ಎಲ್ಲ ರೆಸಲ್ಯೂಷನ್ ಗಳನ್ನು ಡ್ರಾಪ್ ಮಾಡಿ! : ಓಶೋ

ಹೊಸ ವರ್ಷಕ್ಕೆ ನೀವು ಮಾಡಲೇಬೇಕಾದ ರೆಸಲ್ಯೂಷನ್ ಇದೊಂದೆ : ನಾನು ಯಾವತ್ತೂ ಯಾವ ರೆಸಲ್ಯೂಷನ್ ಮಾಡುವುವುದಿಲ್ಲ ಎನ್ನುವ ನಿರ್ಧಾರ! ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹೊಸ ವರ್ಷಕ್ಕೆ ಯಾವ ರೆಸಲ್ಯೂಷನ್ ಗಳನ್ನೂ ಮಾಡಬೇಡಿ.

ಹೊಸ ವರ್ಷಕ್ಕೆ ಒಂದೇ ಒಂದು ರೆಸಲ್ಯೂಷನ್ (ಸಂಕಲ್ಪ) ಮಾಡಬೇಕು ಅಂದ್ರೆ ನೀವು ಯಾವ ರೆಸಲ್ಯೂಷನ್ ನ ಸಜೆಸ್ಟ್ ಮಾಡ್ತೀರಾ?

ಹೊಸ ವರ್ಷಕ್ಕೆ ನೀವು ಮಾಡಲೇಬೇಕಾದ ರೆಸಲ್ಯೂಷನ್ ಇದೊಂದೆ : ನಾನು ಯಾವತ್ತೂ ಯಾವ ರೆಸಲ್ಯೂಷನ್ ಮಾಡುವುವುದಿಲ್ಲ ಎನ್ನುವ ನಿರ್ಧಾರ. ಏಕೆಂದರೆ ಈ ಎಲ್ಲ ರೆಸಲ್ಯೂಷನ್ ಗಳು ಭವಿಷ್ಯವನ್ನು ಕಟ್ಟಿಹಾಕುತ್ತವೆ. ಎಲ್ಲ ರೆಸಲ್ಯೂಷನ್ ಗಳು ಒಂದು ರೀತಿಯ ಬಂಧನಗಳು. ನಾಳೆಗಾಗಿ ನೀವು ಇವತ್ತು ಸಂಕಲ್ಪ ಮಾಡುವುರಾದರೆ, ನೀವು ನಾಳೆಯನ್ನು ನಾಶ ಮಾಡುತ್ತಿದ್ದೀರಿ.

ನಾಳೆ ಗೆ ತನ್ನ ಸ್ವಂತದ ಅಸ್ತಿತ್ವವನ್ನು ಹೊಂದಲು ಅವಕಾಶ ಮಾಡಿಕೊಡಿ.
ಅದು ತನ್ನದೇ ಆದ ರೀತಿಯಲ್ಲಿ ನಮ್ಮನ್ನು ಸ್ವಾಗತಿಸಲಿ.
ಅದು ತನ್ನದೇ ಆದ ಉಡುಗೊರೆಗಳನ್ನು ನಮಗೆ ನೀಡಲಿ.

ರೆಸಲ್ಯೂಷನ್ ಎಂದರೆ ನಾಳೆ ನೀವು ಇದಕ್ಕೆ ಮಾತ್ರ ಅವಕಾಶ ಮಾಡಿಕೊಡುತ್ತೀರ ಆದರೆ ಅದಕ್ಕೆ ನಿರ್ಬಂಧ ಹಾಕುತ್ತೀರ. ರೆಸಲ್ಯೂಷನ್ ಎಂದರೆ ನೀವು ಸೂರ್ಯನಿಗೆ ಪಶ್ಚಿಮದಲ್ಲಿ ಹುಟ್ಟಲು ಹೇಳುತ್ತೀರ ಪೂರ್ವದಲ್ಲಲ್ಲ. ಅಕಸ್ಮಾತ್ ಅವನೇನಾದರೂ ಪೂರ್ವದಲ್ಲಿ ಹುಟ್ಟಿಬಿಟ್ಟರೆ ನೀವು ನಿಮ್ಮ ಕಿಟಕಿಯನ್ನು ತೆರೆಯುವುದಿಲ್ಲ. ನೀವು ನಿಮ್ಮ ಕಿಟಕಿಗಳನ್ನು ಪಶ್ಚಿಮಕ್ಕೆ ತೆರೆದುಕೊಂಡು ಕುಳಿತಿರುತ್ತೀರ.

ರೆಸಲ್ಯೂಷನ್ ಎಂದರೇನು?
ರೆಸಲ್ಯೂಷನ್ ಎಂದರೆ ಸಂಘರ್ಷ.
ರೆಸಲ್ಯೂಷನ್ ಎಂದರೆ ಅಹಂ.
ರೆಸಲ್ಯೂಷನ್ ಎಂದರೆ “ನಾನು ಸಹಜವಾಗಿ ಬದುಕುವುದಿಲ್ಲ” ಎಂದು ಘೋಷಣೆ ಮಾಡುವುದು.
ಮತ್ತು ನೀವು spontaneous ಆಗಿ ಬದುಕುವುದಿಲ್ಲವಾದರೆ, ನೀವು ಬದುಕುವುದೇ ಇಲ್ಲ, ನೀವು ಸೋಗು ಹಾಕುತ್ತಿದ್ದೀರಿ.

ಆದ್ದರಿಂದ ಈ ಒಂದು ರೆಸಲ್ಯೂಷನ್ ಮಾತ್ರ ಮಾಡಿ :
ನಾನು ಯಾವತ್ತೂ ಯಾವ ರೆಸಲ್ಯೂಷನ್ ಗಳನ್ನೂ ಮಾಡುವುದಿಲ್ಲ.
ಎಲ್ಲ ರೆಸಲ್ಯೂಷನ್ ಗಳನ್ನು ಡ್ರಾಪ್ ಮಾಡಿ.
ಬದುಕು ಸಹಜವಾಗಿ ಕ್ಷಣ ಕ್ಷಣಕ್ಕೆ ಹೊಸದಾಗಿ ಅರಳಲಿ.
ಇರುವ ಒಂದೇ ಒಂದು ಬಂಗಾರದ ನಿಯಮ ಎಂದರೆ, ಯಾವ ಬಂಗಾರದ ನಿಯಮವೂ ಇಲ್ಲ.


Source: Osho / Walk Without Feet, Fly Without Wings and Think Without Mind`

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.