NonSelf ಧ್ಯಾನವನ್ನು ದೃಷ್ಟಾಂತದ ಮೂಲಕ ವಿವರಿಸಿದ್ದಾರೆ Thich Nhat Hanh । ಕನ್ನಡಕ್ಕೆ: ಚಿದಂಬರ ನರೇಂದ್ರ
ನನ್ನ ಗೆಳತಿಯೊಬ್ಬರು ಅವರ ತೊಂಭತ್ಮೂರು ವರ್ಷದ ತಾಯಿಯ ಆರೈಕೆ ಮಾಡುತ್ತಿದ್ದರು. ತಾಯಿ ಯಾವ ದಿನವಾದರೂ ಸಾಯಬಹುದು ಎಂದು ಡಾಕ್ಟರ್ ಗಳು ಕೈ ಚೆಲ್ಲಿದ್ದರು. ನನ್ನ ಗೆಳತಿ ತನ್ನ ತಾಯಿಗೆ ಒಂದು ವರ್ಷದಿಂದ ಧ್ಯಾನ ಹೇಳಿಕೊಡುತ್ತಿದ್ದಾರೆ. ಆಕೆ ತನ್ನ ತಾಯಿಯಲ್ಲಿನ ಖುಶಿಯ ಬೀಜಗಳಿಗೆ ನೀರೆರೆಯುವ ಮೂಲಕ ಈ ಧ್ಯಾನ ಕಲಿಸುವಿಕೆಯನ್ನ ಶುರು ಮಾಡಿದ್ದರು. ಈಗ ಮಗಳು ಸುತ್ತ ಇರುವಾಗಲೆಲ್ಲ ತಾಯಿ ತುಂಬ ಜೀವಂತಿಕೆಯಿಂದ ವ್ಯವಹರಿಸುತ್ತಾರೆ.
ರೀಸೆಂಟ್ಲೀ ನನ್ನ ಗೆಳತಿ ತನ್ನ ತಾಯಿಗೆ ಹೇಳಿದರು, “ಈ ದೇಹ ಎಕ್ಸ್ಯಾಕ್ಟ್ಲೀ ನಿನ್ನ ದೇಹವಲ್ಲ, ನಿನ್ನ ದೇಹ ಬಹಳ ವಿಶಾಲವಾದದ್ದು. ನಿನಗೆ ಒಂಭತ್ತು ಜನ ಮಕ್ಕಳು, ಡಝನ್ ಗಟ್ಟಲೇ ಮೊಮ್ಮಕ್ಕಳು ಮತ್ತು ಹತ್ತಾರು ಮರಿ ಮೊಮ್ಮಕ್ಕಳು ಕೂಡ. ನಾವೆಲ್ಲರೂ ನಿನ್ನ ಮುಂದುವರಿಕೆ, ನಾವೆಲ್ಲ ಖುಷಿಯಿಂದ , ಆರೋಗ್ಯದಿಂದ ಇದ್ದೇವೆ. ನೀನು ನಮ್ಮೊಳಗೆ ಹೆಚ್ಚು ಜೀವಂತವಾಗಿ ಇದ್ದೀಯ”.
ಮಗಳು ಹೇಳಿದ್ದನ್ನ ತಾಯಿ ನೋಡಬಲ್ಲವಳಾಗಿದ್ದಳು. ಮಗಳು ಮುಂದುವರೆಸಿದಳು, “ನೀನು ಯಂಗ್ ಆಗಿದ್ದಾಗ ಎಷ್ಟೋ ಜನರಿಗೆ ಅಡುಗೆ ಮಾಡುವುದನ್ನ ಹೇಳಿಕೊಟ್ಟಿದ್ದಿ, ಇನ್ನೂ ಎಷ್ಟೋ ಕೆಲಸಗಳನ್ನು ಮಾಡುವುದನ್ನ ಹೇಳಿಕೊಟ್ಟಿದ್ದಿ. ಎಷ್ಟೋ ಜನರ ಖುಶಿಗೆ ಕಾರಣಳಾಗಿದ್ದಿ. ನಾವು ಈಗ ಅದೇ ಕೆಲಸ ಮಾಡುತ್ತಿದ್ದೇವೆ. ನೀನು ಶುರು ಮಾಡಿದ್ದನ್ನ ಮುಂದುವರೆಸುತ್ತಿದ್ದೇವೆ. ಯಂಗ್ ಆಗಿದ್ದಾಗ ನೀನು ಪದ್ಯ ಬರೆದು ಹಾಡುತ್ತಿದ್ದಿ, ಈಗ ನಾವು ಕೆಲವರಾದರು ಕೂಡ ನಿನ್ನ ಹಾಗೆ ಪದ್ಯ ಬರೆಯುತ್ತೇವೆ, ನಿನ್ನ ಕೆಲವು ಮೊಮ್ಮಕ್ಕಳಂತೂ ಅತ್ಯಂತ ಮಧುರವಾಗಿ ಹಾಡುತ್ತಾರೆ. ನೀನು ನಮ್ಮೊಳಗೆ ಮುಂದುವರೆಯುತ್ತಿದ್ದೀಯ. ಏಕಕಾಲದಲ್ಲಿ ನೀನು ಎಷ್ಟೋ ಜೀವಗಳಾಗಿದ್ದೀಯ”.
ಇದು NonSelf ಧ್ಯಾನ. ತನ್ನ ದೇಹ ತನ್ನ ನಿಜವಾದ ಸೆಲ್ಫ್ ನ ಕೇವಲ ಸಣ್ಣ ಭಾಗ ಎನ್ನುವುದನ್ನ ತಿಳಿದುಕೊಳ್ಳಲು ಇದು ಆ ತಾಯಿಗೆ ಸಹಾಯ ಮಾಡುತ್ತದೆ. ಈಗ ಅವಳಿಗೆ ಗೊತ್ತಾಗಿದೆ, ಈ ದೇಹ ನಾಶವಾದಾಗ ಅವಳು ಇನ್ನೂ ಹಲವಾರು ಬಗೆಗಳಲ್ಲಿ ಮುಂದುವರೆಯುತ್ತಾಳೆನ್ನುವುದು. ಹಾಗಾಗಿ ಆಕೆ ಈಗ ಮೊದಲಿಗಿಂತಲೂ ಹೆಚ್ಚಿನ ಚೈತನ್ಯದ ಚಿಲುಮೆಯಾಗಿದ್ದಾಳೆ.

