ದೈಹಿಕ ನೋವುಗಳನ್ನು ಹೇಗೋ ಮಾನಸಿಕ ನೋವನ್ನೂ ಅವಾಯ್ಡ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ವ್ಯಕ್ತಿಯಲ್ಲಿ ಮನಸ್ಸೂ ಒಂದು ಶರೀರವೇ. ಅದು ಸೂಕ್ಷ್ಮ ಶರೀರ. : Tai Sheridan | ಚೇತನಾ ತೀರ್ಥಹಳ್ಳಿ
ನೋವಿಗೆ ಅಂಜುವುದು, ನೊಂದು ಕೊರಗುವುದು – ಇವೆಲ್ಲ ನಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಹಾಳು ಮಾಡುತ್ತವಷ್ಟೇ. ಇದರಿಂದ ನಕಾರಾತ್ಮಕ ಚಿಂತನೆಗಳು ಬೆಳೆಯುವವೇ ಹೊರತು ಸಾಂತ್ವನವಂತೂ ದೊರೆಯಲಾರದು.
ದೈಹಿಕ ನೋವುಗಳನ್ನು ಹೇಗೋ ಮಾನಸಿಕ ನೋವನ್ನೂ ಅವಾಯ್ಡ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ವ್ಯಕ್ತಿಯಲ್ಲಿ ಮನಸ್ಸೂ ಒಂದು ಶರೀರವೇ. ಅದು ಸೂಕ್ಷ್ಮ ಶರೀರ. ಆದ್ದರಿಂದ ಮನಸ್ಸು ಭಾವನೆಗಳಿಗೆ ಒಳಗಾಗಿ ನೊಂದುಕೊಳ್ಳುವುದು ಸಹಜ. ಆದರೆ ಅದು ನಮ್ಮ ವಿವೇಚನೆಯನ್ನೂ ನುಂಗಿ ನಮ್ಮ ಬದುಕನ್ನು ಆವರಿಸಲು ಅವಕಾಶ ಕೊಡಬಾರದು. ನೋವು ಜೀವನದ ಒಂದು ಭಾಗವಷ್ಟೇ, ಅದೇ ಜೀವನವಾಗಲು ಬಿಡಬಾರದು.
ನೋವಿನ ತೀವ್ರತೆಯನ್ನು ತಗ್ಗಿಸಲು ಸುಲಭ ಉಪಾಯವೆಂದರೆ, ಅದನ್ನು ಒಪ್ಪಿಕೊಳ್ಳುವುದು. ನನಗೆ ನೋವಾಗಿದೆಯೆಂದು ದೂರುತ್ತ ಕೂರುವ ಬದಲು, ಅದನ್ನು ನಮ್ಮ ಮನಸ್ಸಿನ ಮೂಲಕ ಹಾದುಹೋಗಲು ಬಿಡುವುದು. ಮತ್ತು, ಜಗತ್ತಿನಲ್ಲಿ ನೋವು ನಮಗೆ ಮಾತ್ರವಲ್ಲ, ಎಲ್ಲರಿಗೂ ಒಂದಲ್ಲ ಒಂದು ಬಗೆಯ ನೋವು ಇದ್ದೇ ಇರುತ್ತದೆ ಎಂದು ಅರಿತುಕೊಳ್ಳುವುದು!
ಈ ಅರಿವು, ಈ ಸ್ವೀಕಾರ ಮನೋಭಾವ
ಸುಮ್ಮನೆ ಕುಳಿತು ಸಾಕ್ಷಿಯಾದರಷ್ಟೇ
ಒದಗಿಬರುವುದು.
ತಾಯ್ ಶೆರಿದಾನ್ (Tai Sheridan) ಅವರು ಶೆನ್ರ್ಯು ಸುಜುಕಿ ಪರಂಪರೆಯಲ್ಲಿ 40ಕ್ಕೂ ಹೆಚ್ಚು ಕಾಲ ಅಭ್ಯಾಸ ನಡೆಸಿದ ಝೆನ್ ಸಾಧಕರು. ಇವರೊಬ್ಬ ಉಪನ್ಯಾಸಕ, ಲೇಖಕ ಮತ್ತು ಕವಿಯೂ ಹೌದು. ಕ್ಯಾಲಿಫೋರ್ನಿಯಾ ಇವರ ನೆಲೆ. ಪ್ರಸ್ತುತ ಈ ಸರಣಿಯು Buddha in blue jeans ಕೃತಿಯ ಸ್ವತಂತ್ರ ಅನುವಾದವಾಗಿದ್ದು, ಕೆಲವು ಚಿಕ್ಕಪುಟ್ಟ ಸೇರ್ಪಡೆಯೊಂದಿಗೆ ಮರು ನಿರೂಪಣೆ ಮಾಡಲಾಗಿದೆ.

