ಹೆಣ್ಣು ಎನ್ನುವ ಸಂಗತಿಯೇ ಇಲ್ಲವಾಗಿದ್ದರೆ ಏನಾಗುತ್ತಿತ್ತು?

ಜ್ಯೂಡಿತ್ ಅವರ ಪುಸ್ತಕ Gender Trouble ಆಧುನಿಕ ಫಿಲೊಸೊಫಿಯ ಅತ್ಯಂತ ಮಹತ್ವದ ಪುಸ್ತಕಗಳಲ್ಲಿ ಒಂದು. ಏಕೆಂದರೆ ಈ ಪುಸ್ತಕ ಒಂದು ಭಯಾನಕ ಪ್ರಶ್ನೆಯನ್ನು ಕೇಳುತ್ತದೆ. ಸ್ವಾಭಾವಿಕವಾಗಿ ಹೆಣ್ಣು ಎನ್ನುವ ಸಂಗತಿಯೇ ಇಲ್ಲವಾಗಿದ್ದರೆ ಏನಾಗುತ್ತಿತ್ತು? । ಕನ್ನಡಕ್ಕೆ : ಚಿದಂಬರ ನರೇಂದ್ರ

ಇವತ್ತು ಎಲ್ಲರೂ ಫೆಮಿನಿಸಂ ನ ಬಗ್ಗೆ ಮಾತನಾಡುತ್ತಿದ್ದಾರೆ. ಎಲ್ಲರೂ ಮಹಿಳೆಯರ ಅಧಿಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಈ “ಹೆಣ್ಣು” ಎನ್ನುವ ಪದವನ್ನು ಹುಟ್ಟುಹಾಕಿದ್ದು ಅವರನ್ನು ನಿಯಂತ್ರಿಸಲು ಎಂದರೆ ನೀವು ನಂಬುತ್ತೀರಾ? ಅಮೇರಿಕನ್ ಫೆಮಿನಿಸ್ಟ್ ಫಿಲೊಸೊಫರ್ ಜ್ಯೂಡಿತ್ ಬಟ್ಲರ್, ಹೆಣ್ಣು ಎನ್ನುವ ಕ್ಯಾಟಗರಿಯೇ ಸಹಜವಾದದ್ದಲ್ಲ, ಇದು ಕೇವಲ ಕಲ್ಪನೆ ಮಾತ್ರ, ಯಾವ ಪಿತೃಪ್ರಧಾನ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಲಾಗುತ್ತದೆಯೋ ಆ ವ್ಯವಸ್ಥೆಯೇ ಇದನ್ನು ಹುಟ್ಟುಹಾಕಿದ್ದು ಎನ್ನುತ್ತಾರೆ.

ಜ್ಯೂಡಿತ್ ಅವರ ಪುಸ್ತಕ Gender Trouble ಆಧುನಿಕ ಫಿಲೊಸೊಫಿಯ ಅತ್ಯಂತ ಮಹತ್ವದ ಪುಸ್ತಕಗಳಲ್ಲಿ ಒಂದು. ಏಕೆಂದರೆ ಈ ಪುಸ್ತಕ ಒಂದು ಭಯಾನಕ ಪ್ರಶ್ನೆಯನ್ನು ಕೇಳುತ್ತದೆ. ಸ್ವಾಭಾವಿಕವಾಗಿ ಹೆಣ್ಣು ಎನ್ನುವ ಸಂಗತಿಯೇ ಇಲ್ಲವಾಗಿದ್ದರೆ ಏನಾಗುತ್ತಿತ್ತು? ನೀವು ನಿಮ್ಮ ಜನ್ಮಕ್ಕಿಂತಲೂ ಮೊದಲು ಬರೆದಿಡಲಾಗಿರುವ ಸ್ಕ್ರಿಪ್ಟ್ ನ್ನೇ ಅಭಿನಯಿಸುತ್ತಿದ್ದೀರ. ಜ್ಯೂಡಿತ್ performativity ಯ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಆದರೆ ಬಹಳ ಜನ ಇದನ್ನ ತಪ್ಪು ಎಂದು ವಾದ ಮಾಡುತ್ತಾರೆ. ಇದರ ಅರ್ಥ, ಮನುಷ್ಯ ತನ್ನ ಲಿಂಗತ್ವವನ್ನ ತಾನು ಬಟ್ಟೆ ಬದಲಾಯಿಸಿದಂತೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಜನ ತಿಳಿದುಕೊಂಡಿದ್ದರು. ಆದರೆ ಜ್ಯೂಡಿತ್ ಅವರ ಅರ್ಥ ಇದಾಗಿರಲಿಲ್ಲ, ಇನ್ನೂ ಆಳವಾಗಿತ್ತು. ಅವರ ಪ್ರಕಾರ, ಹೆಣ್ಣಿನ ಪಾತ್ರವನ್ನು ನೀವು ಸಹಜವಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ, ಈ ಪಾತ್ರವನ್ನು ಒಪ್ಪಿಕೊಳ್ಳುವಂತೆ ನಿಮ್ಮ ಮೇಲೆ ಒತ್ತಡ ಹೇರಲಾಗುತ್ತದೆ. ಕೂಡುವ ರೀತಿ, ನಗುವ ರೀತಿ, ನಡೆಯುವ ರೀತಿ, ಮಾತನಾಡುವ ರೀತಿ, ಕ್ಷಮೆ ಕೇಳುವ ರೀತಿ ಎಲ್ಲವನ್ನೂ ನಿಮ್ಮ ಮೇಲೆ ಹೇರಲಾಗುತ್ತದೆ. ಈ ಸ್ಕ್ರಿಪ್ಟ್ ನ ಮೊದಲೇ ಬರೆದಿಡಲಾಗಿತ್ತು. ನೀವು ಹುಟ್ಟಿದ ಕೂಡಲೇ ಈ ಪಾತ್ರವನ್ನು ಸ್ಕ್ರಿಪ್ಟ್ ನೊಂದಿಗೆ ನಿಮಗೆ ದಾಟಿಸಲಾಯಿತು. ಮತ್ತು ಪ್ರತಿದಿನ ನೀವು ಈ ಪಾತ್ರವನ್ನ ಒತ್ತಡದಲ್ಲಿ ಅಭಿನಯಿಸುತ್ತಿದ್ದೀರಿ. ಹೀಗೆ ಮಾಡಲು ನಿರಾಕರಿಸಿದಾಗ ಸಮಾಜ ನಿಮ್ಮನ್ನು ಪನಿಶ್ ಮಾಡುತ್ತದೆ.

ಮತ್ತು ಇಲ್ಲಿ ನಿಮಗಾಗಿ ತೋಡಲಾಗಿರುವ ಖೆಡ್ಡಾ ಒಂದನ್ನ ಜ್ಯೂಡಿತ್ ಅನಾವರಣಗೊಳಿಸುತ್ತಾರೆ. ಮಹಿಳೆಯರ ಅಧಿಕಾರಗಳಿಗಾಗಿ ಹೋರಾಡಲು ಫೆಮಿನಿಸಂ ಒಂದು ಸಂಗತಿಯನ್ನು ಹೇಳಬೇಕಾಗುತ್ತದೆ, “we are women protectors give us equal rights “ ಒಮ್ಮೆ ನೀವು ಈ ಐಡೆಂಟಿಟಿಯನ್ನು ಕ್ಲೇಮ್ ಮಾಡಿದರೆ, ಹೆಣ್ಣು ಗಂಡು ವೈರುಧ್ಯಗಳು ಎನ್ನುವ ಕಲ್ಪನೆಯನ್ನು ನೀವು ಒಪ್ಪಿಕೊಂಡಂತೆ. ಹೆಣ್ಣು ಎನ್ನುವುದು ಸ್ವಾಭಾವಿಕ, fixed category ಎಂದು ನೀವು ಒಪ್ಪಿಕೊಂಡುಬಿಡುತ್ತೀರ. ಆದರೆ ಜ್ಯೂಡಿತ್ ಅವರ ವಾದ ಏನೆಂದರೆ, ಇದನ್ನು ಹುಟ್ಟುಹಾಕಿದ್ದು ಕೂಡ ನಿಮ್ಮನ್ನು ತುಳಿಯುತ್ತಿರುವ ಅಧಿಕಾರ ಸಂರಚನೆಯೇ. ಫೆಮಿನಿಸಂ ಗೆ ಒಗ್ಗೂಡಲು “ಹೆಣ್ಣು” ಎನ್ನುವ ಒಂದು ಕ್ಯಾಟಗರಿ ಬೇಕು. ಆದರೆ ಈ ಕ್ಯಾಟಗರಿ ಏನಿದೆ, ಇದನ್ನು ಹುಟ್ಟುಹಾಕಿದ್ದೇ, ನಿಮ್ಮನ್ನು ಪಂಜರದಲ್ಲಿ ಬಂಧಿಸಿಡಲು. ಈ ಪಂಜರವೇ ನಿಮಗೆ ಹೇಳಿಕೊಡುತ್ತದೆ ನೈಜ ಹೆಣ್ಣು ಹೇಗಿರಬೇಕು ಎನ್ನುವುದನ್ನ. ಆಕೆ ಸುಂದರ, ವಿಧೇಯ, ಮಮತಾಮಯಿ ….. ಇತ್ಯಾದಿಯಾಗಿರಬೇಕು.

ಪ್ರತಿಬಾರಿ ನಾನು ಹೆಣ್ಣು ಎನ್ನುವ ಐಡಿಯಾವನ್ನ ನೀವು ಕ್ಲೇಮ್ ಮಾಡಿದಾಗ, ಜೀವಶಾಸ್ತ್ರ ನಿಮ್ಮ ನಿಯತಿಯನ್ನು ನಿರ್ಧರಿಸುತ್ತದೆ ಎನ್ನುವುದನ್ನು ನೀವು ಬಲಗೊಳಿಸುತ್ತೀರಿ. ಫೆಮಿನಿಸಂ ಬಿಟ್ಟುಬಿಡಿ ಎಂದು ಜ್ಯೂಡಿತ್ ಹೇಳುತ್ತಿಲ್ಲ. ಆದರೆ ಅವರು ಈ ಗಂಡು ಹೆಣ್ಣು ಎನ್ನುವುದೆಲ್ಲ ಒಂದು social construct (ಸಾಮಾಜಿಕ ಸಂರಚನೆ) ಮಾತ್ರ ಮತ್ತು ಸ್ವಾಭಾವಿಕ ಸಂಗತಿಯಲ್ಲ ಎನ್ನುವುದನ್ನ ಒತ್ತಿ ಹೇಳುತ್ತಿದ್ದಾರೆ.

ಈ ಖೆಡ್ಡಾದಿಂದ ಹೊರಬರುವುದು ಕಷ್ಟ, ಮತ್ತು ಇದು ಜ್ಯೂಡಿತ್ ಅವರಿಗೂ ಗೊತ್ತಿತ್ತು. ಹೆಣ್ಣು ಎಂದು ಐಡೆಂಟಿಫೈ ಮಾಡಿಕೊಳ್ಳುವುದನ್ನ ನಿಲ್ಲಿಸಿ ಎಂದು ಅವರು ಹೇಳುತ್ತಿಲ್ಲ. ಹೆಣ್ಣು ಸ್ವಾಭಾವಿಕ ಎನ್ನುವ ಐಡಿಯಾವನ್ನ ನಂಬುವುದನ್ನ ನಿಲ್ಲಿಸಿ ಎಂದು ಅವರು ಹೇಳುತ್ತಿದ್ದಾರೆ. ಈ ಕ್ಯಾಟಗರಿಯನ್ನು ನಾಶ ಮಾಡುವುದು ನಿಮ್ಮ ಉದ್ದೇಶವವಾಗಬಾರದು, ಆದರೆ ಈ ಸುಳ್ಳನ್ನು ಮುಂದೆ ತೆಗೆದುಕೊಂಡು ಬನ್ನಿ. ಜೆಂಡರ್ ನೀವು ಪಾರಾಗಿ ಹೊರಗೆ ಬರಬೇಕಾದ ಜೈಲು ಅಲ್ಲ. ಇದು ನಿಮ್ಮ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗಿರುವ ಆಟ. ಇದನ್ನು ಗೆಲ್ಲುವ ಒಂದೇ ರೀತಿ ಎಂದರೆ, ಇದು ಪೂರ್ವನಿಯೋಜಿತ ಸಂಚು ಎನ್ನುವುದನ್ನ ಎಲ್ಲರಿಗೂ ತಿಳಿಸಿಕೊಡಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.