ನಸ್ರುದ್ದೀನನ ವಿತಂಡ ವಾದ! : Tea time story

ಒಂದು ದಿನ ಕಾಫೀ ಹೌಸ್ ನಲ್ಲಿ ನಸ್ರುದ್ದೀನ್ ಗೂ ಮತ್ತು ಅವನ ಗೆಳೆಯರಿಗೂ ವಾದ ಶುರುವಾಯಿತು.

“ ಮೀನಿನಂಥ ಪ್ರಾಣಿ ಈ ಜಗತ್ತಿನಲ್ಲೇ ಇಲ್ಲ. ಆದರೆ ಯಾರೂ ಮೀನಿಗೆ ಕೊಡಬೇಕಾದ ಗೌರವ ಕೊಡುವುದಿಲ್ಲ. ಮೀನಿಗಿರುವಂಥ ತಿಳುವಳಿಕೆ, ಸಭ್ಯತೆ ಬೇರೆ ಯಾರಿಗೂ ಇಲ್ಲ. ಮನುಷ್ಯ ಮಾಡುವ ಯಾವುದೇ ಕೆಲಸ ತೆಗೆದುಕೊಳ್ಳಿ, ಮೀನು ಆ ಕೆಲಸವನ್ನು ಅವನಿಗಿಂತ ಚೆನ್ನಾಗಿ ಮಾಡುತ್ತದೆ”. ನಸ್ರುದ್ದೀನ್ ತನ್ನ ವಾದ ಮಂಡಿಸಿದ.

“ಸಾಧ್ಯವೇ ಇಲ್ಲ” ನಸ್ರುದ್ದೀನ್ ನ ಗೆಳೆಯರು ಪ್ರತಿಭಟಿಸಿದರು. “ಮೀನು ಮನುಷ್ಯನಿಗಿಂತ ಚೆನ್ನಾಗಿ ಮಾತನಾಡುವುದಿಲ್ಲ. ಅದು ಬಿಡಿ, ಮೀನು ಮಾತೇ ಆಡುವುದಿಲ್ಲ. ನಾವು ಸಾವಿರಾರು ಮೀನು ನೋಡಿದ್ದೇವೆ ಆದರೆ ಒಂದೇ ಒಂದು ಮಾತನಾಡುವ ಮೀನು ನೋಡಿಲ್ಲ”. ಗೆಳೆಯರು ತಮ್ಮ ಪ್ರತಿವಾದ ಮಂಡಿಸಿದರು.

“ನೀರಿನಲ್ಲಿರುವಾಗ ಯಾರಿಗೂ ಮಾತನಾಡುವುದು ಸಾಧ್ಯವಿಲ್ಲ, ಮನುಷ್ಯನಿಗೂ”

ನಸ್ರುದ್ದೀನ್ ತನ್ನ ವಾದ ಸಮರ್ಥಿಸಿಕೊಂಡ.


ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.