ಕನ್ನಡಕ್ಕೆ : ಚಿದಂಬರ ನರೇಂದ್ರ
ಒಂದು ದಿನ ನರೆಮನೆಯವನು ಸಿಟ್ಟಿನಿಂದ ಧುಮುಗುಡುತ್ತ ನಸ್ರುದ್ದೀನ್ ನ ಮನೆಗೆ ಬಂದ.
“ನಸ್ರುದ್ದೀನ್ ನಿನ್ನ ನಾಯಿ ನನ್ನ ಹೆಂಡತಿಯ ಕಾಲು ಕಚ್ಚಿದೆ. ನೀನು ಇದಕ್ಕೆ ಪರಿಹಾರ ಕೊಡಲೇ ಬೇಕು”
“ಖಂಡಿತ ನನ್ನ ನಾಯಿ ತಪ್ಪು ಮಾಡಿದೆ. ಇದಕ್ಕೆ ಎರಡು ಪರಿಹಾರ ಉಂಟು. ಮೊದಲನೇಯದು ನಿನ್ನ ನಾಯಿ ನನ್ನ ಹೆಂಡತಿಯ ಕಾಲು ಕಚ್ಚಲಿ ಇಲ್ಲವಾದರೆ ಎರಡನೇಯದು ನಿನ್ನ ಹೆಂಡತಿ ನನ್ನ ನಾಯಿಯನ್ನು ಕಚ್ಚಲಿ. ಆಯ್ಕೆ ನಿನ್ನದೇ”
ನಸ್ರುದ್ದೀನ್ ಉತ್ತರಿಸಿದ.

