ಸಮಾಜವಾದ – ವೇದಾಂತ : ಸ್ವಾಮಿ ರಾಮತೀರ್ಥರ ವಿಚಾರ

ಆಕರ ~ ರಾಮತೀರ್ಥ | In the woods of God realization

ಸಮಾಜವಾದ ಎನ್ನುವುದರ ಗುರಿಯು ಬಂಡವಾಳವಾದವನ್ನು ಕೆಳಗಿಳಿಸುವುದಾಗಿದೆ. ಅಷ್ಟರ ಮಟ್ಟಿಗೆ ಅದು ವೇದಾಂತದ ಗುರಿಯೇ ಆಗಿದೆ. ನಿಮ್ಮ ಎಲ್ಲ ಸ್ವಾಮಿತ್ವದ ಭಾವನೆಯನ್ನು ಕಳಚುವುದೇ ಆಗಿದೆ. ಅದು ನಿಮ್ಮ ಎಲ್ಲಾ ಆಸ್ತಿಪಾಸ್ತಿಗಳ, ಸಂಗ್ರಹಗಳ ಸಂಪತ್ತಿನ ಕ್ರೋಢೀಕರಣದ ವಾಂಛೆಯನ್ನು ತೂರಿ ನಿಮ್ಮನ್ನು ನಿಸ್ವಾರ್ಥಿಯನ್ನಾಗಿ ಮಾಡುವುದಾಗಿದೆ. ಇದೇ ವೇದಾಂತ. ಇದೇ ಸಮಾಜವಾದ. ಎರಡರ ಗುರಿಗಳೂ ಒಂದೇ.

ಸಮಾಜವಾದವು ಪ್ರಪಂಚ ವಸ್ತು – ವಿದ್ಯಮಾನ – ವ್ಯವಹಾರಗಳ ಮೇಲ್ಮೈಯ ವ್ಯಾಸಂಗವಾಗಿದ್ದರೆ; ವೇದಾಂತವು ಪ್ರಪಂಚ ವಿಲಾಸವನ್ನು ಸ್ವಾಭಾವಿಕವೂ ಸ್ಥಳೀಯವೂ ಆದ ದೃಷ್ಟಿಯಿಂದ ಪರಿಶೀಲಿಸುತ್ತದೆ.

ಆದ್ದರಿಂದ ವೇದಾಂತವನ್ನು ಜನರಿಂದ ದೂರ ಕೊಂಡೊಯ್ದು ಕೈಗುಟಕದ ಜಾಗದಲ್ಲಿ ಇಡಬಾರದು. ಜನರ ನಡುವೆ ಕೊಂಡೊಯ್ದು ಜನಹಿತಕ್ಕಾಗಿ ಬಳಸಬೇಕು. ‘ಪ್ರಾಕ್ಟಿಕಲ್ ವೇದಾಂತ’ ಎಂದರೆ ಇದೇ ಆಗಿದೆ.


Leave a Reply