ಕೃತಘ್ನರ ಪಾಡು : ಇಂದಿನ ಸುಭಾಷಿತ, ರಾಮಾಯಣದಿಂದ

ಕೃತಘ್ನರಾಗುವುದು ಬೇಡ, ನಾವು ಮನುಷ್ಯತ್ವ ಪಾಲಿಸೋಣ…


ಕೃತಾರ್ಥಾ ಹ್ಯಕೃತಾರ್ಥಾನಾಂ ಮಿತ್ರಾಣಾಂ ನ ಭವಂತಿ ಯೇ |
ತಾನ್ ಮೃತಾನಪಿ ಕ್ರವ್ಯಾದಾಃ ಕೃತಾಘ್ನಾನ್ನೋಪಭುಂಜತೇ ||೭೩||
[ ಕಿಷ್ಕಿಂಧಾ ಕಾಂಡ, ಸರ್ಗ ೩೦ ]
ಅರ್ಥ: ಯಾರು ತಮ್ಮ ಕಾರ್ಯವನ್ನು ಮಾತ್ರ ಸಾಧಿಸಿಕೊಂಡು, ಇನ್ನೂ ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳದೆ ಉಪಕಾರಿಗಳಾಗಿರುವ ಮಿತ್ರರ ಸಮಯಕ್ಕೆ ಒದಗುವುದಿಲ್ಲವೋ, ಅಂತಹವರು ಸತ್ತಮೇಲೆ ಆ ಕೃತಘ್ನರನ್ನು ನಾಯಿನರಿಗಳೂ ಮುಟ್ಟಲಾರವು.

ತಾತ್ಪರ್ಯ : ಮನುಷ್ಯ, ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ಗುರುತಿಸಲ್ಪಡುವುದೇ ‘ಮನುಷ್ಯತ್ವ’ದಿಂದ. ಮನುಷ್ಯತ್ವವೆಂದರೆ ಆಲೋಚನಾ ಸಾಮರ್ಥ್ಯ, ದಯಾಪರತೆ, ಕ್ಷಮಾಗುಣ, ಕೃತಜ್ಞತೆ ಮೊದಲಾದ ಮನೋಬುದ್ಧಿ ಅವಲಂಬಿತ ಗುಣಗಳ ಮೊತ್ತ. ಅವುಗಳಲ್ಲಿ ಒಂದಾದ ಕೃತಜ್ಞತೆಯನ್ನು ಹೊಂದಿಲ್ಲದ ‘ಕೃತಘ್ನ’ನನ್ನು ಪ್ರಾಣಿಗಳೂ ಮೂಸುವುದಿಲ್ಲ ಎಂದು ರಾಮಾಯಣ ಹೇಳುತ್ತದೆ.
ಆದ್ದರಿಂದ, ಕೃತಘ್ನರಾಗುವುದು ಬೇಡ. ನಾವು ಮನುಷ್ಯತ್ವ ಪಾಲಿಸೋಣ. ನಮಗೇನು ದೊರಕಿದೆಯೋ, ಯಾರು ಸಹಾಯ ನೀಡಿರುವರೋ ಅದಕ್ಕೆ/ ಅವರಿಗೆ ಕೃತಜ್ಞರಾಗಿರೋಣ.

Leave a Reply