ಮೈಗಳ್ಳತನವೇ ಅತಿ ದೊಡ್ಡ ಶತ್ರು : ಸುಭಾಷಿತ

ಇಂದಿನ ಸುಭಾಷಿತ

ಆಲಸ್ಯಂ ಹಿ ಮನುಷ್ಯಾಣಾಂಶರೀರಸ್ಥೋ ಮಹಾನ್ ರಿಪುಃ |ನಾಸ್ತುದ್ಯಮ ಸಮೋ ಬಂಧುಃಕೃತ್ವಾ ಯಂ ನಾವಸೀದತಿ ||


ಆಲಸ್ಯವೆಂಬುದು ಮನುಷ್ಯನ ಶರೀರರನ್ನು ಹೊಕ್ಕಿರುವ ಭಯಂಕರ ಶತ್ರು. ಯಾವುದನ್ನು ನಂಬಿ ಯಾರೂ ನಾಶವಾಗಿಲ್ಲವೋ ಅಂತಹ ಪರಿಶ್ರಮಕ್ಕೆ ಸಮನಾದ ಬಾಂಧವರೇ ಇಲ್ಲ. ಏಕೆಂದರೆ ನಮಗೆ ಅಗತ್ಯ ಇರುವಾಗ, ನಮ್ಮ ಕಷ್ಟ ಕಾಲದಲ್ಲಿ ಪರಿಶ್ರಮವೇ ಸಹಾಯಕ್ಕೆ ಬರುವುದು. ನಮ್ಮ ಗೌರವವನ್ನು, ನಮ್ಮ ಸಂಪತ್ತನ್ನು, ನಮ್ಮ ಸುಖವನ್ನು ಹೆಚ್ಚಿಸುವುದೂ ನಮ್ಮ ಪರಿಶ್ರಮವೇ.

ಆದ್ದರಿಂದ ಮೈಗಳ್ಳರಾಗದಿರೋಣ. ದುಡಿಮೆಯೊಡನೆ ಬಾಂಧವ್ಯ ಗಟ್ಟಿಮಾಡಿಕೊಳ್ಳೋಣ.

Leave a Reply