ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ: https://aralimara.wordpress.com/2023/06/04/fromm-27/
ಅಸ್ತಿತ್ವದ having ವಿಧಾನದ ಸ್ವಭಾವ (ಪ್ರಕೃತಿ), ಖಾಸಗೀ ಆಸ್ತಿಯ ಸ್ವಭಾವವನ್ನು ಅನುಸರಿಸುತ್ತದೆ. ಅಸ್ತಿತ್ವದ ಈ ವಿಧಾನದಲ್ಲಿ, ಯಾವುದು ಮುಖ್ಯ ಎಂದರೆ, ನಾನು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ನಾನು ಸ್ವಾಧೀನಪಡಿಸಿಕೊಂಡಿರುವುದನ್ನ ಇಟ್ಟುಕೊಳ್ಳಲು ನನಗಿರುವ ಅಪರಿಮಿತ ಹಕ್ಕುಗಳು. Having ವಿಧಾನ ಇತರರನ್ನು ಪ್ರತ್ಯೇಕಿಸಿ ಹೊರಗಿಡುತ್ತದೆ; ನನ್ನ ಆಸ್ತಿಯನ್ನ ಸಂಭಾಳಿಸಿ ಇಟ್ಟುಕೊಳ್ಳುವುದಕ್ಕೆ ಅಥವಾ ಆಸ್ತಿಯನ್ನು ಪ್ರೊಡಕ್ಟಿವ್ ಆಗಿ ಬಳಸಲು ಈ ವಿಧಾನದ ಪ್ರಕಾರ ನಾನು ಮುಂದೆ ಯಾವ ಪ್ರಯತ್ನವನ್ನೂ ಮಾಡಬೇಕಿಲ್ಲ. ಬುದ್ಧ, ಈ ವಿಧಾನದ ನಡುವಳಿಕೆಯನ್ನ (behaviour) ತೀವ್ರ ಬಯಕೆ (craving) ಎಂದು ಹೇಳಿದರೆ, ಕ್ರಿಶ್ಚಿಯನ್ ಮತ್ತು ಜ್ಯೂಯಿಶ್ ಧರ್ಮಗಳು ಇದನ್ನ ಅಪೇಕ್ಷೆ, ಹಂಬಲ (coveting) ಎಂದು ಬಣ್ಣಿಸುತ್ತವೆ. ಇದು ಎಲ್ಲರನ್ನೂ ಮತ್ತು ಎಲ್ಲವನ್ನೂ ಸತ್ತ ಸಂಗತಿಯಾಗಿ ಮತ್ತು ಇನ್ನೊಬ್ಬರ ಅಧಿಕಾರಕ್ಕೆ ಒಳಗಾಗುವ ಸಂಗತಿಯಾಗಿ ಮಾರ್ಪಾಡು ಮಾಡುತ್ತದೆ.
“I have something “ ಎನ್ನುವ ವಾಕ್ಯ, ಸಬ್ಜೆಕ್ಟ್ I ( or he, we, you, they) ಮತ್ತು ಆಬ್ಜೆಕ್ಟ್ O ಗಳ ನಡುವಿನ ಸಂಬಂಧವನ್ನು ಅಭಿವ್ಯಕ್ತಿಸುತ್ತದೆ. ಈ ವಾಕ್ಯದ ಪ್ರಕಾರ, ಇಲ್ಲಿ ಸಬ್ಜೆಕ್ಟ್ ಮತ್ತು ಆಬ್ಜೆಕ್ಟ್ ಎರಡೂ ಶಾಶ್ವತ ಸಂಗತಿಗಳು. ಆದರೆ ಸಬ್ಜೆಕ್ಟ್ ಗೆ ಶಾಶ್ವತ ಆಗುವಂಥ ಯಾವದಾದರೂ ಅವಕಾಶಗಳಿವೆಯೇ? ನಾನು ಸಾಯಬಹುದು; ನಾನು ಹೊಂದಿರುವುದನ್ನ ಖಾತರೀಪಡಿಸುವ ಸಾಮಾಜಿಕ ಸ್ಥಾನಮಾನವನ್ನ ನಾನು ಕಳೆದುಕೊಳ್ಳಬಹುದು. ಹಾಗೆಯೇ ಆಬ್ಜೆಕ್ಟ್ ಕೂಡ ಶಾಶ್ವತ ಅಲ್ಲ : ಅದನ್ನ ನಾಶ ಮಾಡಬಹುದು, ಅಥವಾ ಅದನ್ನ ಕಳೆದುಕೊಳ್ಳಬಹುದು, ಅಥವಾ ಅದು ತನ್ನ ಮೌಲ್ಯ ಕಳೆದುಕೊಳ್ಳಬಹುದು. ಯಾವುದನ್ನಾದರೂ ಶಾಶ್ವತವಾಗಿ ಹೊಂದುವುದು ಎಂದರೆ, ಶಾಶ್ವತದ ಭ್ರಮೆಯ ಮೇಲೆ ಮತ್ತು ಅವಿನಾಶಿ (indestructible) ಸಂಗತಿಯ ಮೇಲೆ ನಂಬಿಕೆಯನ್ನ ಇಡುವುದು. ನಾನು ಎಲ್ಲವನ್ನೂ ಹೊಂದಿದ್ದೇನೆಂದು ನನಗನಿಸುತ್ತಿದ್ದರೆ, ವಾಸ್ತವದಲ್ಲಿ ನಾನು ಏನನ್ನೂ ಹೊಂದಿಲ್ಲ ಏಕೆಂದರೆ, ನಾನು ಹೊಂದುವುದು, ನನ್ನದಾಗಿಸಿಕೊಳ್ಳುವುದು, ಮತ್ತು ಅದರ ಮೇಲೆ ಹತೋಟಿ ಸಾಧಿಸುವುದು ಬದುಕಿನ ಪ್ರಕ್ರಿಯೆಯಲ್ಲಿನ ಕ್ಷಣಿಕ ಗಳಿಗೆಗಳು ಮಾತ್ರ.
ಹಿಂದಿನ ವಿಶ್ಲೇಷಣೆ , “ I (subject) have O (object) ” ಹೇಳಿಕೆಯಲ್ಲಿ, I ನ ಡೆಫಿನಿಷನ್ ನ, O ಎನ್ನುವ ಸಂಗತಿಯನ್ನ ನಾನು ಹೊಂದುವುದರ ಮೂಲಕ ಅಭಿವ್ಯಕ್ತಿಸಲಾಗುತ್ತದೆ. ಇಲ್ಲಿ ಸಬ್ಜೆಕ್ಟ್ “myself” ಅಲ್ಲ, ಬದಲಾಗಿ ಸಬ್ಜೆಕ್ಟ್ “I am what I have”. ಇಲ್ಲಿ ಆಸ್ತಿ , ನಾನು (myself) ಮತ್ತು ನನ್ನ ಐಡೆಂಟಿಟಿ ಎರಡನ್ನೂ ಒಳಗೊಂಡಿದೆ. “I am I” ಎನ್ನುವ ಹೇಳಿಕೆಯಲ್ಲಿನ ಮೂಲಭೂತ ವಿಚಾರ “ I am I because I have X” – X ಎಂದರೆ ಎಲ್ಲ ಸ್ವಾಭಾವಿಕ ವಸ್ತುಗಳು, ಸಂಗತಿಗಳು ಮತ್ತು ವ್ಯಕ್ತಿಗಳು, ಯಾರ ಜೊತೆ ನಾನು ಅವರನ್ನು ಅಥವಾ ಅವನ್ನು ಶಾಶ್ವತವಾಗಿ ನನ್ನದಾಗಿಸಿಕೊಳ್ಳಲು ಅವರ/ ಅವುಗಳ ಮೇಲೆ ಹತೋಟಿ ಹೊಂದುವ ಮೂಲಕ ಸಂಬಂಧ ಹೊಂದಿದ್ದೇನೆಯೋ ಅವರು/ಅವು.
Having ಜೀವನ ವಿಧಾನದಲ್ಲಿ, ನನ್ನ ಮತ್ತು ನಾನು ಹೊಂದಿರುವ ಸಂಗತಿಗಳ ನಡುವೆ ಯಾವ ಜೀವಂತ ಸಂಬಂಧವೂ ಇಲ್ಲ. ನಾನು ಮತ್ತು ಅವು ಈಗ ವಸ್ತುಗಳಾಗಿಬಿಟ್ಟಿದ್ದೇವೆ, ಮತ್ತು ನಾನು ಅವನ್ನ ಹೊಂದಿರುವುದು ಏಕೆಂದರೆ, ನನ್ನ ಬಳಿ ಅವನ್ನ ನನ್ನದಾಗಿಸಿಕೊಳ್ಳುವ ಸಾಮರ್ಥ್ಯ ಇದೆ. ಆದರೆ ನಮ್ಮ ನಡುವೆ ಒಂದು ರಿವರ್ಸ್ ಸಂಬಂಧವೂ ಇದೆ : ಅದು ಕೂಡ ನನ್ನನ್ನ ಹೊಂದಿದೆ ಏಕೆಂದರೆ, ವಿವೇಕದ ಕುರಿತಾದ ನನ್ನ ಸೆನ್ಸ್ ಆಫ್ ಐಡೆಂಟಿಟಿ ನಿರ್ಭರವಾಗಿರುವುದು ನಾನು ಅದನ್ನ ಹೊಂದಿರುವುದರ ಕಾರಣದ ಮೇಲೆ (ಮತ್ತು ಅವು ಎಷ್ಟೋ ಸಂಗತಿಗಳಾಗಿರಬಹುದು). ಅಸ್ತಿತ್ವದ having ವಿಧಾನ ಸಬ್ಜೆಕ್ಟ್ ಮತ್ತು ಆಬ್ಜೆಕ್ಟ್ ಗಳ ನಡುವಿನ ಜೀವಂತ, ಮತ್ತು ಸೃಜನಶೀಲ ಪ್ರಕ್ರಿಯೆಯ ಕಾರಣವಾಗಿ ಸ್ಥಾಪಿತವಾಗಿಲ್ಲ ; ಅದು ಸಂಗತಿಗಳನ್ನ (ವಸ್ತುಗಳನ್ನ) ಸಬ್ಜೆಕ್ಟ್ ಮತ್ತು ಆಬ್ಜೆಕ್ಟ್ ಎರಡೂ ಆಗಿಸಬಲ್ಲದು. ಇದೊಂದು ಚಲನಶೀಲವಲ್ಲದ ಸಂಬಂಧ, ಯಾವ ಜೀವಂತಿಕೆಯೂ ಇಲ್ಲದಂತಹದು.
*******************************


[…] Previous […]
LikeLike