ನಮ್ಮ ಪ್ರತಿಕ್ರಿಯೆಗೆ ನಾವೇ ಹೊಣೆಗಾರರು

ಅಪಮಾನ ಎನ್ನುವುದು ಒಬ್ಬ ವ್ಯಕ್ತಿಯ ಬಾಯಿಯಿಂದ ಹೊರಬಿದ್ದು ನಿಮ್ಮ ಕಿವಿಯನ್ನು ತಲುಪಿದ ಬರಡು ಶಬ್ದಗಳು ಮಾತ್ರ. ಆದರೆ ಮುಂದೆ ಆಗುವ ಎಲ್ಲ ಸಂಗತಿಗಳಿಗೆ ಸ್ವತಃ ನೀವು ಹೊಣೆಗಾರರು ಅನ್ನುತ್ತಾನೆ Epictetus । ಚಿದಂಬರ ನರೇಂದ್ರ

ಪಾರ್ಟಿಯಲ್ಲಿ ಯಾರೋ ಒಬ್ಬರು ನಿಮ್ಮನ್ನು ಅಪಮಾನ ಮಾಡುತ್ತಾರೆ, ಅವರು ನಿಮ್ಮನ್ನು ಬೋರಿಂಗ್, ಮೂರ್ಖ, irrelevant ಎಂದು ಮೂದಲಿಸುತ್ತಾರೆ. ಇದಾದ ಎಷ್ಟೋ ದಿನಗಳ ನಂತರವೂ ಈ ಮಾತುಗಳನ್ನ ನೀವು ನೆನಪಿನಲ್ಲಿಟ್ಟುಕೊಂಡಿರುವಿರಿ. ನಿಮ್ಮ ಮೈಂಡ್ ನಲ್ಲಿ ಈ ಮಾತುಗಳನ್ನ ಮತ್ತೆ ಮತ್ತೆ ರೀಪ್ಲೇ ಮಾಡಿಕೊಳ್ಳುತ್ತ ಮತ್ತೆ ಮತ್ತೆ ಹರ್ಟ ಆಗುತ್ತಿರುವಿರಿ. ಮತ್ತೆ ಮತ್ತೆ ನಿಮಗೆ ಕೋಪ ಮಾಡಿಕೊಳ್ಳುತ್ತಿರುವಿರಿ.

Stoic Philosopher (Stoic philosophy ಎಂದರೆ ಜೀವನದ ಕಷ್ಟಗಳು, ನೋವು ಅಥವಾ ಸಂತೋಷಗಳಿಗೆ ವಿಚಲಿತರಾಗದೆ, ತರ್ಕಬದ್ಧ ಆಲೋಚನೆ ಮತ್ತು ಆತ್ಮ-ನಿಯಂತ್ರಣದಿಂದ ಮನಸ್ಸಿನ ಶಾಂತಿ ಕಾಯ್ದುಕೊಳ್ಳುವ ಪ್ರಾಚೀನ ಗ್ರೀಕ್-ರೋಮನ್ ಚಿಂತನೆ) Epictetus, ನಿಮಗೆ ಈ ಪ್ರಶ್ನೆ ಕೇಳುತ್ತಾನೆ, ಆ ವ್ಯಕ್ತಿಗೆ ಯಾಕೆ ನೀವು ನಿಮ್ಮ ಮೈಂಡ್ ಮೇಲೆ ಇಷ್ಟು ಅಧಿಕಾರ ಬಿಟ್ಟುಕೊಟ್ಟಿದ್ದೀರಿ?

Epictetus ನ ಪ್ರಕಾರ ಈ ಅಪಮಾನ ಎನ್ನುವುದು ಒಬ್ಬ ವ್ಯಕ್ತಿಯ ಬಾಯಿಯಿಂದ ಹೊರಬಿದ್ದು ನಿಮ್ಮ ಕಿವಿಯನ್ನು ತಲುಪಿದ ಬರಡು ಶಬ್ದಗಳು ಮಾತ್ರ. ಆದರೆ ಮುಂದೆ ಆಗುವ ಎಲ್ಲ ಸಂಗತಿಗಳಿಗೆ ಸ್ವತಃ ನೀವು ಹೊಣೆಗಾರರು. ನೀವು ಆ ಮಾತುಗಳನ್ನು ಸ್ವೀಕರಿಸಿ, ಅವುಗಳನ್ನು ಪರಿಶೀಲನೆ ಮಾಡಬಹುದು, ಅವು ನಿಮ್ಮೊಳಗೆ ಕೊಳೆಯಲು ಅವಕಾಶ ಮಾಡಿಕೊಡಬಹುದು. ಅಥವಾ ನೀವು ಆ ಮಾತುಗಳಿಗೆ ಗಾಳಿಯಂತೆ ನಿಮ್ಮನ್ನು ದಾಟಿಹೋಗಲು ದಾರಿ ಮಾಡಿಕೊಡಬಹುದು.

Epictetus ಹೇಳುತ್ತಾನೆ, ಯಾರಾದರೂ ನಿಮ್ಮನ್ನು ಕೆರಳಿಸುವುದರಲ್ಲಿ ಸಫಲರಾಗುತ್ತಾರೆಂದರೆ, ಆ ಕೆರಳಿಸುವಿಕೆಯಲ್ಲಿ ನಿಮ್ಮ ಮೈಂಡ್ ಕೂಡ ಅವರ ಜೊತೆ ಕೈಗೂಡಿಸಿದೆ. ಆ ಅಪಮಾನದ ಮಾತುಗಳು ನಿಮ್ಮನ್ನು ನೋಯಿಸಲಿಲ್ಲ. ನಿಮ್ಮನ್ನು ನೋಯಿಸಿದ್ದು, ಆ ಮಾತುಗಳು ಮಹತ್ವದವು, ಮೌಲ್ಯಯುತವಾದವು, ನಿಜವಾದವು ಎಂದು ಸ್ವೀಕರಿಸಿ ಒಪ್ಪಿಕೊಂಡ ನೀವು.

Epictetus ತನ್ನ ಬದುಕಿನಲ್ಲಿ ಬಹಳ ಕ್ರೌರ್ಯವನ್ನು ಅನುಭವಿಸಿ ಬೆಳೆದು ಬಂದವ. ಅವನನ್ನು ಅವನ ಮಾಲಿಕ ಗುಲಾಮರಂತೆ ನೋಡಿದೊಳ್ಳುತ್ತಿದ್ದ, ಹೊಡೆಯುತ್ತಿದ್ದ. ಆದರೆ ಈ ಯಾವುದೂ ತನ್ನ ಒಳಗಿನ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುವುದಕ್ಕೆ Epictetus ಅವಕಾಶ ನೀಡಲಿಲ್ಲ.

Epictetus ನಿಗೆ ಸಹನೆ ಎನ್ನುವುದು ಕೇವಲ ದಪ್ಪ ಚರ್ಮವನ್ನು ಹೊಂದುವುದಲ್ಲ, ಮಾತುಗಳಿಗೆ ಶಕ್ತಿ ಇದೆಯೆನ್ನುವುದನ್ನ ನಿರಾಕರಿಸುವುದೂ ಅಲ್ಲ. ಅವನಿಗೆ ಸಹನೆ ಎಂದರೆ, ಜನ ನಿಮ್ಮ ಒಳ ಕೋಟೆಯನ್ನು ಪ್ರವೇಶಿಸದಂತೆ ತಡೆಯುವುದು, ಮತ್ತು ಜನರ ಮಾತುಗಳಿಗೆ ಹೇಗೆ ಪ್ರತಿಕ್ರಯಿಸಬೇಕೆನ್ನುವುದನ್ನ ನೀವು ನಿರ್ಧರಿಸುವುದು.

ಪ್ರಸಿದ್ಧ ಮಾಜಿ ಬೇಹುಗಾರ Evy Poumpouras ಹೇಳುವಂತೆ, ನಿಮನ್ನು ಬಹಳ ಸುಲಭವಾಗಿ ಕೆರಳಿಸಬಹುದಾದರೆ, ನಿಮ್ಮ ಬಹು ಸುಲಭವಾಗಿ ಮ್ಯಾನ್ಯುಪ್ಯುಲೇಟ್ ಕೂಡ ಮಾಡಬಹುದು. ಅವರು ಅಪಮಾನದ ಮಾತುಗಳನ್ನ ಹೇಳಿರಬಹುದು, ಅವರಿಗೆ ನಿಮ್ಮನ್ನು ಅಪಮಾನ ಮಾಡುವ ಇಚ್ಛೆಯೂ ಇರಬಹುದು, ಆದರೆ ಅವರು ಹಾಗೆ ಮಾಡಬಹುದಾ ಇಲ್ಲವಾ ಎನ್ನುವುದನ್ನ ನೀವು ನಿರ್ಧರಿಸಿ. ಆ ಮಾತುಗಳಿಗೆ ಅರ್ಥ ಇದೆಯೋ ಇಲ್ಲವೋ ಎನ್ನುವುದನ್ನ ನೀವು ನಿರ್ಧರಿಸಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.