ವಾಸ್ತವಿಕತೆ (ಭಾಗ 2) :To have or to be #44

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/07/29/fromm-40/

Being as Reality (ಮುಂದುವರೆದ ಭಾಗ)

ಸತ್ಯವನ್ನ ಹತ್ತಿಕ್ಕಲಾಗಿದೆ ಎನ್ನುವ ಹೇಳಿಕೆಯ ಹಿಂದಿರುವ ಮನೋಭಾವ ಏನೆಂದರೆ, ನಮಗೆ ಸತ್ಯ ಗೊತ್ತು ಎನ್ನುವ ತಿಳುವಳಿಕೆ ಮತ್ತು ಸತ್ಯವನ್ನು ಹತ್ತಿಕ್ಕಲಾಗಿದೆ ಎಂದರೆ ಪ್ರಜ್ಞೆಗೆ ಹೊರತಾದ ಸತ್ಯ (unconscious knowledge) ಇದೆ ಎನ್ನುವ ತಿಳುವಳಿಕೆ. ಸ್ವತಃ ನನ್ನ ಜೊತೆಗಿನ ಮತ್ತು ಇತರರೊಂದಿಗಿನ ನನ್ನ ಮನೋವಿಶ್ಲೇಷಣೆಗೆ ಸಂಬಂಧಿಸಿದಂತೆ ನನ್ನ ಅನುಭವ ಏನೆಂದರೆ, ಇದು ಖಂಡಿತ ಸತ್ಯ. ನಾವು ಸತ್ಯವನ್ನು ಗ್ರಹಿಸುತ್ತೇವೆ ಮತ್ತು ಅದನ್ನು ಗ್ರಹಿಸದೇ ಬೇರೆ ದಾರಿಯೇ ಇಲ್ಲ. ಹೇಗೆ ನಮ್ಮ ಇಂದ್ರಿಯಗಳಿಗೆ ಕೇಳುವ, ವಾಸನೆ ನೋಡುವ, ನೋಡುವ, ಮುಟ್ಟುವ ಸಾಧ್ಯತೆಯನ್ನ ಕಲ್ಪಿಸಲಾಗಿದೆಯೋ ಹಾಗೆಯೇ, ನಾವು ಸತ್ಯಕ್ಕೆ ಹತ್ತಿರವಾದಾಗ ನಮ್ಮ ವಿವೇಕಕ್ಕೆ ಆ ಸತ್ಯವನ್ನ ಗ್ರಹಿಸುವ ಸಾಧ್ಯತೆಯನ್ನ ಕಲ್ಪಿಸಲಾಗಿದೆ, ಹಾಗೆಂದರೆ ಇರುವುದನ್ನ ಇದ್ದ ಹಾಗೆಯೇ ನೋಡುವ, ಸತ್ಯವನ್ನ ಗ್ರಹಿಸುವ ಸಾಮರ್ಥ್ಯ ಮನುಷ್ಯರಿಗಿದೆ. ಹೀಗೆ ಹೇಳಿದ ಮಾತ್ರಕ್ಕೆ ನಾನು ಸತ್ಯವನ್ನು ಗ್ರಹಿಸಲು ವೈಜ್ಞಾನಿಕ ಸಲಕರಣೆಗಳು, ವಿಧಾನಗಳು ಅವಶ್ಯವಾಗಿರುವ ಸಂಗತಿಗಳ ಬಗ್ಗೆ ಇಲ್ಲಿ ರೆಫರ್ ಮಾಡುತ್ತಿಲ್ಲ. ನಾನು ಹೇಳುತ್ತಿರುವುದು ಯಾವುದನ್ನ ಏಕಾಗ್ರತೆಯಿಂದ “ನೋಡುವುದರ” ಮೂಲಕ ಗುರುತಿಸಬಹುದೋ ವಿಶೇಷವಾಗಿ ನಮ್ಮ ಒಳಗಿನ ನಿಜ ಮತ್ತು ಇನ್ನೊಬ್ಬರೊಳಗಿನ ನಿಜ, ಅಂಥದರ ಬಗ್ಗೆ ಹೇಳುತ್ತಿದ್ದೇನೆ. ನಮಗೆ ಗೊತ್ತಾಗುತ್ತದೆ, ಅಪಾಯಕಾರಿ ಮನುಷ್ಯನನ್ನು ಭೇಟಿ ಮಾಡಿದಾಗ, ನಾವು ಯಾರನ್ನ ಸಂಪೂರ್ಣವಾಗಿ ನಂಬುತ್ತೇವೆಯೋ ಅಂಥವರನ್ನು ಭೇಟಿ ಮಾಡಿದಾಗ; ನಮಗೆ ಸುಳ್ಳು ಹೇಳಿರುವ ಬಗ್ಗೆ, ನಮ್ಮನ್ನು ಶೋಷಣೆ ಮಾಡಿರುವ ಬಗ್ಗೆ ಅಥವಾ ಮೂರ್ಖರನ್ನಾಗಿಸಿರುವ ಬಗ್ಗೆ ನಮಗೆ ಗೆೊತ್ತಾಗುತ್ತದೆ. ಮನುಷ್ಯ ನಡುವಳಿಕೆಯ ಬಗ್ಗೆ ಯಾವುದು ಮುಖ್ಯವೋ ಅದೆಲ್ಲವೂ ನಮಗೆ ಗೊತ್ತಾಗುತ್ತದೆ, ಹೇಗೆ ನಮ್ಮ ಪೂರ್ವಿಕರಿಗೆ ನಕ್ಷತ್ರಗಳ ಚಲನೆಯ ಬಗ್ಗೆ ಅಸಾಮಾನ್ಯ ತಿಳುವಳಿಕೆ ಇತ್ತೋ ಹಾಗೆ. ಆದರೆ ಅವರು ತಮ್ಮ ತಿಳುವಳಿಕೆಯ ಬಗ್ಗೆ ಅರಿವು ಹೊಂದಿದ್ದರು ಮತ್ತು ಅದನ್ನ ಬಳಕೆ ಮಾಡಿದರು, ಆದರೆ ನಾವು ಕೂಡಲೇ ನಮ್ಮ ತಿಳುವಳಿಕೆಯನ್ನ ಹತ್ತಿಕ್ಕಿಬಿಡುತ್ತೇವೆ ಏಕೆಂದರೆ, ಅದು conscious ಆಗಿದ್ದರೆ ಅದು ನಮ್ಮ ಬದುಕನ್ನ ಕಠಿಣ ಮಾಡಿಬಿಡುತ್ತದೆ ಮತ್ತು, ನಾವು ನಮ್ನನ್ನು ಗ್ರಹಿಸುವುದು ಹಾಗೆಯೇ , ತುಂಬ “ಅಪಾಯಕಾರಿ” ಎಂದು.

ಈ ಹೇಳಿಕೆಗೆ ರುಜುವಾತನ್ನ ತುಂಬ ಸುಲಭವಾಗಿ ಹುಡುಕಬಹುದು. ಇದು ನಮಗೆ ಗೊತ್ತಾಗುವುದು ನಮ್ಮ ಹಲವಾರು ಕನಸುಗಳಲ್ಲಿ, ಈ ಕನಸುಗಳಲ್ಲಿ ನಾವು ಇತರರ ತಿರುಳನ್ನು (essence) ಕುರಿತು ಆಳ ಒಳನೋಟಗಳನ್ವು ಪ್ರದರ್ಶಿಸುತ್ತೇವೆ, ಇದು ನಮಗೆ ಹಗಲಿನಲ್ಲಿ ಎಚ್ಚರವಾಗಿದ್ದಾಗ ಸಾಧ್ಯವೇ ಆಗುವುದಿಲ್ಲ ( Forgotten dreams ಲ್ಲಿ ನಾನು “ಕನಸಿನ ಒಳನೋಟಗಳ” ಕುರಿತಾದ ಉದಾಹರಣೆಗಳನ್ನ ಸೇರಿಸಿದ್ದೇನೆ). ನಾವು ಇನ್ನೊಬ್ಬರನ್ನು ಸಂಪೂರ್ಣ ಅಚಾನಕ್ ಆಗಿ ಬೇರೆ ರೀತಿಯಲ್ಲಿ ನೋಡುವ ಮತ್ತು ಅವರ ಬಗೆಗಿನ ಈ ತಿಳುವಳಿಕೆ ನಮ್ಮಲ್ಲಿ ಮೊದಲೇ ಯಾವಾಗಲೂ ಇತ್ತು ಎಂದು ಭಾವಿಸುವಂಥ frequent reaction ಗಳಲ್ಲಿ ಇದಕ್ಕೆ ಸಾಕ್ಷಿಗಳನ್ನು ಗುರುತಿಸಬಹುದು. ಇದನ್ನ ನಾವು ಪ್ರತಿರೋಧದ ವಿದ್ಯಮಾನಗಳಲ್ಲಿ, ಯಾವಾಗ ನೋವು ನೀಡುವ ಸತ್ಯ ಎದುರಾಗುವ ಬೆದರಿಕೆಯನ್ನು ಒಡ್ಡುತ್ತದೆಯೋ ಆಗ ಗುರುತಿಸಬಹುದು : ಬಾಯಿ ತಪ್ಪಿ ಮಾತನಾಡಿದಾಗ (slip of tongue), ವಿಚಿತ್ರ ಅಭಿವ್ಯಕ್ತಿಯಲ್ಲಿ (awkward expression), ಭಾವಪರವಶತೆಯ ಸ್ಥಿತಿಯಲ್ಲಿ (in state of trance) ಅಥವಾ ಏನೋ ಹೇಳಬೇಕೆಂದಿರುವ ಮನುಷ್ಯ ಬೇರೆ ಏನೋ ತನ್ನ ನಂಬಿಕೆಗಳಿಗೆ ಸಂಪೂರ್ಣವಾಗಿ ವಿರುದ್ಧದ ಮಾತುಗಳನ್ನ ಆಡುವ ಮತ್ತು ನಿಮಿಷಗಳ ನಂತರ ಆಡಿದ್ದನ್ನ ಮರೆತುಬಿಡುವ ನಿದರ್ಶನಗಳಲ್ಲಿ. ಖಂಡಿತ, ನಮಗೆ ಗೊತ್ತಿರುವುದನ್ನ ಮುಚ್ಚಿಡುವುದರಲ್ಲಿ ಬಹಳಷ್ಟು ಶಕ್ತಿ ಖರ್ಚಾಗುತ್ತದೆ ಮತ್ತು, ಹತ್ತಿಕ್ಕಲ್ಲಾಗಿರುವ ಈ ತಿಳುವಳಿಕೆಯ ಮಟ್ಟವನ್ನ ಅತಿಯಾಗಿ ಎಸ್ಟಿಮೇಟ್ ಮಾಡುವುದು ಬಹಳ ಕಷ್ಟ. Talmudic ದಂತಕಥೆಯೊಂದು ಸತ್ಯವನ್ನು ಹತ್ತಿಕ್ಕುವ ಈ ಪರಿಕಲ್ಪನೆಯನ್ನ ಕವಿತೆಯ ರೂಪದಲ್ಲಿ ಪ್ರಸ್ತುತಪಡಿಸುತ್ತದೆ : ಮಗುವೊಂದು ಹುಟ್ಟಿದಾಗ, ಏಂಜಲ್ ಮಗುವಿನ ತಲೆ ಮುಟ್ಟಿ, ಅದಕ್ಕೆ ಹುಟ್ಟಿನ ಸಮಯದಲ್ಲಿ ಇದ್ದ ಸತ್ಯದ ತಿಳುವಳಿಕೆಯನ್ನು ಮರೆಯುವಂತೆ ಮಾಡುತ್ತದೆ. ಅಕಸ್ಮಾತ್ ಮಗು ಸತ್ಯದ ಕುರಿತಾದ ತಿಳುವಳಿಯನ್ನ ಮರೆಯದಿದ್ದರೆ ಅದರ ಮುಂದಿನ ಬದುಕು ಸಹಿಸಲಸಾಧ್ಯವಾಗುತ್ತಿತ್ತು.

ನಮ್ಮ ಮುಖ್ಯ ಥೀಸಸ್ ಗೆ ವಾಪಸ್ ಆಗುವುದಾದರೆ : Being ವಾಸ್ತವವನ್ನು ಸೂಚಿಸುತ್ತದೆ, ಮಿಥ್ಯೀಕರಣ ಗೊಂಡ ಭ್ರಮಾತ್ಮಕ ಚಿತ್ರಕ್ಕೆ ವಿರುದ್ಧವಾಗಿ. ಈ ಅರ್ಥದಲ್ಲಿ being ನ ಪರಿಧಿಯನ್ನ ಹೆಚ್ಚಿಸುವುದೆಂದರೆ, ನಮ್ಮ ಸ್ವಂತದ ಮತ್ತು ಜಗತ್ತಿನ ನಮ್ಮ ಸುತ್ತ ಇರುವ ಇನ್ನೊಬ್ಬರ ವಾಸ್ತವದ ಕುರಿತಾದ ಒಳನೋಟಗಳನ್ನು ಹೆಚ್ಚಿಸಿಕೊಳ್ಳುವುದು. ದುರಾಸೆ ಮತ್ತು ದ್ವೇಷಗಳನ್ನು ಮೀರ ಬಯಸುವ ಜುಡಾಯಿಸಂ ಮತ್ತು ಕ್ರಿಶ್ಚಿಯಾನಿಟಿಯ ನೈತಿಕ ಗುರಿಯನ್ನು ಬುದ್ಧಿಸಂ ನಲ್ಲಿ ಕೇಂದ್ರದಲ್ಲಿರುವ ಮತ್ತು ಜುಡಾಯಿಸಂ ಮತ್ತು ಕ್ರಿಶ್ಚಿಯಾನಿಟಿಯಲ್ಲಿ ಕೂಡ ಭಾಗವಹಿಸುವ ಇನ್ನೊಂದು ಅಂಶದ ಸಹಾಯವಿಲ್ಲದೇ ಸಾಧಿಸಿಕೊಳ್ಳುವುದು ಅಸಾಧ್ಯ : being ನ ಪ್ರವೇಶಿಸುವುದೆಂದರೆ ಮೈಲ್ಮೈಯನ್ನ ಛೇದಿಸಿ (penetrate) ಸತ್ಯದ ಕುರಿತಾದ ಒಳನೋಟಗಳನ್ನು ಸಾಧಿಸುವುದು.

********************************

1 Comment

Leave a Reply