ಸಾದಿ ಶಿರಾಝಿ ಹೇಳಿದ ಕಥೆ : tea time story

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ನಾನು ಚಿಕ್ಕವನಾಗಿದ್ದಾಗ ಭಕ್ತಿ ಮತ್ತು ಪ್ರಾರ್ಥನೆಗಳಲ್ಲಿ ಮುಳುಗಿಹೋಗಿದ್ದ ತುಂಬ ಧಾರ್ಮಿಕ ಮಗುವಾಗಿದ್ದೆ. ಒಂದು ರಾತ್ರಿ, ನಾನು ನನ್ನ ತೊಡೆಯ ಮೇಲೆ ಪವಿತ್ರ ಕುರಾನ್ ಇಟ್ಟುಕೊಂಡು ಪಠಣ ಮಾಡುತ್ತ ಅಪ್ಪನೊಂದಿಗೆ ಜಾಗರಣೆ ಮಾಡುತ್ತಿದ್ದಾಗ, ಆ ಕೋಣೆಯಲ್ಲಿದ್ದ ಬೇರೆ ಎಲ್ಲರೂ ತೂಕಡಿಸುತ್ತಿದ್ದರು ಮತ್ತು ಒಬ್ಬೊಬ್ಬರಾಗಿ ನಿದ್ದೆಗೆ ವಶರಾಗುತ್ತಿದ್ದರು.

ಇದನ್ನು ಗಮನಿಸಿ ಸಿಟ್ಟಿಗೆದ್ದ ನಾನು ಅಪ್ಪನ ಕಿವಿಯಲ್ಲಿ ಪಿಸುಗುಟ್ಟಿದೆ, “ ಇಲ್ಲಿ ತೂಕಡಿಸುತ್ತಿರುವ ಯಾರೊಬ್ಬರೂ ಕಣ್ಣು ತೆರೆಯಲು, ಪ್ರಾರ್ಥನೆ ಮಾಡಲು ಅರ್ಹರಲ್ಲ. ಇವರೆಲ್ಲ ಸತ್ತ ಮನುಷ್ಯರಿಗೆ ಸಮಾನ”

ಅಪ್ಪ, ನನ್ನ ತಲೆಯ ಮೇಲೆ ಕೈಯಾಡಿಸಿ ಹೇಳಿದ, “ ಸಾದಿ, ನೀನೂ ಒಂದಿಷ್ಟು ಹೊತ್ತು ಮಲಗಿಕೊಂಡಿದ್ದರೆ ಎಷ್ಟು ಚೆನ್ನಾಗಿತ್ತು, ಹೀಗೆ ನನ್ನ ಕಿವಿಯಲ್ಲಿ ಅಸಹನೆಯಿಂದ ಪಿಸುಗುಡುವುದರ ಬದಲು!”

Leave a Reply