ಕೋಳಿ ಮತ್ತು ಬಾತುಕೋಳಿಗಳು ತೋರ್ಪಡಿಸುವ ಭಿನ್ನ ನಾಯಕತ್ವ ಶೈಲಿಗಳಲ್ಲಿ ನಮಗಾಗಿ ಒಂದು ಪಾಠವಿದೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಕೋಳಿ ಮತ್ತು ಬಾತುಕೋಳಿಗಳು ಎರಡು ವಿಭಿನ್ನ ಶೈಲಿಯ ನಾಯಕತ್ವ ತೋರ್ಪಡಿಸುತ್ತವೆ. ತಾಯಿ ಕೋಳಿ ಹಿಂದೆ ನಡೆಯುತ್ತ ತನ್ನ ಗುಂಪನ್ನು ಲೀಡ್ ಮಾಡುತ್ತದೆಯಾದರೆ ತಾಯಿ ಬಾತುಕೋಳಿ ಮುಂದೆ ನಡೆಯುತ್ತ ತನ್ನ ಗುಂಪನ್ನ ಮುನ್ನಡೆಸುತ್ತದೆ.
ತಾಯಿ ಕೋಳಿ ತನ್ನ ಮರಿಗಳ ಹಿಂದೆ ಇರುವ ಮತ್ತು ತಾಯಿ ಬಾತುಕೋಳಿ ತನ್ನ ಮರಿಗಳ ಮುಂದೆ ಇರುವ ಸಂಗತಿ ಎರಡು ವಿಭಿನ್ನ ನಾಯಕತ್ವದ ರೀತಿಗಳನ್ನ ಎತ್ತಿತೋರಿಸುತ್ತದೆ ; Leading from behind & Leading from front.
ತಾಯಿ ಕೋಳಿಯ ಲೀಡಿಂಗ್ ಫ್ರಾಮ್ ಬಿಹೈಂಡ್ ನಾಯಕತ್ವ ಶೈಲಿ, ಬೆಂಬಲ (support) ಮತ್ತು ಸಬಲೀಕರಣ (empowerment) ವಿಧಾನವನ್ನು ಪ್ರದರ್ಶನ ಮಾಡುತ್ತದೆ. ಈ ಶೈಲಿಯಲ್ಲಿ ನಾಯಕ ಅಥವಾ ನಾಯಕಿ ಹಿಂದೆ ಇದ್ದುಕೊಂಡು ತನ್ನ ಬೆಂಬಲಿಗರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಾರೆ. ತನ್ನ ಬೆಂಬಲಿಗರಿಗೆ ಲೀಡ್ ಮಾಡಲು ಮತ್ತು ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳಲು ಹುರಿದುಂಬಿಸುತ್ತಾರೆ. ಈ ಶೈಲಿಯನ್ನು ಫಾಲೋ ಮಾಡುವ ನಾಯಕರಿಗೆ ತಮ್ಮ ಬೆಂಬಲಿಗರ ಸಾಮರ್ಥ್ಯಗಳಲ್ಲಿ ನಂಬಿಕೆ ಇರಬೇಕಾಗುತ್ತದೆ ಮತ್ತು ಬೆಂಬಲಿಗರಿಗೆ ಲೀಡ್ ಮಾಡಲು ಅವಕಾಶ ಮಾಡಿಕೊಡುವ ಬಗ್ಗೆ ಇಚ್ಛಾಶಕ್ತಿ ಇರಬೇಕಾಗುತ್ತದೆ. ಬೆಂಬಲಿಗರಲ್ಲಿ ಹೆಚ್ಚಿನ ಮಟ್ಟದ ಸಾಮರ್ಥ್ಯ, ಅರ್ಹತೆ ಇರುವಾಗ ಮತ್ತು ಅತ್ಯಂತ ಕಡಿಮೆ ಮಾರ್ಗದರ್ಶನದ ಅವಶ್ಯಕತೆ ಇರುವಾಗ ಲೀಡಿಂಗ್ ಫ್ರಾಂ ಬಿಹೈಂಡ್ ರೀತಿಯ ನಾಯಕತ್ವ ಶೈಲಿ ಹೆಚ್ಚು ಪರಿಣಾಮಕಾರಿ.
ಬಾತುಕೋಳಿಗಳು ಪ್ರದರ್ಶನ ಮಾಡುವ ಲೀಡಿಂಗ್ ಫ್ರಾಂ ಫ್ರಂಟ್ ನಾಯಕತ್ವ ಶೈಲಿ, ನಾಯಕರ ಸಾಹಸಿ (Daring) ಮತ್ತು ನಿಯಂತ್ರಕ (control) ಮನೋಭಾವವನ್ನು ಎತ್ತಿತೋರಿಸುತ್ತದೆ. ಇಲ್ಲಿ ನಾಯಕರು ತಮ್ಮನ್ನು ತಾವು ಸವಾಲುಗಳಿಗೆ ಒಡಿಕೊಳ್ಳುತ್ತ ತಮ್ಮ ಹಿಂಬಾಲಕರ ಹಿತ ಕಾಯುತ್ತಾರೆ, ಮಾರ್ಗದರ್ಶನ ಮಾಡುತ್ತಾರೆ. ಹಿಂಬಾಲಕರು ಅಷ್ಟು ಸಾಮರ್ಥ್ಯಶಾಲಿಗಳಲ್ಲದಿದ್ದಾಗ ಮತ್ತು ಅವರಿಗೆ ಹೆಚ್ಚಿನ ಮಾರ್ಗದರ್ಶನದ ಅವಶ್ಯಕತೆ ಇರುವಾಗ ಈ ರೀತಿಯ ನಾಯಕತ್ವ ಶೈಲಿ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ.

