ಖಲೀಲ್ ಗಿಬ್ರಾನನ ಕತೆಗಳು #2: ತೊಟ್ಟ ಬಟ್ಟೆ

ಖಲೀಲ್ ಗಿಬ್ರಾನನ ‘ದಿ ವಾಂಡರರ್’ ಸಂಕಲನದಿಂದ… | ಅನುವಾದ :  ಓ.ಎಲ್.ನಾಗಭೂಷಣ ಸ್ವಾಮಿ

ರೂಪ-ಕುರೂಪ ಇಬ್ಬರೂ ಒಂದು ದಿನ ಕಡಲ ತಡಿಯಲ್ಲಿ ಭೇಟಿಯಾದರು. ‘ಕಡಲಲ್ಲಿ ಮೀಯೋಣವಾ’ ಅನ್ನುವ ಆಸೆ ಇಬ್ಬರಿಗೂ ಬಂದಿತ್ತು.
ತೊಟ್ಟ ಬಟ್ಟೆ ಕಳಚಿ ನೀರಿಗಿಳಿದು ಈಜಾಡಿದರು. ಸ್ವಲ್ಪ ಹೊತ್ತಾದ ಮೇಲೆ ಕುರೂಪ ದಡಕ್ಕೆ ಬಂದಳು. ರೂಪ ತೊಟ್ಟಿದ್ದ ಬಟ್ಟೆಯನ್ನು ತೊಟ್ಟು ಹೊರಟು ಹೋದಳು.

ರೂಪ ಬಂದಳು. ಅವಳು ತೊಟ್ಟ ಬಟ್ಟೆ ಇರಲಿಲ್ಲ. ಬತ್ತಲೆ ಇರಲು ನಾಚಿದಳು. ಕುರೂಪ ತೊಟ್ಟಿದ್ದ ಬಟ್ಟೆ ತೊಟ್ಟು ಹೊರಟು ಹೋದಳು.

ಇವತ್ತಿಗೂ ಗಂಡಸರು, ಹೆಂಗಸರು, ಎಲ್ಲರೂ ರೂಪಳನ್ನು ಕುರೂಪ ಅಂತಲೂ ಕುರೂಪಳನ್ನು ರೂಪ ಅಂತಲೂ ತಪ್ಪು ತಿಳಿಯುತಿದ್ದಾರೆ.
ಕೆಲವರು ರೂಪದ ಮುಖ ಕಂಡಿದಾರೆ. ಅವಳೆಂಥ ಬಟ್ಟೆ ತೊಟ್ಟಿದ್ದರೂ ರೂಪವೇ ಕಾಣುವುದು ಅವರಿಗೆ. ಕುರೂಪ ಎಂಥ ಬಟ್ಟೆ ತೊಟ್ಟಿದ್ದರೂ ತೊಟ್ಟ ಬಟ್ಟೆ ಅವಳ ನಿಜ ರೂಪವನ್ನು ಆ ಕೆಲವರ ಕಣ್ಣಿಂದ ಮರೆಮಾಡದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ