ಕೆಲವು ಸಾಧಕರ ಜೀವನ – ಸಾಧನೆಯಿಂದ ನಾವು ಕಲಿಯಬಹುದಾದ ಪಾಠಗಳು ಹೀಗಿವೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಡಾ. ಬೆನ್ ಕಾರ್ಸನ್

ಶೈಕ್ಷಣಿಕವಾಗಿ, ಪ್ರಾಥಮಿಕ ಶಿಕ್ಷಣದುದ್ದಕ್ಕೂ ನಾನು ಬಹಳ ಕಷ್ಟಪಟ್ಟೆ ಆದರೆ, 1987 ರಲ್ಲಿ ನನ್ನನ್ನು ಜಗತ್ತಿನ ಶ್ರೇಷ್ಠ ನ್ಯೂರೋ ಸರ್ಜನ್ ಎಂದು ಗುರುತಿಸಲಾಯಿತು.
ಪಾಠ : ಕಷ್ಟಪಡುತ್ತಿದ್ದೀರಿ ಎಂದರೆ ಯಶಸ್ಸಿನ ಹಾದಿಯಲ್ಲಿದ್ದೀರಿ. ಯಾವತ್ತೂ ಹತಾಶರಾಗಿ ಕೈ ಚೆಲ್ಲಬೇಡಿ.
ಬಿಲ್ ಗೇಟ್ಸ್

ನನಗೆ ನನ್ನ ಯುನಿವರ್ಸಿಟಿ ಶಿಕ್ಷಣವನ್ನ ಕಂಪ್ಲೀಟ್ ಮಾಡಲು ಆಗಿದ್ದರೂ, ಇಂದು ಜನ ನನ್ನ ಜಗತ್ತಿನ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಗುರುತಿಸುತ್ತಾರೆ.
ಪಾಠ : ಶಾಲಾ ಶಿಕ್ಷಣ ನಿಮ್ಮನ್ನು ಶ್ರೀಮಂತರನ್ನಾಗಿಸುವುದಿಲ್ಲ ಅದು ನಿಮ್ಮಲ್ಲಿನ ಶ್ರೀಮಂತರಾಗುವ ಗುಣಲಕ್ಷಣಗಳನ್ನ ಪಾಲಿಶ್ ಮಾಡುತ್ತದೆ. ಕೆಲವು ಅಪರೂಪದ ಜನ ಮಾತ್ರ ತಮ್ಮನ್ನು ತಾವು ಪಾಲಿಶ್ ಮಾಡಿಕೊಳ್ಳಲು ಶಕ್ತರಾಗಿರುತ್ತಾರೆ. ಶಿಕ್ಷಣವನ್ನು ನಿರ್ಲಕ್ಷಿಸಬೇಡಿ.
ಕ್ರಿಸ್ಟಿಯಾನೋ ರೊನಾಲ್ಡೋ

ನಾವು ಶ್ರೀಮಂತರಾಗುತ್ತೇವೆ ಎಂದು ನಾನು ನನ್ನ ಅಪ್ಪನಿಗೆ ಹೇಳಿದ್ದೆ ಆದರೆ ಅವನು ನನ್ನ ಮಾತು ನಂಬಿರಲಿಲ್ಲ. ನನ್ನ ಮಾತನ್ನ ನಾನು ಸತ್ಯ ಮಾಡಿ ತೋರಿಸಿದೆ.
ಪಾಠ : ನಿಮ್ಮ ಮಾತುಗಳು, ನಂಬಿಕೆಗಳು ನಿಮ್ಮ ಬದುಕನ್ನು ಕೈ ಹಿಡಿದು ಮುನ್ನಡೆಸುತ್ತವೆ. ನಿಮ್ಮ ಮಾತುಗಳಲ್ಲಿ ನಿಮಗೆ ಪೂರ್ಣ ನಂಬಿಕೆ ಇದ್ದಾಗ, ನೀವು ಅವುಗಳನ್ನು ಸತ್ಯ ಮಾಡಲು ಎಲ್ಲ ಪ್ರಯತ್ನವನ್ನೂ ಮಾಡುತ್ತೀರಿ ಮತ್ತು ಆ ಮಾತುಗಳನ್ನು ಸಾಧಿಸಿ ತೋರಿಸುತ್ತೀರಿ.
ಲಿಯೊನಿಲ್ ಮೆಸ್ಸಿ

ನನ್ನ ಸಾಕರ್ ಟ್ರೇನಿಂಗ್ ಗಾಗಿ ನಾನು ಕೈಗೆ ಸಿಕ್ಕ ಕೆಲಸಗಳನ್ನೆಲ್ಲ ಮಾಡಿದೆ. ಈ ಪರಿಶ್ರಮ ಮತ್ತು ಶೃದ್ಧೆ ನನ್ನನ್ನು ಜಗತ್ತಿನ ಶ್ರೇಷ್ಠ ಫುಟ್ ಬಾಲ್ ಆಟಗಾರನನ್ನಾಗಿಸಿತು.
ಪಾಠ : ನಿಮ್ಮ ಕನಸುಗಳಲ್ಲಿ ನಿಮಗೆ ನಂಬಿಕೆ ಇರಲಿ, ನಿಮ್ಮ ನೋವಿಗೆ ನಿಮ್ಮ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಕೊಡಬೇಡಿ. ನಿಮ್ಮ ಭವಿಷ್ಯವನ್ನ ನಿಮ್ಮ ಶೃದ್ಧೆ ಮುನ್ನಡೆಸಲಿ.
ಸ್ಟೀವ್ ಜಾಬ್ಸ್

ನಾನು ನನ್ನ ಗೆಳೆಯರ ರೂಮ್ ಗಳಲ್ಲಿ ನೆಲದ ಮೇಲೆ ಮಲಗಿ ನಿದ್ದೆ ಮಾಡುತ್ತಿದೆ, ಕೋಕ್ ಬಾಟಲ್ ಗಳನ್ನು ಸಂಗ್ರಹಿಸಿ ರಿಟರ್ನ ಮಾಡಿ ಖರ್ಚಿಗಾಗಿ ಹಣ ಸಂಪಾದನೆ ಮಾಡುತ್ತಿದ್ದೆ. ಊಟಕ್ಕಾಗಿ ಸ್ಥಳೀಯ ದೇವಾಲಯಗಳಲ್ಲಿ ಕ್ಯೂ ನಿಲ್ಲುತ್ತಿದ್ದೆ. ನನ್ನ ಈ ಸಂಘರ್ಷಗಳು ಆ್ಯಪಲ್ ಕಂಪನಿ ಕಟ್ಟುವಲ್ಲಿ ನನಗೆ ನೆರವಾದವು.
ಪಾಠ : ಇವತ್ತು ನಿಮ ಬಳಿ ಹಣ ಇಲ್ಲದಿರಬಹುದು ಆದರೆ ನಾಳೆಯೂ ಹಾಗೆ ಎಂದು ತಿಳಿದುಕೊಳ್ಳಬೇಡಿ. ನಿಮ್ಮ ಸಾಮರ್ಥ್ಯ, ಪರಿಶ್ರಮದಲ್ಲಿ ನಿಮಗೆ ನಂಬಿಕೆ ಇರಲಿ.
ಬ್ರಿಟೀಶ್ ಪ್ರಧಾನಿ ಟೋನಿ ಬ್ಲೇರ್

ನಾನು ಸ್ಕೂಲಿನಲ್ಲಿದ್ದಾಗ ನನ್ನ ಟೀಚರ್ ಗಳು, ಗೆಳೆಯರು ನನ್ನ ಫೆಲ್ಯೂರ್ ಎಂದು ಗುರುತಿಸುತ್ತಿದ್ದರು. ಆದರೆ ನಾನು ನನ್ನೊಳಗಿನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಮುಂದೆ ನಾನು ಸಫಲ ರಾಜಕಾರಣಿಯಾದೆ, ಬ್ರಿಟನ್ ನ ಪ್ರಧಾನ ಮಂತ್ರಿಯಾದೆ.
ಪಾಠ : ಬೇರೆಯವರ ಅಭಿಪ್ರಾಯಗಳು ನಿಮ್ಮ ವಾಸ್ತವ ಆಗಲು ಅವಕಾಶ ಮಾಡಿಕೊಡಬೇಡಿ. ನಿಮ್ಮ ಸಾಮರ್ಥ್ಯದಲ್ಲಿ ನಿಮಗೆ ನಂಬಿಕೆ ಇರಲಿ.


[…] ಮೊದಲ ಕಂತು ಇಲ್ಲಿದೆ: https://aralimara.com/2024/05/20/models/ […]
LikeLike