ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಸಿನೇಮಾ ನಟನೆ, ನಟರಿಗೆ ಬಹಳ ಸುಲಭ. ವಾಸ್ತವದಲ್ಲಿ ಅದು ನಟರ ಮಾಧ್ಯಮವೇ ಅಲ್ಲ. ಸಿನೇಮಾ ನಿರ್ದೇಶಕನ ಮಾಧ್ಯಮ. ಸಿನೇಮಾದ ಪ್ರತಿಯೊಂದೂ ನಿರ್ದೇಶಕನ ಮೇಲೆ ಡಿಪೆಂಡ್ ಆಗಿರುತ್ತದೆ. ಅದಕ್ಕೇ ಆಲ್ಫರ್ಡ ಹಿಚ್ ಕಾಕ್ ಹೇಳ್ತಾ ಇದ್ದ film actors should be treated as cattle’s ಅಂತ.
ಅದೇ ಥಿಯೇಟರ್, ಸಂಪೂರ್ಣವಾಗಿ ನಟರ ಮಾಧ್ಯಮ. ಅವರ ಪೂರ್ಣ ಪ್ರತಿಭೆ ಬಳಕೆಯಾಗೋದು ನಾಟಕಗಳಲ್ಲಿ ಮಾತ್ರ. ಅಲ್ಲಿ ನಿರ್ದೇಶಕ ಹಿನ್ನೆಲೆಯಲ್ಲಿ ಮಾತ್ರ.
ಆದರೆ ಟೆಲಿವಿಜನ್ ರೈಟರ್ ಗಳ ಮಾಧ್ಯಮ. ಅಲ್ಲಿ ಲೇಖಕನಿಗೆ ತನ್ನ ವಿಚಾರಗಳನ್ನು ಪೂರ್ತಿಯಾಗಿ ಅಭಿವ್ಯಕ್ತಿಸುವ ಅವಕಾಶ, ಸಮಯ ಎರಡೂ ಇದೆ.
ಹೀಗೆ ಸಿನೆಮಾ, ಥಿಯೆಟರ್ ಮತ್ತು ಟೆಲಿವಿಜನ್ ಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದವರು ಪ್ರಸಿದ್ಧ ನಟ, ನಿರ್ದೇಶಕ, ತಿಗ್ಮಾಂಶು ಧೂಲಿಯಾ.

