“ಕೆಡುಕನ್ನುಂಟು ಮಾಡುವವರು ಎಷ್ಟು ಧರ್ಮಗಳನ್ನು ತಿಳಿದಿದ್ದರೂ ಅದರಿಂದ ಪ್ರಯೋಜನವಿಲ್ಲ” ಎನ್ನುತ್ತದೆ ಈ ಸುಭಾಷಿತ.
ಶ್ರೂಯತಾಂ ಧರ್ಮ ಸರ್ವಸ್ವಂ,
ಶ್ರುತ್ವಾಚ ಅವಧಾರ್ಯತಾಮ್ |
ಆತ್ಮನಃ ಪ್ರತಿಕೂಲಾನಿ
ನ ಪರೇಷಾಂ ಸಮಾಚರೇತ್ ||
ಎಲ್ಲಾ ಧರ್ಮ ಶಾಸ್ತ್ರ ಗಳನ್ನು ಓದಿದ್ದರೂ, ತಿಳಿದಿದ್ದರೂ, (ಕೇಳಿದ್ದರೂ, ಅದರಲ್ಲಿ ಏನೇ ಹೇಳಿದ್ದರೂ), ತನಗಾಗಲೀ ಬೇರೆಯವರಿಗೂ ಕೆಡುಕಾಗವ ಕಾರ್ಯವನ್ನು ಮಾಡಿದರೆ ಅಂಥ ತಿಳಿವಿನಿಂದ ಪ್ರಯೋಜನವಿಲ್ಲ. ನಮಗೆ ಯಾವುದು ಪ್ರತಿಕೂಲವೋ, ಹಾನಿಯನ್ನುಂಟು ಮಾಡುತ್ತದೆಯೋ ಅದು ಬೇರೆಯವರಿಗೂ ಹಾನಿ ಉಂಟು ಮಾಡುತ್ತದೆ ಎಂಬುದನ್ನು ಅರಿತಿರದ ಹೊರತು ಧರ್ಮಗ್ರಂಥಗಳ ಓದಿನಿಂದಾಗಲೀ ಧಾರ್ಮಿಕ ಬೋಧನೆಗಳ ಶ್ರವಣದಿಂದಾಗಲೀ ಏನುಪಯೋಗ?
ಧರ್ಮ ಇರುವುದು ಪಾಂಡಿತ್ಯದಲ್ಲಿ ಅಲ್ಲ, ನಮ್ಮ ನಡವಳಿಕೆಯಲ್ಲಿ. ಯಾರಿಗೂ ಹಾನಿ ಉಂಟಾಗದಂತೆ ಜೀವಿಸುವುದೇ ಧಾರ್ಮಿಕತೆ. ಇಷ್ಟನ್ನು ಅನುಸರಿಸುವ ವ್ಯಕ್ತಿ ಧಾರ್ಮಿಕ ಸಂಗತಿಗಳನ್ನು ತಿಳಿದಿರದೆ ಇದ್ದರೂ ಮಹಾನ್ ಧಾರ್ಮಿಕನೂ ಪುಣ್ಯವಂತನೂ ಆಗಿರುತ್ತಾನೆ.
~ ಇದು ಮೇಲಿನ ಸುಭಾಷಿತದ ಅಂತರಾರ್ಥ