ನೆನ್ನೆ ಸೂಫಿ ಸಂತಕವಿ ಸಾದಿ ಶಿರಾಜಿ ಹೇಳಿದಕಥೆಯೊಂದನ್ನು ಓದಿದ್ದೀರಿ. ಇವತ್ತು ಇನ್ನೊಂದು…! । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಇದು ಒಬ್ಬ ಸುಲ್ತಾನನ ಕಥೆ. ಒಮ್ಮೆ ಒಬ್ಬ ಸುಲ್ತಾನನಿಗೆ ಕನಸು ಬಿತ್ತು. ಕನಸಿನಲ್ಲಿ ಅವನು, ರಾಜನೊಬ್ಬ ಸ್ವರ್ಗದಲ್ಲಿ ಸಕಲ ಸಂತೋಷಗಳನ್ನು ಅನುಭವಿಸುವುದನ್ನೂ ಮತ್ತು ದರ್ವೇಶಿಯೊಬ್ಬ ನರಕದಲ್ಲಿ ಕಷ್ಟ ಪಡುತ್ತಿರುವುದನ್ನೂ ಗಮನಿಸಿದ.
ಈ ಕನಸಿನ ಬಗ್ಗೆ ಸುಲ್ತಾನ ಬಹಳ ತಲೆ ಕೆಡೆಸಿಕೊಂಡ ಮತ್ತು ಕನಸಿನ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಿದ. ಸುಲ್ತಾನನ ಪ್ರಕಾರ ದರ್ವೇಶಿ ಸ್ವರ್ಗದಲ್ಲಿರಬೇಕಿತ್ತು ಆದರೆ ಕನಸಿನಲ್ಲಿ ದರ್ವೇಶಿ ನರಕದಲ್ಲಿದ್ದ. ಹೀಗೆ ಸುಲ್ತಾನ ಯೋಚಿಸುತ್ತಿರುವಾಗಲೇ, ಅವನಿಗೆ ಒಂದು ಧ್ವನಿ ಉತ್ತರಿಸಿತು,
“ ಸುಲ್ತಾನ ನೀನು ಈಗ ಸ್ವರ್ಗದಲ್ಲಿರುವೆ ದರ್ವೇಶಿಗಳ ಬಗ್ಗೆ ಗೌರವ ಭಾವನೆ ಹೊಂದಿರುವ ಕಾರಣವಾಗಿ. “
ಆ ಧ್ವನಿ ತನ್ನ ಉತ್ತರ ಮುಂದುವರೆಸಿತು,
“ ದರ್ವೇಶಿ ನರಕದಲ್ಲಿರುವ ಕಾರಣ ಅವನಿಗೆ ರಾಜನ ಬಗ್ಗೆ ಒಳ್ಳೆಯ ಭಾವನೆ ಇಲ್ಲದಿರುವುದು. “