ಮೂವರು ಮುಸ್ಲೀಂ ಕಲಾವಿದರು ಸೇರಿಕೊಂಡು ಸೃಷ್ಟಿ ಮಾಡಿದ ಅನನ್ಯ ಕೃಷ್ಟ ಭಜನ್ ರೂಪುಗೊಂಡ ಬಗೆ ಇದು… । ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ
ನಾಳೆ ಕೃಷ್ಣ ಭಜನ್ ರಿಕಾರ್ಡ ಮಾಡಬೇಕು ಎಲ್ಲ ಶುದ್ಧ ಭಾವನೆಗಳೊಂದಿಗೆ ಬನ್ನಿ ಅಂತ ತಮ್ಮ ಟೀಮಿನವಿರಿಗೆಲ್ಲ ತಾಕೀತು ಮಾಡಿರುತ್ತಾರೆ ಸಂಗೀತ ನಿರ್ದೇಶಕರು. ಅವತ್ತು ಆ ಕೃಷ್ಣ ಭಜನ್ ರಿಕಾರ್ಡ್ ಆಗತ್ತೆ, ಹಾಡುಗಾರ ಸಂಗೀತ ನಿರ್ದೇಶಕರನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತ ಅವರ ಸಂಗೀತ ಸಂಯೋಜನೆಯನ್ನ ಬಾಯ್ತುಂಬ ಹೊಗಳುತ್ತಾನೆ. ಇದರಲ್ಲಿ ನನ್ನದೇನೂ ಇಲ್ಲ, ಈ ಹಾಡಿನೊಳಿಗಿನ ಭಾವ, ನಿನ್ನ ತನ್ಮಯತೆ ಮತ್ತು ರಾಗ್ ಮಾಲ್ ಕೌಂಸ್ ನ ಕಮಾಲ್ ಇದು ಎನ್ನುತ್ತಾರೆ ಸಂಗೀತ ನಿರ್ದೇಶಕರು.
ಅಂದು ರಿಕಾರ್ಡ ಆದ ಹಾಡು, ಬೈಜು ಬಾವರಾ ಚಿತ್ರದ್ದು … ಮನ ತರಪತ್ ಹರಿ ದರಶನ ಕೋ ಆಜ್ ಮನ್……. ಈ ಕೃಷ್ಣ ಭಜನ್ ಬರೆದದ್ದು ಶಕೀಲ್ ಬದಾಯೂನಿ, ಈ ಹಾಡನ್ನ ಹಾಡಿದ್ದು ಮಹಮ್ಮದ್ ರಫೀ, ಈಶ್ವರನ ಪ್ರಿಯ ರಾಗ ಎಂದು ಹೆಸರುವಾಸಿಯಾಗಿರುವ ರಾಗ್ ಮಾಲ್ ಕೌಂಸ್ ಲ್ಲಿ ಈ ಭಜನ್ ನ ಸಂಗೀತ ಸಂಯೋಜನೆ ಮಾಡಿದವರು ನೌಷಾದ್ ಅಲಿ.
ಮೂವರು ಮುಸ್ಲೀಂ ಕಲಾವಿದರು ಸೇರಿಕೊಂಡು ಸೃಷ್ಟಿ ಮಾಡಿದ ಅನನ್ಯ ಕೃಷ್ಟ ಭಜನ್ ಇದು.
ಪ್ರಸಿದ್ಧ ಸಂಗೀತಕಾರ ನೌಶಾದ್ ಅಲಿ ಒಂದು ಅಪರೂಪದ ಘಟನೆಯನ್ನು ನೆನಪಿಸಿಕೊಳ್ಳುವುದು ಹೀಗೆ

