಂಬ ಸುಲಭವಾಗಿ ಪ್ರೀತಿಸಿಬಿಡಬಹುದು, ಮನುಷ್ಯರನ್ನ ಪ್ರೀತಿಸೋದು ಬಲು ಕಷ್ಟ. ದೇವರನ್ನ ಪ್ರೀತಿಸಲು ನೀವು ಏನನ್ನು ತೆರಬೇಕಿಲ್ಲ. ಮನುಷ್ಯರನ್ನ ಪ್ರೀತಿಸಲು ಪ್ರಚಂಡ ತಿಳುವಳಿಕೆ ಬೇಕು.

Leave a Reply