ಸಂತ ತುಳಸೀದಾಸರ ‘ರಾಮ ಚರಿತ ಮಾನಸ’

ತುಳಸೀದಾಸರು ರಾಮಾಯಣವನ್ನು ಹಿಂದಿ ಭಾಷೆಯಲ್ಲಿ, ಅದು ಕೂಡ ಆಡುಮಾತಿನ ಹಿಂದೀ ಭಾಷೆಯಲ್ಲಿ ರಚಿಸಿ ದೊಡ್ಡ ಕ್ರಾಂತಿಯನ್ನೆ ಉಂಟು ಮಾಡಿದ್ದರು. ಅಲ್ಲಿಯವರೆಗೆ ಸಂಸ್ಕೃತ ಬಲ್ಲವರಿಂದ ಮಾತ್ರ ಓದಿಸಿ ಅರ್ಥ ತಿಳಿದುಕೊಳ್ಳಬೇಕಾದ ಪ್ರಮೇಯವಿತ್ತು. ತುಳಸೀ ರಾಮಾಯಣದ ರಚನೆಯ ಅನಂತರ ಜನಸಾಮಾನ್ಯರೂ ಅದನ್ನು ಬಾಯಿಪಾಠ ಮಾಡಿ ಕೇಳಿ – ಕೇಳಿಸಿ ಆನಂದಿಸುವಂತಾಯ್ತು.

ಮಂಗಲ್ ಭವನ್ ಅಮಂಗಲ್ ಹಾರೀ |
ದ್ರಬಹು ಸುದಸರಥ್ ಅಚರ್ ಬಿಹಾರೀ ||
ಹೈ ಸುಖಲದಾಯನಿ ರಾಮಾಯಣ್ ಸುಖ ಧಾಮ್ ಕೀ |
ಅದ್ಭುತ್ ಹೈ ಮಹಿಮಾ ದೋ ಅಕ್ಷರ್ ಕೆ ನಾಮ್ ||
ಸುನೋ ರಾಮ್ ಕಥಾ ಔರ್ ಜೈ ಬೋಲೋ ಶ್ರೀ ರಾಮ್ ಕೀ…

ಈ ಹಾಡು ಕೇಳುತ್ತಿದ್ದರೆ ಎಂಬತ್ತರ ದಶಕದಲ್ಲಿ ಹೊಸ ಅಲೆ ಎಬ್ಬಿಸಿದ್ದ ರಾಮಾಯಣ ಧಾರಾವಾಹಿ ನೆನಪಾಗುತ್ತದೆಯಲ್ಲವೆ? ಈ ಚರಣಗಳು ರಾಮಾಯಣ ಧಾರಾವಾಹಿಯ ಶೀರ್ಷಿಕೆ ಗೀತೆಯಾಗಿದ್ದವು. ಇವುಗಳನ್ನು ರಾಮಚರಿತ ಮಾನಸದಿಂದ ತೆಗೆದುಕೊಳ್ಳಲಾಗಿತ್ತು. ಕೇವಲ ಶೀರ್ಷಿಕೆ ಗೀತೆಯನ್ನು ಮಾತ್ರವಲ್ಲ, ಧಾರಾವಾಹಿಯ ಚಿತ್ರಕಥೆಗೂ ರಾಮಚರಿತ ಮಾನಸವೇ ಮೂಲ ಆಕರವಾಗಿದ್ದುದು. ಮೂಲ ರಾಮಾಯಣದ ವಸ್ತುವಿನೊಡನೆ ಕೆಲವು ಪ್ರಕ್ಷೇಪಗಳನ್ನೂ ಹೊಂದಿದ್ದ ರಾಮಚರಿತ ಮಾನಸ ಜನಮಾನಸವನ್ನು ಮತ್ತಷ್ಟು ಆಪ್ತವಾಗಿ ತಟ್ಟಿದ್ದು, ಭಾರತದ ಬಹುತೇಕ ಎಲ್ಲ ಭಾಷೆಗಳಿಗೂ ಅನುವಾದಗೊಂಡಿದ್ದು ಈಗ ಇತಿಹಾಸ.

ತುಳಸೀ ರಾಮಾಯಣ
ರಾಮಚರಿತ ಮಾನಸವನ್ನು ತುಳಸೀ ರಾಮಾಯಣ ಎಂದೂ ಕರೆಯಲಾಗುತ್ತದೆ. ಏಕೆಂದರೆ ಈ ಕೃತಿಯ ಕರ್ತೃ ಸಂತ ತುಳಸೀದಾಸರು. ಮೊಘಲ್ ಆಳ್ವಿಕೆಯ ಕಾಲದಲ್ಲಿ ಜೀವಿಸಿದ್ದ ತುಳಸೀದಾಸರು ರಾಮಾಯಣವನ್ನು ಹಿಂದಿ ಭಾಷೆಯಲ್ಲಿ, ಅದು ಕೂಡ ಆಡುಮಾತಿನ ಹಿಂದೀ ಭಾಷೆಯಲ್ಲಿ ರಚಿಸಿ ದೊಡ್ಡ ಕ್ರಾಂತಿಯನ್ನೆ ಉಂಟು ಮಾಡಿದ್ದರು. ಅಲ್ಲಿಯವರೆಗೆ ಸಂಸ್ಕೃತ ಬಲ್ಲವರಿಂದ ಮಾತ್ರ ಓದಿಸಿ ಅರ್ಥ ತಿಳಿದುಕೊಳ್ಳಬೇಕಾದ ಪ್ರಮೇಯವಿತ್ತು. ತುಳಸೀ ರಾಮಾಯಣದ ರಚನೆಯ ಅನಂತರ ಜನಸಾಮಾನ್ಯರೂ ಅದನ್ನು ಬಾಯಿಪಾಠ ಮಾಡಿ ಕೇಳಿ – ಕೇಳಿಸಿ ಆನಂದಿಸುವಂತಾಯ್ತು. ಎಲ್ಲ ವರ್ಗಗಳಿಗೂ ರಾಮನ ಗುಣಗಾನ ಮಾಡುವ ಅವಕಾಶ ಲಭ್ಯವಾಯಿತು. ಇದರಿಂದ ಉಂಟಾದ ಸಾಮಾಜಿಕ ಪರಿಣಾಮ ಅತಿ ಮಹತ್ವದ್ದು. ಇಂದಿಗೂ ಉತ್ತರ ಭಾರತದಲ್ಲಿ ತುಳಸೀ ರಾಮಾಯಣ ಜನಪ್ರಿಯವಾಗಿದೆ. ಬಹುತೇಕ ಆಸ್ತಿಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಇದರ ಪಾಠ ಮಾಡಿಸುವ ರೂಢಿ ಇದೆ.
ಇದು ಮಾತ್ರವಲ್ಲದೆ ಮಹಾ ರಾಮಭಕ್ತರಾಗಿದ್ದ ತುಳಸೀದಾಸರು ರಾಮಲಾಲ ನಹಾಚ್ಚು, ಭಾರವಿ ರಾಮಾಯಣ, ಜಾನಕಿ ಮಂಗಲ್, ರಾಮಾಗ್ಯ ಪ್ರಶ್ನ, ಪಾರ್ವತಿ ಮಂಗಲ್ ಕೃತಿಗಳನ್ನು ಅವಧಿ ಹಿಂದಿಯಲ್ಲಿಯೂ ಕೃಷ್ಣ ಗೀತಾವಲಿ, ಕವಿತಾವಲಿ, ದೋಹಾವಲಿ, ವಿನಯ ಪತ್ರಿಕಾ ಮೊದಲಾದ ಕೃತಿಗಳನ್ನು ಬ್ರಜ ಹಿಂದಿಯಲ್ಲಿಯೂ ರಚಿಸಿದ್ದಾರೆ. ಇವರ ರಚನೆಯ `ಹನುಮಾನ್ ಚಾಲೀಸ’ ಇಂದಿಗೂ ದೇಶಾದ್ಯಂತ ಹಿಂದೂ ಧರ್ಮೀಯರು ಕಂಠ ಪಾಠ ಮಾಡುವ ಗೀತೆಗಳಲ್ಲಿ ಒಂದಾಗಿದೆ. ಹನುಮಾನ್ ಸ್ತುತಿಯ ಈ ಗೀತೆ ಧೈರ್ಯ ಬಲಗಳನ್ನು ಕರುಣಿಸುವುದು ಎನ್ನಲಾಗುತ್ತದೆ.
ತುಳಸೀದಾಸರು ವಾಲ್ಮೀಕಿಯ ಪುನರವತಾರ ಎಂದೇ ಶ್ರದ್ಧಾವಂತರ ನಂಬಿಕೆ. ವಾಲ್ಮೀಕಿಯು ಕಲಿಯುಗದಲ್ಲಿ ದೇಶೀಯ ಭಾಷೆಯಲ್ಲಿ ಶ್ರೀ ರಾಮನ ಕೀರ್ತಿಗಳನ್ನು ಹಾಡಲು ವಾಲ್ಮೀಕಿಯು ಹನುಮಂತನಿಂದ ವರವನ್ನು ಪಡೆದನೆಂಬ ಉಲ್ಲೇಖ ಭವಿಷ್ಯಪುರಾಣದಲ್ಲಿ ಬರುತ್ತದೆ. ಭವಿಷ್ಯೋತ್ತರ ಪುರಾಣದ ಪ್ರತಿಸಾಗರ ಪರ್ವದ ಶ್ಲೋಕವೊಂದರಲ್ಲಿ ಶಿವನು ಪಾರ್ವತಿಗೆ ಇದರ ವಿವರ ನೀಡುತ್ತಾನೆ.

ರಾಮ್ ಬೋಲಾ!
ತುಳಸೀದಾಸರ ಬಾಲ್ಯದ ಹೆಸರು ರಾಮ್‌ಬೋಲಾ'. ಚಿಕ್ಕಂದಿನಿಂದಲೂ ರಾಮ ರಾಮ ಎನ್ನುತ್ತಲೇ ಇದ್ದುದರಿಂದ ಅದೇ ಹೆಸರನ್ನು ಅನ್ವರ್ಥವಾಗಿ ಇಡಲಾಯಿತು. ರಾಮ್‌ಬೋಲಾ ಕೂತಲ್ಲಿ ನಿಂತಲ್ಲಿ ಮೈಯಿಂದ ರಾಮನಾಮ ತಾನೇ ತಾನಾಗಿ ಹೊರಹೊಮ್ಮುತ್ತಿತ್ತು ಎನ್ನುತ್ತವೆ ಜನಪದ ಕಥೆಗಳು. ಅಷ್ಟರ ಮಟ್ಟಿಗೆ ಅವರು ತಮ್ಮ ಕಣಕಣದಲ್ಲೂ ರಾಮಸ್ಮರಣೆಯನ್ನೆ ತುಂಬಿಕೊAಡಿದ್ದರು. ತುಲಸಿದಾಸರು ವೈಷ್ಣವ ಸಿದ್ಧಾಂತದ ಅನುಯಾಯಿಗಳಾಗಿದ್ದರು. ಆದರೆ ಅವರಿಗೆ ಸಿದ್ಧಾಂತದ ತಾತ್ವಿಕತೆಗಿಂತ ಭಕ್ತಿಯೇ ಪ್ರಧಾನವಾಗಿತ್ತು. ರಾಮ ನಾಮ ಜಪದಲ್ಲಿ ಸದಾ ತಲ್ಲೀನರಾಗಿರುತ್ತಿದ್ದ ಅವರು ಅದರಲ್ಲೇ ಹೆಚ್ಚು ಆಸಕ್ತರಾಗಿರುತ್ತಿದ್ದರು. ತುಳಸೀದಾಸರು ರಾಮನಿಗಿಂತ ರಾಮನ ಹೆಸರೇ ದೊಡ್ಡದೆಂದು ಹೇಳುತ್ತಾರೆ.ರಾಮನ ಹೆಸರು ರಾಮನಿಂತ ಏಕೆ ದೊಡ್ಡದು? ಏಕೆಂದರೆ ರಾಮ ಎಂಬುದು ಮಂತ್ರ, ಒಂದು ಶಬ್ದ. ಇದನ್ನು ಪದೇ ಪದೇ ಜಪಿಸುವುದರಿಂದ ಒಬ್ಬರನ್ನು ಪ್ರಜ್ಞೆಯ ಉಚ್ಛಾçಯ ಸ್ಥಿತಿಗೆ ಕರೆದುಕೊಂಡು ಹೋಗಬಹುದು. ಆದ್ದರಿಂದ ನಮ್ಮನ್ನು ರಕ್ಷಿಸುವುದು ರಾಮನಲ್ಲ, ಬದಲಾಗಿ ರಾಮನ ಹೆಸರು. ಏಕೆಂದರೆ ಸ್ವತಃ ರಾಮನನ್ನು ಈ ಹೆಸರು ಹೊಂದಿದೆ. ಸ್ವತಃ ರಾಮನೆಂದರೆ ಪ್ರಪಂಚದ ಪ್ರತಿ ಅಣುವಿನಲ್ಲೂ ಈತ ಇದ್ದಾನೆ’ ಎಂದವರು ವಿವರಿಸುತ್ತಾರೆ.
ತುಳಸೀದಾಸರ ಎಲ್ಲ ಕೃತಿಗಳ ಉದ್ದೇಶ ರಾಮನ ಕುರಿತು ಭಕ್ತಿಯನ್ನು ಮೈಗೂಡಿಸುವುದಾಗಿದ್ದು, ರಾಮ ಮುಕ್ತಿಯ ಮಾರ್ಗ ಹಾಗೂ ಹುಟ್ಟು ಮತ್ತು ಸಾವುಗಳ ಸರಪಳಿಯಿಂದ ಮುಕ್ತರು, ಎಲ್ಲ ವರ್ಗದ ಜನರಿಗೂ ಉಚಿತ ಮತ್ತು ಮುಕ್ತವಾದ ಮುಕ್ತಿಯ ದಾರಿ `ರಾಮ ನಾಮ’ ಎಂಬAತೆ ಈ ಕೃತಿಗಳಲ್ಲಿ ಚಿತ್ರಿಸಿದ್ದಾರೆ.

ಕೆಲವು ಮೂಲಗಳು ತುಳಸೀದಾಸರು ರತ್ನಾವಲಿ ಎಂಬಾಕೆಯನ್ನು ಮದುವೆಯಾಗಿದ್ದರು ಎಂದು ಹೇಳುತ್ತವೆ. ಆಕೆಯ ಮೇಲೆ ವಿಪರೀತ ಮೋಹವಿರಿಸಿಕೊಂಡಿದ್ದ ತುಳಸೀದಾಸರು ಒಮ್ಮೆ ವಿಪರೀತ ಮಳೆ ಗಾಳಿಯಲ್ಲಿ ನೆರೆಯನ್ನೂ ಲೆಕ್ಕಿಸದೆ ಆಕೆಯ ತವರಿಗೆ ಹೋಗುತ್ತಾರೆ. ಅದನ್ನು ಕಂಡು ಗಾಬರಿಯಾಗುವ ಆಕೆ ಅವರಿಗೆ ಇಷ್ಟೇ ಉತ್ಕಟ ಪ್ರೇಮವನ್ನು ಭಗವಂತನಲ್ಲಿ ತೋರಿದ್ದರೆ ನೀವು ಮುಕ್ತಾತ್ಮರಾಗುತ್ತಿದ್ದಿರಿ ಎಂದು ಹೇಳುತ್ತಾಳೆ. ಇದರಿಂದ ಜ್ಞಾನೋದಯ ಹೊಂದಿದ ರಾಮ್‌ಬೋಲಾ ಆ ಕ್ಷಣವೆ ಸಂಸಾರ ತ್ಯಜಿಸಿ ಗುರುವನ್ನರಸುತ್ತ ಹೊರಡುತ್ತಾರೆ. ಮುಂದೆ ನರಹರಿ ದಾಸರನ್ನು ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸಿ ಸಾಧನೆಯಲ್ಲಿ ತೊಡಗುತ್ತಾರೆ.
ತುಳಸೀದಾಸರ ಕುರಿತಾಗಿ ಹಲವು ಪವಾಡಗಳು ಕೂಡ ಜಾನಪದ ಕಥೆಗಳಲ್ಲಿ ದಾಖಲಾಗಿವೆ.

Leave a Reply