ಬದುಕಿನ ಜಂಜಾಟಗಳು ಕಾರಣವಾಗಿ ಕೆಲವು ಸಂಗತಿಗಳನ್ನ ನಾವು ಮುಂದೆ ಹಾಕುತ್ತ ಹೋಗುತ್ತೇವೆ. ಸಂಸಾರ ಮತ್ತು ವೃತ್ತಿಯ ಒತ್ತಡಗಳ ನಡುವೆ ನಮಗೆ ನಮ್ಮ ಇಷ್ಟದ ಬದುಕನ್ನು ಬದುಕುವುದು ಸಾಧ್ಯವಾಗುವುದೇ ಇಲ್ಲ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಆಮೇಲೆ ಮಾಡಿದರಾಯ್ತು, ಆಮೇಲೆ ನೋಡೋಣ, ಒಂದು ದಿನ ಪ್ಯಾರಿಸ್ ನೋಡ್ತೀನಿ. ಆಮೇಲೆ, ಒಂದು ದಿನ, ನಂತರ, ಈ ಎಲ್ಲವೂ ನಾವು ಎಲ್ಲರೂ ಬಳಸುವ ಪದಗಳೇ. ಒಂದು ದಿನ ಅವರನ್ನ ಭೇಟಿಯಾಗಬೇಕು ಅಂತ ಅಂದ್ಕೊಂಡಿರ್ತೀವಿ ಆದರೆ ಆ ಒಂದು ದಿನ ಯಾವತ್ತೂ ಬರುವುದೇ ಇಲ್ಲ ಏಕೆಂದರೆ ಆ ವ್ಯಕ್ತಿಯೇ ಇಲ್ಲ ಈಗ.
“ಒಂದುದಿನ”, “ಆಮೇಲೆ”, “ನಂತರ” ಈ ಎಲ್ಲ ಪದಗಳನ್ನು ನಾವು ಮೇಲಿಂದ ಮೇಲೆ ಬಳಸುತ್ತೇವೆಯಾದರೂ, ಸಮಯ ತುಂಬ ವೇಗದಿಂದ ನಮ್ಮನ್ನು ದಾಟಿ ಹೋಗುತ್ತಿದೆ ಎನ್ನುವ ಅರಿವು ನಮಗೆ ಇಲ್ಲ. ಇದು ನಮಗೆ ಅರಿವಾಗುವುವ ಮುನ್ನವೇ ಆ “ಆಮೇಲೆ” “ನಂತರ” ಎಲ್ಲವೂ ಬಂದು ಹೋಗಿಬಿಟ್ಟಿರುತ್ತದೆ. ಮೂಲಭೂತವಾಗಿ ಸಮಯ ಯಾರಿಗೂ ಕಾಯುವುದಿಲ್ಲ.
ಬದುಕಿನ ಜಂಜಾಟಗಳು ಕಾರಣವಾಗಿ ಕೆಲವು ಸಂಗತಿಗಳನ್ನ ನಾವು ಮುಂದೆ ಹಾಕುತ್ತ ಹೋಗುತ್ತೇವೆ. ಸಂಸಾರ ಮತ್ತು ವೃತ್ತಿಯ ಒತ್ತಡಗಳ ನಡುವೆ ನಮಗೆ ನಮ್ಮ ಇಷ್ಟದ ಬದುಕನ್ನು ಬದುಕುವುದು ಸಾಧ್ಯವಾಗುವುದೇ ಇಲ್ಲ. ಈ ಕೆಳಗಿನ ಮಾತುಗಳನ್ನ ನೀವು ಬಳಸಿದ್ದು ನೆನಪಿದೆಯಾ?
- ಈಗ ಇನ್ನೂ ದಿನ ಶುರುವಾಗಿತ್ತು ಆಗಲೇ ನೋಡಿದರೆ ಸಂಜೆ ಯಾಗಿಬಿಟ್ಚಿದೆ.
- ಸೋಮವಾರ ಶುರು ಇನ್ನು ಶುರು ಆಗುತ್ತಿದ್ದ ಹಾಗೆಯೇ ಆಗಲೇ ಶುಕ್ರವಾರ ಬಂದು ಬಿಟ್ಟಿದೆ.
- ಆಗಲೇ ಒಂದು ತಿಂಗಳು ಆಗಿಹೋಯ್ತು.
- ಆಗಲೇ ವರ್ಷ ಮುಗಿಯುತ್ತ ಬಂತು.
- ಆಗಲೇ ನಮ್ಮ ಬದುಕಿನ 40, 50, 60 ವರ್ಷಗಳು ಮುಗಿದು ಹೋದವು.
- ಆಗಲೇ ನಮ್ಮ ಪೇರೆಂಟ್ಸ್, ಫ್ರೆಂಡ್ಸ್ ಒಬ್ಬೊಬ್ಬರಾಗಿ ಬಿಟ್ಟು ಹೋದರು.
ಈಗ ಬಹಳ ಹೊತ್ತಾಗಿದೆ ಮತ್ತೆ ಹಿಂದೆ ಹೋಗುವುದಕ್ಕೆ….. ಸರಿ ಆಗಿದ್ದು ಆಗಿ ಹೋಯ್ತು, ಈಗ ಉಳಿದಿರುವ ಬಾಕಿ ಬದುಕನ್ನ ಸಿರೀಯಸ್ ಆಗಿ ಬದುಕುವ ಪ್ರಯತ್ನ ಮಾಡೋಣ. “ಆಮೇಲೆ” ಎನ್ನುವ ಪದವನ್ನ ನಾವು ಹೇಗೆ ಬಳಸುತ್ತೇವೆಯೆಂದರೆ ಅದು ನಮಗಾಗಿ ಕಾಯುತ್ತ ಕುಳಿತಿದೆ ಎನ್ನುವ ಹಾಗೆ. ಆಮೇಲೆ ಯನ್ನ ನಮ್ಮ ಬದುಕಿನಿಂದ ತೆಗೆದುಬಿಡೋಣ. ಏಕೆಂದರೆ ನಮಗೆ ಗೊತ್ತಿಲ್ಲ,
- ಆಮೇಲೆ ಕಾಫೀ ತಣ್ಣಗಾಗುತ್ತದೆ.
- ಆಮೇಲೆ ನಮ್ಮ ಪ್ರಯಾರಿಟಿಗಳು ಬದಲಾಗುತ್ತವೆ.
- ಆಮೇಲೆ ನಮ್ಮ ಚಾರ್ಮ ಇಲ್ಲವಾಗುತ್ತದೆ
- ಆಮೇಲೆ ಆರೋಗ್ಯ ಹಾಳಾಗುತ್ತದೆ
- ಆಮೇಲೆ ಮಕ್ಕಳು ಬೆಳೆದುಬಿಡುತ್ತಾರೆ
- ಆಮೇಲೆ ತಂದೆ ತಾಯಿಗೆ ವಯಸ್ಸಾಗಿಬಿಡುತ್ತದೆ.
- ಆಮೇಲೆ ನಮ್ಮ ಪ್ರಾಮಿಸ್ ಗಳು ಮರೆತು ಹೋಗಿಬಿಡುತ್ತವೆ.
- ಆಮೇಲೆ ದಿನ, ರಾತ್ರಿಯಾಗಿಬಿಡುತ್ತದೆ
- ಆಮೇಲೆ ಬದುಕು ತೀರಿಹೋಗಿಬಿಡುತ್ತದೆ.
ಆಮೇಲೆ ಎಲ್ಲಕ್ಕೂ ಸಮಯ ಮೀರಿ ಹೋಗಿಬಿಟ್ಟಿರುತ್ತದೆ. ಆದ್ದರಿಂದ ಯಾವ ಮುಖ್ಯವಾದುದ್ದನ್ನೂ ಆಮೇಲೆ ಗೆ ಬಿಡುವುದು ಬೇಡ. ಆಮೇಲೆ ಎನ್ನುತ್ತ ಕುಳಿತೆವಾದರೆ, ನಮ್ಮ ಬೆಸ್ಟ್ ಕ್ಷಣಗಳನ್ನ, ನಮ್ಮ ಬೆಸ್ಟ್ ಅನುಭವಗಳನ್ನ, ನಮ್ಮ ಬೆಸ್ಟ್ ಸಂಗಾತಿಗಳನ್ನ ಕಳೆದುಕೊಂಡು ಬಿಡುತ್ತೇವೆ.
The day is today… The moment is now…
ಈಗಲೇ ಮಾಡಬೇಕಿರುವ ಸಂಗತಿಗಳನ್ನ ಆಮೇಲೆ ಗೆ ಮುಂದುಹಾಕುವ ವಯಸ್ಸಿನಲ್ಲಿ ನಾವು ಈಗ ಇಲ್ಲ. ಆಮೇಲೆ, ಯಾವತ್ತೂ ನಮಗಾಗಿ ಕಾಯುತ್ತ ಕುಳಿತಿರುವುದಿಲ್ಲ.

