ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/07/23/fromm-39/
Being as Reality
ಇಲ್ಲಿಯವರೆಗೆ ನಾನು being ನ ವಿವರಿಸಲು ಪ್ರಯತ್ನ ಮಾಡಿದ್ದು having ನ ಎದುರು ಇಟ್ಟುಕೊಂಡು. ಆದರೆ being ನ ಎರಡನೇಯ ಆದರೆ ಅಷ್ಟೇ ಮುಖ್ಯವಾದ ಅರ್ಥ ನಮಗೆ ಗೊತ್ತಾಗುವುದು ಅದನ್ನ ನಾವು “ಕಾಣಿಸಿಕೊಳ್ಳುವಿಕೆ” ಯ (appearing) ಎದುರು ಇಟ್ಟು ನೋಡಿದಾಗ. ನಾನು ಕರುಣಾಮಯಿಯಂತೆ ಕಾಣಿಸಿಕೊಳ್ಳುತ್ತೇನೆ ಆದರೆ ನನ್ನ ಈ ಕರುಣೆ ನನ್ನ ಶೋಷಣಾತ್ಮಕ ಧೋರಣೆಯ ಮುಖವಾಡ ಮಾತ್ರ ಆಗಿದ್ದರೆ – ನಾನು ನನ್ನ ದೇಶವನ್ನು ಪ್ರೀತಿಸುವಂತೆ ಕಾಣಿಸಿಕೊಳ್ಳುತ್ತೇನೆ ಆದರೆ, ನಾನು ಹೀಗೆ ಕಾಣಿಸಿಕೊಳ್ಳುವುದು ಕೇವಲ ನನ್ನ ಸ್ವಹಿತಾಸಕ್ತಿಗಳನ್ನು ಪೋಷಿಸುವುದಕ್ಕಾಗಿದ್ದರೆ, ನನ್ನ ಈ ಕಾಣಿಸಿಕೊಳ್ಳುವಿಕೆ, ನನ್ನ ಈ ರೀತಿಯ ಬಹಿರಂಗದ ವರ್ತನೆಗಳು, ನನ್ನನ್ನು ಪೋಷಿಸುತ್ತಿರುವ ವಾಸ್ತವದ ಒತ್ತಡಗಳಿಗೆ ತೀವ್ರವಾಗಿ ವೈರುಧ್ಯದಲ್ಲಿವೆ. ನನ್ನ ವರ್ತನೆ ನನ್ನ ಸ್ವಭಾವಕ್ಕಿಂತ ಭಿನ್ನವಾಗಿದೆ. ನನ್ನ ಸ್ವಭಾವದ ಸಂರಚನೆ, ನನ್ನ ವರ್ತನೆಯ ನಿಜವಾದ ಪ್ರೇರಣೆಗಳು, ನನ್ನ ವಾಸ್ತವದ being ನ ರೂಪಿಸುತ್ತಿವೆ. ನನ್ನ ವರ್ತನೆಗಳು ಭಾಗಶಃ ನನ್ನ being ನ ಪ್ರತಿಬಿಂಬಿಸುತ್ತಿರಬಹುದು ಆದರೆ ಇದು ಬಹುತೇಕ ನನ್ನ ಉದ್ದೇಶಗಳನ್ನು ಸಾಧಿಸಲು ನಾನು ಹಾಕಿಕೊಂಡಿರುವ ಮುಖವಾಡ. ವರ್ತನಾವಾದ (behaviourism) ಈ ಮುಖವಾಡವನ್ನು ವೈಜ್ಞಾನಿಕ ಆಧಾರ ಎನ್ನುವಂತೆ ಪರಿಗಣಿಸಿ ವ್ಯವಹರಿಸುತ್ತದೆ ; ಒಳಗಿನ ವಾಸ್ತವಿಕತೆ, ಯಾವುದು ಬಹುತೇಕ ಎಚ್ಚರದ ಸ್ಥಿತಿಯಲ್ಲವೋ (not conscious ) ಯಾವುದನ್ನ ಗಮನಿಸುವುದು ಸಾಧ್ಯವಿಲ್ಲವೋ (not observable) ಅದರ ಮೇಲೆ ತನ್ನ ನೈಜ ಒಳನೋಟಗಳನ್ನ ಫೋಕಸ್ ಮಾಡುತ್ತದೆ. Being ನ ಇಂಥ “ಮುಖವಾಡ ಕಳಚುವಿಕೆಯ” (unmasking) ಪರಿಕಲ್ಪನೆಯನ್ನ Eckhart ಅಭಿವ್ಯಕ್ತಿಸಿದ್ದಾನೆ, ಮತ್ತು ಇದು ಸ್ಪಿನೊಜ ಮತ್ತು ಮಾರ್ಕ್ಸ್ ರ ವಿಚಾರಸರಣಿಯ ಕೇಂದ್ರ ವಿಷಯವಾಗಿದೆ ಹಾಗು ಫ್ರಾಯ್ಡ್ ನ ಮೂಲಭೂತ ಅನ್ವೇಷಣೆಯಾಗಿದೆ.
ವರ್ತನೆ ಮತ್ತು ಸ್ವಭಾವ ಹಾಗು ನನ್ನ ಮುಖವಾಡ ಮತ್ತು ನಾನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ನನ್ನ ವಾಸ್ತವ, ಇವುಗಳ ನಡುವಿನ ವ್ಯತ್ಯಾಸವನ್ನು
ತಿಳಿದುಕೊಳ್ಳುವುದು ಫ್ರಾಯ್ಡ್ ನ ಮನೋವಿಶ್ಲೇಷಣೆಯ ಬಹು ಮುಖ್ಯ ಸಾಧನೆ. ಫ್ರಾಯ್ಡ್ ಬಾಲ್ಯದಲ್ಲಿ ಹತ್ತಿಕ್ಕಲ್ಪಟ್ಟ ಮನುಷ್ಯರ ಸಹಜವಾದ (instinctual) ಬಯಕೆಗಳನ್ನು (ಮೂಲಭೂತವಾಗಿ ಲೈಂಗಿಕ) ಅನಾವರಣಗೊಳಿಸುವ ಸಲುವಾಗಿ ವಿಧಾನವೊಂದನ್ನು (free association, analysis of dreams, transference, resistance) ರೂಪಿಸಿದ. ಮನೋವಿಶ್ಲೇಷಣೆಯ ಸಿದ್ಧಾಂತ ಮತ್ತು ಚಿಕಿತ್ಸೆಯ ಮುಂದಿನ ಬೆಳವಣಿಗೆಗಳು, ಸಹಜ ಬದುಕಿನ (instinctual life) ಬದಲಾಗಿ, ಮುಂಚಿನ ವೈಯಕ್ತಿಕ ಸಂಬಂಧಗಳ ವಲಯದಲ್ಲಿ ಘಟಿಸಿದ ಆಘಾತಕಾರಿ ಘಟನೆಗಳ ಮೇಲೆ ಒತ್ತು ನೀಡುತ್ತವೆಯಾದರೂ ಮೂಲ ಸಿದ್ಧಾಂತದಲ್ಲಿ ಯಾವ ಬದಲಾವಣೆಯೂ ಇಲ್ಲ : ಯಾವುದನ್ನ ಹತ್ತಿಕ್ಕಲಾಗಿದೆಯೋ ಅದು ಮುಂಚಿನದು ಮತ್ತು – ನನ್ನ ನಂಬಿಕೆಯ ಪ್ರಕಾರ ನಂತರದ ಆಘಾತಕಾರಿ ಬಯಕೆಗಳು ಮತ್ತು ಭಯಗಳು; ಈ ಎಲ್ಲ ಲಕ್ಷಣಗಳಿಂದ ಅಥವಾ ಹೆಚ್ಚು ಸಾಮಾನ್ಯ ಅಸ್ವಸ್ಥತೆಯಿಂದ ( general malaise) ಗುಣವಾಗಿ ಹೊರ ಬರುವ ದಾರಿ ಇರುವುದು ಹತ್ತಿಕ್ಕಲಾಗಿರುವ ಸಂಗತಿಗಳನ್ನು ಅನಾವರಣಗೊಳಿಸುವಲ್ಲಿ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಯಾವುದನ್ನ ಹತ್ತಿಕ್ಕಲಾಗಿದೆಯೋ ಅದು ಅತಾರ್ಕಿಕ ಮತ್ತು ಶೈಶವಕ್ಕೆ , ಹಾಗು ಅನುಭವದ ವೈಯಕ್ತಿಕ ಅಂಶಗಳಿಗೆ ಸಂಬಂಧಿಸಿದ್ದು.
ಇನ್ನೊಂದು ಬದಿಯಲ್ಲಿ, ಸಾಮಾಜಿಕವಾಗಿ ಸ್ವೀಕೃತವಾದ, ಸಾಮಾನ್ಯ ಎಂಬಂಥ ವಿಷಯಗಳ ಕುರಿತಾದ ಕಾಮನ್ ಸೆನ್ಸ್ ನೋಟ ಏನೆಂದರೆ, ನಾಗರೀಕರು rational ಆಗಿರಬೇಕು ಮತ್ತು ಅವರಿಗೆ ಆಳ ವಿಶ್ಲೇಷಣೆಯ ಅವಶ್ಯಕತೆಯಿಲ್ಲ ಎನ್ನುವುದು. ಆದರೆ ಇದು ನಿಜ ಅಲ್ಲವೇ ಅಲ್ಲ. ನಮ್ಮ ಪ್ರಜ್ಞಾಪೂರ್ವಕ ಪ್ರೇರಣೆಗಳು (conscious motivations),
ಐಡಿಯಾಗಳು, ಮತ್ತು ನಂಬಿಕೆಗಳು, ತಪ್ಪು ಮಾಹಿತಿಯ, ಪಕ್ಷಪಾತದ, ಅತಾರ್ಕಿಕ ಉತ್ಕಟತೆಗಳ, ತರ್ಕಬದ್ಧಗೊಳಿಸುವಿಕೆಯ, ಪೂರ್ವಾಗ್ರಹಗಳ ಸಮ್ಮಿಶ್ರಣ. ಈ ಸಮ್ಮಿಶ್ರಣದಲ್ಲಿ ಸತ್ಯದ ತುಣುಕುಗಳು ಈಸಾಡುತ್ತ (ತಪ್ಪು ಆದಾಗ್ಯೂ) ಇಡೀ ಮಿಶ್ರಣ ಸತ್ಯ ಮತ್ತು ನಿಜ ಎನ್ನುವ ಆಶ್ವಾಸನೆಯನ್ನ ಕೊಡುತ್ತವೆ. ಆಲೋಚನಾ ಪ್ರಕ್ರಿಯೆ ಈ ಇಡೀ ಭ್ರಮೆಗಳ ಕೊಚ್ಚೆಗುಂಡಿಯನ್ನ ತರ್ಕದ ನಿಯಮಗಳು ಮತ್ತು ಸಂಭವನೀಯತೆಯ (plausibility ) ಪ್ರಕಾರ ಸಂಘಟಿಸುವ ಪ್ರಯತ್ನ ಮಾಡುತ್ತದೆ. ಪ್ರಜ್ಞೆಯ ಈ ಹಂತ ಸತ್ಯವನ್ನ ಪ್ರತಿಫಲಿಸಬೇಕಿತ್ತು ; ಇದು ನಮ್ಮ ಬದುಕನ್ನ ಆರ್ಗನೈಸ್ ಮಾಡಿಕೊಳ್ಳಲು ನಾವು ಬಳಸುವ ನಕ್ಷೆ. ಈ ತಪ್ಪು ನಕಾಶೆಯನ್ನ ಹತ್ತಿಕ್ಕಲಾಗಿಲ್ಲ. ಯಾವುದನ್ನ ಹತ್ತಿಕ್ಕಲಾಗಿದೆಯೆಂದರೆ ಸತ್ಯದ ಕುರಿತಾದ ತಿಳುವಳಿಕೆಯನ್ನ, ಯಾವುದು ಸತ್ಯ ಎನ್ನುವ ತಿಳುವಳಿಕೆಯನ್ನ ಹತ್ತಿಕ್ಕಲಾಗಿದೆ. Unconscious ಎಂದರೆ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಏನಿರಬೇಕೆಂದರೆ ; ಅತಾರ್ಕಿಕ ಉತ್ಕಟತೆಗಳಿಂದ ಹೊರತಾದ (aside from irrational passion) ಬಹುತೇಕ ಇಡೀ ಸತ್ಯದ ಕುರಿತಾದ ತಿಳುವಳಿಕೆ. Unconscious ನ ಮೂಲಭೂತವಾಗಿ ನಿರ್ಧರಿಸುವುದು ಸಮಾಜ, ಅದು ಅತಾರ್ಕಿಕ ಉತ್ಕಟತೆಗಳನ್ನು ಉತ್ಪಾದಿಸಿ ತನ್ನ ಸದಸ್ಯರುಗಳಿಗೆ ವಿವಿಧ ಬಗೆಯ ಕಾಲ್ಪನಿಕತೆಗಳನ್ನು ಲಭ್ಯ ಮಾಡುತ್ತದೆ ಮತ್ತು ಸತ್ಯವನ್ನು ಆರೋಪಿತ ತಾರ್ಕಿಕತೆಯ (alleged rationality) ಕೈದಿಯನ್ನಾಗಿಸುತ್ತದೆ.
1 Comment