ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಹಸಿರು ತುಂಬಿದ್ದ ಬೆಟ್ಟದ ಮೇಲೊಂದು ಬಿಳಿಯ ಮನೆ
ತಿರುಗಾಡಲು ಹೋಗಿದ್ದ ಮೂವರು ಗೆಳೆಯರಿಗೆ ಆ ಮನೆ ದೂರದಿದಲೇ ಕಣ್ಣಿಗೆ ಬಿತ್ತು
ಅದು ಮರುಕಮ್ಮನ ಮನೆ
ಮುದುಕಿ ಅವಳು
ಮಾಟ ಮಾಡತಾಳೆ ಅಂದ ಒಬ್ಬನು
ತಪ್ಪು
ಮರುಕಮ್ಮ ಬಹಳ ಸುಂದರಿ
ಎಷ್ಟೋ ಜನ ಅವಳ ಕನಸು ಕಾಣತಾರೆ
ಅಲ್ಲಿ ಕಾಣೋದು ಅವಳ ಕನಸಿನ ಮನೆ
ಅಲ್ಲೇ ಇರತಾಳೆ ಅವಳು ಅಂದ ಇನ್ನೊಬ್ಬನು
‘ನೀವಿಬ್ಬರೂ ಹೇಳಿದ್ದು ನಿಜವಲ್ಲ
ಮರುಕಮ್ಮ ದೊಡ್ಡ ಜಮೀನುದಾರಿಣಿ
ಸುತ್ತ ಮುತ್ತ ಸಾವಿರ ಎಕರೆ ಭೂಮಿ ಅವಳಿಗೆ ಸೇರಿದ್ದು
ಕೆಲಸದವರ ರಕ್ತ ಹೀರಿ ಕಾಟ ಕೊಡುವ ದುಷ್ಟೆ ಅವಳು ಅಂದ ಮೂರನೆಯವನು
ಮೂವರೂ ಮರುಕಮ್ಮನ ಬಗ್ಗೆಯೇ ಮಾತಾಡುತ್ತ ನಡೆದರು
ದಾರಿಯಲ್ಲಿ ಮುದುಕನೊಬ್ಬ ಎದುರಿಗೆ ಬಂದ
‘ಅಜ್ಜಾ
ಬೆಟ್ಟದ ಮೇಲೆ ಇದೆಯಲ್ಲಾ ಆ ಬಿಳೀ ಮನೆಯಲ್ಲಿರೋ ಮರುಕಮ್ಮ ಗೊತ್ತಾ ನಿನಗೆ ಅಂತ ಕೇಳಿದರು
ಮುದುಕನ ಮುಖದಲ್ಲಿ ತೆಳ್ಳನೆಯ ನಗು ಮೂಡಿತು
ನನಗೀಗ ತೊಂಬತ್ತು ವರ್ಷ
ನಾನು ಹುಡುಗನಾಗಿದ್ದಾಗ ಮರುಕಮ್ಮನ ಬಗ್ಗೆ ಕೇಳಿದ್ದೆ
ಆ ಮರುಕಮ್ಮ ಸತ್ತು ಎಂಬತ್ತು ವರ್ಷ ಕಳೆದವು
ಈಗ ಆ ಮನೆಯಲ್ಲಿ ಗೂಬೆ ನರಿ ನಾಯಿ ಇದಾವೆ
ದೆವ್ವ ಕೂಡ ಇದೆ ಅನ್ನುತ್ತಾರಪ್ಪಾ ಅಂದ.

