ಒಬಾಮಾ ಲಾಜಿಕ್‌ಗೆ ಮಿಷೆಲ್ ಕೌಂಟರ್! ಅದೇನು ಅಂತ ನೀವೇ ಓದಿ… । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಒಂದು ದಿನ ಅಮೇರಿಕದ ಅಧ್ಯಕ್ಷ ಬರಾಕ್ ಓಬಾಮ ತಮ್ಮ ಹೆಂಡತಿ ಮಿಷೆಲ್ ಓಬಾಮಾ ಜೊತೆಗೂಡಿ ಒಂದು ಪುಟ್ಟ ರೆಸ್ಟೊರೆಂಟ್ ಗೆ ಹೋಗಿರ್ತಾರೆ. ಅವರ ಊಟ ಎಲ್ಲ ಆದ ಮೇಲೆ ಸರ್ವರ್, ಮಿಷೇಲ್ ಅವರ ಹತ್ತಿರ ಬಂದು ಹೇಳ್ತಾನೆ, “ನಮ್ಮ ರೆಸ್ಟಾರೆಂಟ್ ನ ಮಾಲಿಕ ನಿಮ್ಮನ್ನ ಪರ್ಸನಲ್ ಆಗಿ ಭೇಟಿ ಮಾಡಬೇಕಂತೆ, ಕಿಚನ್ ಗೆ ಬರ್ತೀರಾ? “
ಮಿಷೆಲ್ , ಕಿಚನ್ ಗೆ ಹೋಗಿ ನೋಡಿದಾಗ ಅಲ್ಲಿ ಅವರಿಗೆ ಆಶ್ಚರ್ಯ ಕಾದಿರತ್ತೆ. ಆ ರೆಸ್ಟೊರೆಂಟ್ ನ ಮಾಲಿಕ ಬೇರಾರೂ ಅಲ್ಲ, ಮಿಷೆಲ್ ರ ಹಳೆಯ ಬಾಯ್ ಫ್ರೆಂಡ್ ಆಗಿರ್ತಾನೆ. ಮಿಷೆಲ್ , ಹೊರ ಬಂದು ಈ ವಿಷಯ ಬರಾಕ್ ಗೆ ಹೇಳಿದಾಗ, ಬರಾಕ್ ಹೇಳ್ತಾರೆ, “ ನೋಡು ನೀನು ಆಗ ಅವನ್ನ ಮದುವೆ ಆಗಿದ್ರೆ, ಈ ಪುಟ್ಟ ಸುಂದರ ರೆಸ್ಟೊರೆಂಟ್ ಗೆ ಮಾಲಕಿನ್ ಆಗ್ತಾ ಇದ್ದೆ”.
“ ಉಹೂಂ, ನಾನು ಅಂದು ಅವನ್ನ ಮದುವೆ ಆಗಿದ್ರೆ, ಅವ ಈಗ ಅಮೇರಿಕದ ಪ್ರಸಿಡೆಂಟ್ ಆಗಿರ್ತಾ ಇದ್ದ” ಮಿಷೆಲ್ ಥಟ್ಟನೆ ತಮ್ಮ ಗಂಡನಿಗೆ ಉತ್ತರ ಕೊಡ್ತಾರೆ!

