ಈ ತಂತ್ರವನ್ನು ಯುದ್ಧಗಳಲ್ಲಿ ಮಾತ್ರವಲ್ಲ, ನೆಗೋಶಿಯೋಷನ್ ಗಳಲ್ಲಿ, conflict management ಗಳಲ್ಲಿ, ಮತ್ತು ವ್ಯಾಪಾರಿ ಸ್ಪರ್ಧೆಗಳಲ್ಲಿಯೂ ಉಪಯೋಗ ಮಾಡಬಹುದು. ಯಾವುದು ಆ ತಂತ್ರ? ಓದಿ… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
“ವೈರಿಗೆ ಪಾರಾಗಲು ದಾರಿಯೊಂದನ್ನು ಬಿಡಬೇಕು ; ಇಲ್ಲವಾದರೆ ಅವನು ಕೊನೆಯವರೆಗೂ ನಿಮ್ಮೊಡನೆ ಭೀಕರವಾಗಿ ಹೋರಾಡುತ್ತಾನೆ” ಅನ್ನುತ್ತಾನೆ ಆರ್ಟ್ ಆಫ್ ಕೃತಿಯ ಕರ್ತೃ ಸುನ್ ತ್ಸೇ.
ಈ ಮಾತು ಮಿಲಿಟರಿ ಹೋರಾಟ ತಂತ್ರದ ಒಂದು ಅತ್ಯಂತ ಬುದ್ಧಿವಂತಿಕೆಯ ಮಾತು. ಎಲ್ಲ ಕಡೆಯಿಂದಲೂ ಸುತ್ತುವರೆಯಲ್ಪಟ್ಟಿರುವ ವೈರಿ ಬೇರೆ ದಾರಿಯಿಲ್ಲದೇ, ಯುದ್ಧಕ್ಕೆ ತನ್ನನ್ನು ತಾನು ಪೂರ್ಣವಾಗಿ ಅರ್ಪಿಸಿಕೊಂಡು ಅತ್ಯಂತ ಭೀಕರವಾಗಿ ಯುದ್ಧಕ್ಕೆ ಮುಂದಾಗುತ್ತಾನೆ. ಅವನ ಈ ಸ್ಥಿತಿಯ ಕಾರಣವಾಗಿ ಅವನಿಗೆ ಗೆಲ್ಲುವ ಅವಕಾಶವೂ ಉಂಟು.
ಆದರೆ, ನೀವು ಅವನಿಗೆ ಪಾರಾಗಿ ಹೋಗಲು ದಾರಿಯೊಂದನ್ನು ಬಿಟ್ಟಿದ್ದರೆ, ಅವನು ಈ ಸುಲಭದ ಹಾದಿಯನ್ನು ಆಯ್ಕೆ ಮಾಡಿಕೊಂಡು ಓಡಿಹೋಗಬಹುದು. ಆಗ ನಮ್ಮ ಗೆಲವು ಸುಲಭವಾಗುತ್ತದೆ ಯಾವುದೆ ಹೆಚ್ಚಿನ ಹಾನಿಯಿಲ್ಲದೆ. ಈ ತಂತ್ರವನ್ನು ಯುದ್ಧಗಳಲ್ಲಿ ಮಾತ್ರವಲ್ಲ, ನೆಗೋಶಿಯೋಷನ್ ಗಳಲ್ಲಿ, conflict management ಗಳಲ್ಲಿ, ಮತ್ತು ವ್ಯಾಪಾರಿ ಸ್ಪರ್ಧೆಗಳಲ್ಲಿಯೂ ಉಪಯೋಗ ಮಾಡಬಹುದು. ಪ್ರತಿಸ್ಪರ್ಧಿಗೆ ಒಂದು ಗೌರವಯುತ ಪಾರಾಗುವ ಹಾದಿಯ ಅವಕಾಶ ಮಾಡಿಕೊಡುವುದು, ಇರುವ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸಿದೆ ನಿಮ್ಮ ಗುರಿಯನ್ನು ಮುಟ್ಟಲು ಸಹಾಯ ಮಾಡುವುದು.

