ಅತೀಂದ್ರಿಯ ಶಕ್ತಿಗಳು ನಿರರ್ಥಕ : ಶ್ರೀ ರಮಣ ವಿಚಾರಧಾರೆ

ಮಹರ್ಷಿಗಳ ಪ್ರಭಾವಕ್ಕೆ ಸಿಲುಕಿದ್ದ ಮೊದಲನೆಯ ಪಾಶ್ಚಾತ್ಯ ಯುವ ಅನ್ವೇಷಕ ಎಫ್‌.ಎಚ್‌. ಹಂಫ್ರಿಸ್‌, ಮತಧರ್ಮಗಳ  ಶ್ರದ್ಧಾಪೂರ್ವಕ ಅಭ್ಳಾಸಿಯಾಗಿದ್ದ. ಪವಾಡದ ಶಕ್ತಿಗಳು ಅವನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತಲೇ ಅವನು ಸಿದ್ಧಿಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲಿಯಾಗಿದ್ದ. ಮಹರ್ಷಿಗಳು ಈ ಕುತೂಹಲಕ್ಕೆ ಪ್ರೋತ್ಸಾಹ ಕೊಡಲಿಲ್ಲ. ಈ ಸಂದರ್ಭದಲ್ಲಿ ಅವರು ನೀಡಿದ ಬೋಧನೆಗಳಿವು… ~ ಕೃಪೆ: ರಮಣ ಮಹರ್ಷಿ; ಕೆ. ಸ್ವಾಮಿನಾಥನ್ । ಕನ್ನಡಕ್ಕೆ: ಎನ್.ಬಾಲಸುಬ್ರಹ್ಮಣ್ಯ

ಅಲೌಕಿಕ ವ್ಯಾಪಾರಗಳ ಬಗ್ಗೆ ಹೆಚ್ಚು ಭಾವಿಸಬೇಡಿ. ಅತೀಂದ್ರಿಯ ದೃಷ್ಟಿ, ಅತೀಂದ್ರಿಯ ಶ್ರವಣ ಮುಂತಾದವುಗಳಿಗೆ ಬೆಲೆಯೇನೂ ಇಲ್ಲ, ಏಕೆಂದರೆ ಅವುಗಳನ್ನು ಹೊಂದಿರುವುದಕ್ಕಿಂತ ಅವು ಸಂಭವವಿರುತ್ತದೆ. ಸಿದ್ದಿಗಳಿಗೆ ಯಾವನೇ ಗುರು ಎಂದೇ ಆಗಲಿ ಸ್ವಲ್ಪವೂ ಗಮನಕೊಟ್ಟಿದ್ದಿ. ಏಕೆಂದರೆ ದಿನನಿತ್ಯದ ಬದುಕಿನಲ್ಲಿ ಅವನಿಗೆ ಅವುಗಳ ಅಗತ್ಯವಿಲ್ಲ.

ನಮಗೆ ಕಾಣುವ ವಿಷಯಗಳು ವಿಚಿತ್ರವೂ ಆಶ್ಚರ್ಯಕರವೂ ಆಗಿವೆ. ಆದರೆ ಇದೆಲ್ಲಕಿಂತಲೂ ಅತ್ಯಂತ ಅದ್ಭುತವಾದುದನ್ನು ನಾವು ಅರಿತಿಲ್ಲ. ನಾವು ನೋಡುವ ಎಲ್ಲ ವಸ್ತುಗಳಿಗೆ ಮತ್ತು ಅವನ್ನು ನಾವು ನೋಡುವ ಕ್ರಿಯೆಗೆ ಕಾರಣವಾದುದು ಒಂದೇ ಆನಂತ ಶಕ್ತಿ ಎನ್ನುವುದು. ಬದುಕು, ಸಾವು ಮತ್ತು ಘಟನೆಗಳು – ಇಂಥ ಬದಲಾಯಿಸುತ್ತಿರುವ ವಿಷಯಗಳ ಮೇಲೆ ನಿಮ್ಮ ಗಮನ ನೆಡಬೇಡಿ. ಅವನ್ನು ನೋಡುವ ಅಥವಾ ಗ್ರಹಿಸುವ ಕ್ರಿಯೆಯ ಬಗ್ಗೆ ಕೂಡ ಆಲೋಚಿಸಬೇಡಿ. ಆದರೆ ಇವೆಲ್ಲವನ್ನೂ ನೋಡುವ ವಸ್ತುವನ್ನು, ಇವೆಲ್ಲಕ್ಕೂ ಕಾರಣವಾಗಿರುವ ವಸ್ತುವನ್ನು ಮಾತ್ರ ಕುರಿತು ಚಿಂತಿಸಿ. ಆದು ನಿಮ್ಮೊಳಗೇ ಇದೆ. ಈ ಏಕಾಗ್ರತೆಯ ಪರಿಣಾಮಗಳನ್ನು ಎಲ್ಲ ಬಗೆಯ ಅನೈಚ್ಛಿಕ ಅತೀಂದ್ರಿಯ ದೃಷ್ಟಿ, ಮನಸ್ಸಿನ ಶಾಂತಿ, ಕಷ್ಟಗಳನ್ನು ಎದುರಿಸುವ ಶಕ್ತಿ, ಸರ್ವವ್ಯಾಪಕ ಶಕ್ತಿ, ಆದರೆ ಯಾವಾಗಲೂ ಅನೈಚ್ಛಿಕ ಶಕ್ತಿ ಇವುಗಳಲ್ಲಿ ಕಾಣಬಹುದು.

ಕ್ರೈಸ್ತ ಬೌದ್ಧ, ಹಿಂದೂ, ಥಿಯಾಸಫಿ ಅಥವಾ ಇತರ ಯಾವುದೇ ಪದ್ಧತಿಯವಾಗಿರಲಿ, ಮತಗಳು ಎಲ್ಲ ಮತಗಳೂ ಸಂಧಿಸುವ ಒಂದು ಹಂತಕ್ಕೆ ಮಾತ್ರ ನಮ್ಮನ್ನು ಒಯ್ಯಬಲ್ಲವು, ಅದರಿಂದಾಚೆಗೆ ಒಯ್ಯಲಾರವು. ದೇವರೇ ಎಲ್ಲವೂ ಮತ್ತು ಎಲ್ಲವೂ ದೇವರೇ ಎನ್ನುವ ಸಂಗತಿಯನ್ನು ಗ್ರಹಿಸುಸುವದೇ ಆ ಹಂತ. ಇದು ಯಾವುದೇ ರಹಸ್ಯವಾದ ಅರ್ಥದಲ್ಲಿ ಆಗಿರದೆ, ಅತ್ಯಂತ ಲೌಕಿಕವೂ ಸರ್ವಸಾಮಾನ್ಯವೂ ಆದ ಅರ್ಥದಲ್ಲಿ ಆಗಿರುತ್ತದೆ. ಹೆಚ್ಚು ಲೌಕಿಕ, ಸಾಮಾನ್ಯ ಮತ್ತು ಲೌಕಿಕ ಆಗಿರುವಷ್ಟೂ ಉತ್ತಮವಾಗಿರುತ್ತದೆ. ಆದರೆ ದೇವರ ಈ ವಿಶ್ವವ್ಯಾಪಿತ್ವವನ್ನು ಕೇವಲ ಬೌದ್ಧಿಕವಾಗಿ ಗ್ರಹಿಸಬಾರದು, ನಿರಂತರ ಅಭ್ಯಾಸದ ಮೂಲಕ ಸಾಕ್ಷಾತ್ಕರಿಸಿಕೊಂಡು ಅನುಭವಿಸಬೇಕು.

Leave a Reply