ಕರ್ಮವು ತಿರುಗಿಬರದೇ ಇರುವುದಿಲ್ಲ ಅನ್ನುವುದನ್ನು ಮನದಟ್ಟು ಮಾಡಿಸಲು ಸ್ವಾಮಿ ರಾಮತೀರ್ಥರು ಹೇಳಿದ ಕತೆ ಇದು… । ಸಂಗ್ರಹ ಮತ್ತು ಅನುವಾದ: ಪ್ರಣವ ಚೈತನ್ಯ
ಒಂದೂರಿನಲ್ಲಿ ಒಬ್ಬ ರಾಜಕುಮಾರನಿದ್ದ, ಅವನು ಸಾಹಿತ್ಯದಲ್ಲಿ ತುಂಬಾ ಆಸಕ್ತ. ಒಂದು ದಿನ ಅವನಿಗೆ ಒಬ್ಬ ಕವಿ ಪರಿಚಯನಾದ. ಆ ಕವಿಯ ಕವಿತೆಗಳಿಂದ ಅಚ್ಚರಿಗೊಂಡ ರಾಜಕುಮಾರ ಅವನನ್ನು ತನ್ನ ಕೊಠಡಿಗೆ ಕರೆಸಿಕೊಂಡ. ಆ ಕವಿಯು ತನ್ನ ಕವಿತೆಗಳಿಂದ ರಾಜಕುಮಾರನನ್ನು ಬೆರಗು ಮಾಡಿದ್ದ. ತಡರಾತ್ರಿಯವರೆಗೂ ರಾಜಕುಮಾರ ಕವಿಯ ಕವಿತೆಗಳನ್ನು ಕೇಳುತ್ತಾ ಕುಳಿತ. ಕಡೆಗೆ ರಾಜಕುಮಾರ ತನ್ನ ಕೊಠಡಿಯಿಂದ ರಾಣಿಯರ ಅರಮನೆಗೆ ತೆರಳಿದ. ಅಲ್ಲಿ ರಾಜಕುಮಾರಿಯನ್ನು ಭೇಟಿಯಾದ ಅವನು ಈ ಕವಿಯ ಬಗ್ಗೆ ಹೇಳಿದ. ಇದರಿಂದ ಅಚ್ಚರಿಗೊಂಡ ರಾಜಕುಮಾರಿಯು ತಾನೂ ಆ ಕವಿಯ ಕವಿತೆಗಳನ್ನು ಕೇಳಬೇಕು ಎಂದು ಹೇಳಿದಳು. “ಆ ಕವಿಯನ್ನು ನಾಳೆ ಇಲ್ಲಿಗೆ ಕೆಳಿಸಿಕೊಡಿ” ಎಂದಳು.
ಮರುದಿನ ಆ ಕವಿಯು ರಾಣಿಯರ ಅರಮನೆಗೆ ತೆರಳಿದ, ಅಲ್ಲಿ ತನ್ನ ಪ್ರತಿಭೆಯಿಂದ ಅವನು ರಾಣಿಯರನ್ನು ಮತ್ತು ರಾಜಕುಮಾರಿಯರನ್ನು ಬೆರಗು ಮಾಡಿದ. “ನಾನು ಒಬ್ಬ ಕುರುಡ, ಆ ದೇವರು ನನಗೆ ಇಂತಹ ಪ್ರತಿಭೆ ನೀಡಿದ ಬದಲಾಗಿ ನನ್ನ ಕಣ್ಣುಗಳನ್ನು ಕಿತ್ತಿಕೊಂಡಿದ್ದಾನೆ” ಎಂದ. ಅವನು ತಾನು ಕುರುಡನೆಂದು ಸುಳ್ಳು ಹೇಳಿದ್ದುದರ ಹಿಂದೆ ಒಂದು ಕಾರಣವಿತ್ತು, ತಾನು ಕುರುಡನೆಂದು ಹೇಳಿದರೆ ರಾಣಿಯರು ಮನ ಕರಗಿ ಅವನಿಗೆ ಅಲ್ಲೇ ಇರಲು ಜಾಗ ನೀಡುವರು ಎಂದು. ರಾಣಿಯರ ಅರಮನೆಯಲ್ಲಿ ಕುರುಡನ ಹಾಗೆ ಇದ್ದರೆ ಅವರನ್ನು ನೋಡಬಹುದು ಎನ್ನುವ ದುರುದ್ದೇಶ ಆ ಕವಿಯದು; ಅವನ ಯೋಜನೆಯಂತೆ ರಾಣಿಯರು ಅವನಿಗೆ ಅಲ್ಲಿಯೇ ಇರಲು ಆದೇಶಿಸಿದರು.
ಕೆಲ ದಿನಗಳು ಕಳೆದವು. ಒಂದು ದಿನ ಆ ಕವಿಯು ಒಬ್ಬಳು ಸೇವಕಿಗೆ “ಅಲ್ಲಿ ಇರುವ ಕುರ್ಚಿಯನ್ನು ತೆಗೆದುಕೊಂಡು ಬಾ” ಎಂದ. ಆದರೆ ಆ ಸೋಮಾರಿ ಸೇವಕಿ ಈ ಕುರುಡನಿಗೆ ಕಣ್ಣು ಕಾಣುವುದಿಲ್ಲ ಅಂದುಕೊಂಡು “ಇಲ್ಲಿ ಯಾವ ಕುರ್ಚಿಯೂ ಇಲ್ಲ.” ಎಂದಳು. ಆದರೆ ಕುರ್ಚಿ ಕೊಠಡಿಯಲ್ಲಿ ಇತ್ತು, ಅದು ಕವಿಗೆ ಕಾಣುತಿತ್ತು. ಕೋಪಗೊಂಡ ಆ ಕವಿ “ಅಲ್ಲೇ ಕುರ್ಚಿಇದ್ದರೂ ನನಗೆ ಸುಳ್ಳು ಹೇಳುತ್ತಿದ್ದೀಯಾ? ನನಗೆ ಅಷ್ಟು ಚೆನ್ನಾಗಿ ಕಾಣುತ್ತಿದೆ!” ಎಂದು ಹೇಳಿದ. ಇದನ್ನು ಕೇಳಿದ ಆ ಸೇವಕಿ ಅಲ್ಲಿಂದ ಸೀದಾ ರಾಣಿಯ ಬಳಿಗೆ ಓಡಿದಳು. “ಆ ಕವಿ ಕುರುಡನಲ್ಲ, ಅವನು ಸುಳ್ಳು ಹೇಳುತ್ತಿದ್ದಾನೆ” ಅಂದಳು. ಪರೀಕ್ಷಿಸಿ ನೋಡಿದಾಗ ರಾಣಿಗೂ ಆ ಕವಿಯು ಕುರುಡ ಅಲ್ಲವೆಂದು ತಿಳಿಯಿತು.
ವಿಷಯ ತಿಳಿದ ರಾಜಕುಮಾರ ಆ ಕವಿಗೆ ರಾಜ್ಯದಿಂದ ಬಹಿಷ್ಕಾರ ಹಾಕಿದ.
ದುರಂತ ಎಂದರೆ, ಆ ಕವಿಗೆ ಬಹಿಷ್ಕಾರ ಹಾಕಿದ ಕೆಲವೇ ದಿನಗಳಲ್ಲಿ ಅವನು ನಿಜವಾಗಿಯೂ ಕುರುಡನಾಗಿಬಿಟ್ಟ. ಅವನ ಕರ್ಮದ ಅರಿವು ಅವನಿಗಾಯಿತು.
ಸಾರಾಂಶ: ಕರ್ಮವು ತಿರುಗುಬಾಣ, ನಾವು ಎಷ್ಟು ದೂರ ಎಸೆದರೂ ಅದು ಕಡೆಗೆ ಬರುವುದು ನಮ್ಮ ಬಳಿಯೇ. ನಾವು ಬೆಳೆದ ಕರ್ಮದ ಹಣ್ಣು ನಮಗೆ ಫಲ ಎಂದಿಗೂ ನೀಡುವುದು

