ನೀವು ಅಸ್ತಿತ್ವವಾದಿ ಫಿಲಾಸೊಫಿಯನ್ನು ಓದ ಬಯಸುತ್ತಿದ್ದೀರಿ ಆದರೆ ನಿಮಗೆ ಯಾವ ಪುಸ್ತಕದಿಂದ ಶುರು ಮಾಡಬೇಕು ಎನ್ನುವ ಗೊಂದಲವಿದ್ದರೆ, ಸಾಹಿತ್ಯ ಮತ್ತು ಅಸ್ತಿತ್ವವಾದಿ ಫಿಲಾಸೊಫಿಯ ವಿದ್ಯಾರ್ಥಿಯೊಬ್ಬರು ಸಜೆಸ್ಟ್ ಮಾಡಿರುವ ಕೆಲವು ಪುಸ್ತಕಗಳ ಪರಿಚಯ ಈ ರೀತಿ ಇದೆ । ಚಿದಂಬರ ನರೇಂದ್ರ
- Last days Socrates by Plato : ಇದು ಸಾಕ್ರೆಟಿಸ್, ಎಥಿಕ್ಸ್ ಮತ್ತು ಸತ್ಯದ ಕುರಿತು ನಡೆಸಿದ ಪುಟ್ಟ ಪುಟ್ಟ ಸಂವಾದಗಳ ಸಂಗ್ರಹ. ಇದು ತೀರ ಅಸ್ಚಿತ್ವವಾದಿ ತತ್ವಜ್ಞಾನ ಅಲ್ಲದಿದ್ದರೂ ಫಿಲಾಸೊಫಿಯ ಓದಿಗೆ ಒಂದು ಅತ್ಯಂತ ಒಳ್ಳೆಯ ಶುರುವಾತು.
- Sophie’s World by Jostein Gaarder : ಇದು ಕಾದಂಬರಿ ರೂಪದಲ್ಲಿರುವ ತತ್ವಜ್ಞಾನದ ಇತಿಹಾಸ. ಇದನ್ನ ಹುಡುಗಿಯೊಬ್ಬಳು ತತ್ವಜ್ಞಾನವನ್ನು ಕಲಿಯುವ ನಿಗೂಢದ ರೀತಿಯಲ್ಲಿ ಪ್ರಸೆಂಟ್ ಮಾಡಲಾಗಿದೆ. ಇದರಲ್ಲಿ logic, reasoning ಮತ್ತು dialectics ನ ಉದಾಹರಣೆಗಳ ಮೂಲಕ ಚರ್ಚಿಸಲಾಗಿದೆ.
- Existentialism (A very short introduction) By Thomas R Flynn : ಇದು ಅಕಾಡಮಿಕ್ ಆಗಿದ್ದರೂ ಅಸ್ತಿತ್ವವಾದಿ ಚಳುವಳಿಯ ಮೇಲ್ನೋಟವನ್ನ ಅದರ ಮುಖ್ಯ ಥಿಂಕರ್ಸ್, ಆ ಸಂದರ್ಭ ಹಾಗು ಐಡಿಯಾಗಳನ್ನು 150 ಪುಟಗಳಲ್ಲಿ ಸಂಕ್ಷೇಪಿಸಲಾಗಿದೆ.
- At the Existentialist Cafe by Sarah Bakewell : ಇಲ್ಲಿನ ಪ್ರತಿ ಅಧ್ಯಾಯವೂ ವಿಭಿನ್ನ ಫಿಲಾಸೊಫರ್ ಮೇಲೆ ಫೋಕಸ್ ಮಾಡುತ್ತ, ಅವರ ಹಿನ್ನೆಲೆಯನ್ನು ಹೇಳುತ್ತಲೇ ಅವರ ವೈಯಕ್ತಿಕ ಬದುಕನ್ನ ವಿವರಿಸುತ್ತ ಅವರ ಐಡಿಯಾಗಳನ್ನ ಚರ್ಚಿಸುತ್ತ ಹೋಗುತ್ತದೆ.
- Existentialism is a Humanism by Jean Paul Sartre : ಇದು every day terms ಲ್ಲಿ ಅಸ್ತಿತ್ವವಾದವನ್ನು ಡಿಫೆಂಡ್ ಮಾಡಿತೊಳ್ಳುತ್ತ ಸಾರ್ತ್ರೆ ನೀಡಿದ ಉಪನ್ಯಾಸಗಳ ಸಂಗ್ರಹ.
- Existentialism from Dostoevsky to Sartre by Walter Kaufmann : ಇದು ವಿವಿಧ ಅಸ್ತಿತ್ವವಾದಿ ಚಿಂತಕರ ಚಿಂತನೆಗಳನ್ನು ಕುರಿತು ವಾಲ್ಟರ್ ನ ಅಪರೂಪದ ಒಳನೋಟಗಳನ್ನು ಹೊಂದಿದ ಬರಹಗಳ ಸಂಗ್ರಹ. ಇದರ ಓದು ಮೊದಮೊದಲು ಕಠಿಣ ಅನ್ನಿಸಿದರೂ ಆರು ತಿಂಗಳ ನಂತರ ಇದನ್ನ ಮತ್ತೆ ಓದುವಿರಾದರೆ ಇದರ ಮಹತ್ವ ನಿಮಗೆ ಗೊತ್ತಾಗುತ್ತದೆ.
ಈಗ ಕೆಲವು ಕಾದಂಬರಿಗಳು
- The Stranger by Albert Camu : ಇದು ಮನುಷ್ಯ ಅನುಭವಿಸುವ ಬದುಕಿನ ಅಸಮಾನತೆಯ ಕುರಿತಾದ ಒಂದು ಸರಳ ಕತೆ. ಇಲ್ಲಿ ಅಸ್ತಿತ್ವವಾದವನ್ನು ಬರಡು ಭಾಷೆಯಲ್ಲದೇ ಕತೆಯ ಪ್ಲಾಟ್ ಗಳ ಮೂಲಕವೇ ಕಟ್ಟಿಕೊಡಲಾಗಿದೆ. ನೀವು ಹೇಳಬಹುದು ಕಾಮು ಅಸ್ಚಿತ್ವವಾದಿಯಲ್ಲ ಅಸಂಗತವಾದಿಯೆಂದು ಆದರೆ ಯಾಕೋ ಈ ಪುಸ್ತಕ ನನ್ನ ಲಿಸ್ಟಲ್ಲಿದೆ.
- Mans search for meaning by Viktor Frankl : ಮನೋವಿಜ್ಞಾನಿ ವಿಕ್ಟರ್ ಅವರು ತಮ್ಮ holocaust ಅನುಭವಗಳ ಮೂಲಕ purpose ಮತ್ತು suffering ಗಳನ್ನು explore ಮಾಡುತ್ತ, find ಮಾಡುತ್ತ ಸರಳ ಪ್ರಭಾವಶಾಲಿ ಭಾಷೆಯಲ್ಲಿ, ಸಂಕಟದ ಸಮಯದಲ್ಲಿ ನಮ್ಮ ಬಳಿ ಇರುವ ಆಯ್ಕೆಗಳೇನು ಎನ್ನುವ ಪ್ರಶ್ನೆಯೊಂದಿಗೆ ತಳಕು ಹಾಕಿಕೊಂಡಂತೆ ವಿವರಿಸುತ್ತ ಹೋಗುತ್ತಾರೆ.
- Siddhartha by Hermann Hesse : ನೀತಿಕತೆಯಂಥ ಸ್ವ ಶೋಧ ಮತ್ತು enlightenment ಕುರಿತಾದ ಸಣ್ಣ ಸಣ್ಣ ಅಧ್ಯಾಯಗಳ ಒಂದು ಪುಟ್ಟ ಕತೆ, Inner freedom ನಂಥ ಅಸ್ತಿತ್ವವಾದಿ ಥೀಮ್ ನ ಶೋಧಿಸುತ್ತದೆ.

