ಪ್ರಸಿದ್ಧ ಕವಿಗಳಾದ ಸಾಹಿರ್ (ಲೂಧಿಯಾನ್ವಿ) ಮತ್ತು ಅಮೃತಾ (ಪ್ರೀತಂ) ರ ಅಪರೂಪದ ಪ್ರಣಯವನ್ನು ಕುರಿತು ಕೇಳಲಾದ ಪ್ರಶ್ನೆಗೆ ಈ ಇಬ್ಬರನ್ನೂ ಬಹಳ ಹತ್ತಿರದಿಂದ ಬಲ್ಲ ಕವಿ ಜಾವೇದ್ ಅಖ್ತರ್ ಹೀಗೆ ಉತ್ತರಿಸುತ್ತಾರೆ… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
“ಇಂಥ ಪ್ರಸಂಗಗಳು ಬಹಳ ಆಗುತ್ತಿರುತ್ತವೆ ಪ್ರತಿಯೊಬ್ಬರ ಬದುಕಿನಲ್ಲೂ. ನಾವು ಮೂರ್ಖರು ಬಹಳ ಬೆರಗಿನಲ್ಲಿ, ಕುತೂಹಲದಲ್ಲಿ ಇಂಥ ಕತೆಗಳನ್ನ ಕೇಳುತ್ತಿರುತ್ತೇವೆ. ಈ ಎಲ್ಲವೂ ವ್ಯಕ್ತಿತ್ವಗಳನ್ನು ಅಲಂಕರಿಸುವ ಸಾಧನಗಳು. ಅವರಿಬ್ಬರ ಪ್ರೇಮ ನಿಜವೇ ಆಗಿದ್ದರೆ ಅವರು ಒಂದಾಗಿ ಇರಬಹುದಾಗಿತ್ತು. ಯಾರು ಅವರಿಬ್ಬರನ್ನು ಬೇರೆ ಮಾಡುತ್ತಿದ್ದರು, ಯಾರಾದರೂ ಅವರನ್ನು ಜೈಲಿಗೆ ಹಾಕುತ್ತಿದ್ದಾರಾ? ಆದರೆ ಅದು ಹಾಗಲ್ಲ, ಇದರ ಕೊನೆ ಹೇಗಿರಬೇಕೆಂದರೆ ಪ್ರೇಮ ಪ್ರಕರಣಗಳು ವಿಫಲವಾಗಬೇಕು. ಮತ್ತು ಅಲ್ಲೊಂದು ದುಃಖ ಹುಟ್ಟಿಕೊಳ್ಳಬೇಕು. ಒಂದು ಕಡೆ ಇವರ ಬದುಕಿನಲ್ಲಿ ಶ್ರೀಮಂತಿಕೆ ಇದೆ, ಪ್ರಸಿದ್ಧಿ ಇದೆ, ಅಧಿಕಾರ ಇದೆ. ಮತ್ತು ನಿಮಗೆ ಈ ಬಗ್ಗೆ ಕೂಡ ಮಾಹಿತಿ ಇದೆ ಇವರಿಗೆ ಕೆಲವು ಅಪರೂಪದ ದುಃಖಗಳೂ ಇವೆ. ಈ ಬಗೆಯ ದುಃಖಗಳು ಬಹಳ ಪ್ರಿಯವಾಗಿರುತ್ತವೆ. ಮತ್ತು ಇಂಥ ದುಖಗಳಿಂದ ವ್ಯಕ್ತಿತ್ವಗಳಿಗೆ ಒಂದು ಅಪೂರ್ವ ಆಳ ಪ್ರಾಪ್ತವಾಗುತ್ತದೆ. ಈ ವಿಷಯ ಸಾಹಿರ್ ಮತ್ತು ಅಮೃತಾ ಇಬ್ಬರಿಗೂ ಗೊತ್ತಿತ್ತು. ಆದ್ದರಿಂದ ಇಂಥವನ್ನೆಲ್ಲ ಬಹಳ ಸಿರೀಯಸ್ ಆಗಿ ತೆಗೆದುಕೊಳ್ಳಬೇಡಿ. ಇವು ಕೇವಲ ಕತೆಗಳು. ಈ ವಿಫಲ ಪ್ರೇಮದ ಕಾರಣವಾಗಿ ಅವರು ಬಹಳ ದುಃಖಿಗಳಾಗಿದ್ದರು ಎನ್ನುವುದೆಲ್ಲ ಕಟ್ಟು ಕಥೆ”.

