ಕಡಿಮೆ ಶಕ್ತಿ ( Low Energy ) : ಓಶೋ 365 #Day 100

Low energy ಇರುವುದು ತಪ್ಪು ಎಂದು ಯಾವ ಕಾರಣಕ್ಕೂ ತಿಳುಯಬೇಡಿ, ಹಾಗೆಯೇ High energy ಯ ಜೊತೆ ಇರುವುದು ಎಲ್ಲವೂ ಸರಿ ಎಂದು ಕೂಡ ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ

ತುದಿಗಾಲ ಮೇಲೆ ನಿಂತವ
ಉರುಳಿ ಬೀಳುವ ಸಾಧ್ಯತೆಗಳೇ ಹೆಚ್ಚು.

ಎಲ್ಲರಿಗಿಂತ ಮುಂದೆ ಓಡಿ ಹೋದವ
ಬಹಳ ದೂರ ಹೋಗಲಾರ.

ಮಿಂಚಲು ಪ್ರಯತ್ನಿಸುವವನ
ಬೆಳಕು, ಕಂದುತ್ತ ಹೋಗುವುದು.

ತನ್ನನ್ನು ತಾನು ಸಾರಿಕೊಳ್ಳುವವ
ತನಗೆ ತಾನೇ ಅಪರಿಚಿತ.

ಪರರ ಮೇಲೆ ಹತೋಟಿ ಸಾಧಿಸಬಲ್ಲವ
ತನ್ನ ಮೇಲೆ ಅಧಿಕಾರ ಹೊಂದಲು ಅಸಮರ್ಥ.

ಕೆಲಸಕ್ಕೆ ಜೋತು ಬೀಳುವವ
ಶಾಶ್ವತವಾದದ್ದನ್ನು ಸೃಷ್ಟಿಸಲಾರ.

ಮಾಡಬೇಕಾದ ಕೆಲಸಮಾಡಿ
ಮರೆತು ಬಿಟ್ಟಾಗ ಮಾತ್ರ
‘ತಾವೋ’ ಜೊತೆಗೆ ಒಪ್ಪಂದ ಸಾಧ್ಯ.

~ ಲಾವೋತ್ಸೇ

ನೀವು High energy ಯನ್ನು ಬಹುತೇಕ ವಿನಾಶಕ ಶಕ್ತಿಯಾಗಿ ಬಳಸಬಹುದು. ಶತ ಶತಮಾನಗಳಿಂದ ಇದನ್ನೇ ಅಲ್ಲವೇ ಈ High energy ಜನ ಮಾಡುತ್ತ ಬಂದಿರುವುದು. ಜಗತ್ತು ಯಾವತ್ತೂ Low energy ಜನರಿಂದ ಕಷ್ಟ ಅನುಭವಿಸಿಲ್ಲ. ಈ ಜನ ಬಹಳ ಮುಗ್ಧ ಜನರು. ಅವರು ಹಿಟ್ಲರ್, ಸ್ಟಾಲಿನ್ ಅಥವಾ ಮುಸೋಲಿನಿ ಆಗುವುದು ಸಾಧ್ಯವಿಲ್ಲ. ಅವರು world war ಗಳನ್ನು ಸೃಷ್ಟಿ ಮಾಡಲಾರರು. ಅವರು ಜಗತ್ತನ್ನು ಗೆಲಲ್ಲು ಮುಂದಾಗಲಾರರು. ಅವರು ಮಹತ್ವಾಕಾಂಕ್ಷಿಗಳಲ್ಲ. ಅವರು ಬಂಡಾಯ ಮಾಡಲಾರರು, ರಾಜಕಾರಣಿಗಳಾಗಲಾರರು. Low energy ತಪ್ಪು ಅದು ಕೇವಲ ಅನಾಸಕ್ತಿಯ ( indifference) ಹಾದಿ ತುಳಿದಾಗ ಮಾತ್ರ. ಅದು ಸಕಾರಾತ್ಮಕವಾಗಿದ್ದಾಗ ಅದರ ಜೊತೆ ಯಾವ ಸಮಸ್ಯೆ ಇಲ್ಲ.

Low Energy ಮತ್ತು High Energy ಗಳ ನಡುವಿನ ವ್ಯತ್ಯಾಸ, ಕೂಗಾಟ ಮತ್ತು ಪಿಸು ಮಾತು ಗಳ ನಡುವಿನ ವ್ಯತ್ಯಾಸದಂತೆ. ಕೂಗಾಟ, High Energy ಆದರೆ ಪಿಸು ಮಾತು Low Energy. ಕೆಲವು ಸಂದರ್ಭಗಳಲ್ಲಿ ಕೂಗಾಟ ತಪ್ಪು ಮತ್ತು ಪಿಸು ಮಾತೇ ಸರಿ. ಕೆಲವರು ಕೂಗಾಟಕ್ಕೆ ಹೊಂದಿಕೊಂಡಿದ್ದರೆ, ಇನ್ನೂ ಕೆಲವರು ಪಿಸು ಮಾತನ್ನು ನೆಚ್ಚಿಕೊಂಡಿದ್ದಾರೆ.

ಒಂದು ದಿನ ಝೆನ್ ಮಾಸ್ಟರ್ ಜೋಶು ನ ಆಶ್ರಮಕ್ಕೆ ಒಬ್ಬ ಅತಿಥಿ ಮೊದಲ ಬಾರಿ ಆಗಮಿಸಿದ್ದ. ಆಶ್ರಮದ ಉದ್ಯಾನವನದಲ್ಲಿ ಪ್ರಖರ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಅಪಾರ ಚೈತನ್ಯದ ಒಬ್ಬ ವೃದ್ಧ ಸನ್ಯಾಸಿ ಧ್ಯಾನ ಮಾಡುತ್ತ ಕುಳಿತಿರುವುದನ್ನ ಆ ಅತಿಥಿ ಗಮನಿಸಿದ. ಆ ಶಕ್ತಿಶಾಲಿ ವೃದ್ಧನ ಬಗ್ಗೆ ಅತಿಥಿಗೆ ಕುತೂಹಲ ಬೆಳೆಯಿತು.

ಉದ್ಯಾನವನದ ಬಾಗಿಲಲ್ಲೇ ಕುಳಿತಿದ್ದ ಕೆಲಸಗಾರನನ್ನು ಅತಿಥಿ ಪ್ರಶ್ನೆ ಮಾಡಿದ. “ ಯಾರು ಆ ತೇಜಸ್ವಿ ಸನ್ಯಾಸಿ? ಅವನೇನಾ ಝೆನ್ ಮಾಸ್ಟರ್ ಜೋಶೋ?

“ ಅಲ್ಲ, ಅಲ್ಲ ನಾನು ಜೋಶು, ಅವ ನನ್ನ ನೆಚ್ಚಿನ ಶಿಷ್ಯ” ಕೆಲಸಗಾರ ಮುದುಕ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.