ಸೈಕಾಲೊಜಿಯ ಪ್ರಕಾರ ಇದು ನಿಮ್ಮ ಕೋಪದ ಸಮಸ್ಯೆ ಅಲ್ಲ. ನಿಮ್ಮ ನರಮಂಡಲ ಒಂದು ವಿಷಮಯ ಮಾದರಿಯನ್ನು ( toxic pattern) ಗುರುತುಹಿಡಿಯುತ್ತಿದೆ. ನಿಮ್ಮಿಂದ ಈ ವಿಚಿತ್ರ ಪ್ರತಿಕ್ರಿಯೆ ಅಚಾನಕ್ ಆಗಿ ಹೊರಹೊಮ್ಮಿದ್ದಲ್ಲ. ಇದು ವರ್ಷಾನುಗಟ್ಟಲೇ ನೀವು ಅನುಭವಿಸಿದ ಅಂಥ ಸಣ್ಣ ಸಣ್ಣ ಅನುಭವಗಳ ಒಟ್ಟು ಫಲಿತಾಂಶವಾಗಿದೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಯಾವತ್ತಾದರೂ ನಿಮಗೆ ಒಬ್ಬ ವ್ಯಕ್ತಿಯ ದನಿ ಕೇಳಿ, ಅವರನ್ನು ನೋಡಿ ಅಥವಾ ಅವರು ರೂಮಿನೊಳಗೆ ಕಾಲಿಡುತ್ತಲೇ, ಥಟ್ಟನೇ ಕಿರಿಕಿರಿಯ ಅನುಭವವಾಗಿದೆಯಾ? , ನಿಮ್ಮ ಮೂಡ್ ಕೆಟ್ಟು ಹೋಗಿದೆಯಾ? ನಿಮಗೆ ಇರಿಟೇಟ್ ಆಗಲು ಶುರುವಾಗಿದೆಯಾ? ಮತ್ತು, ನಿಮ್ಮನ್ನು ಒಂದು ವಿಚಿತ್ರವಾದ ಕೋಪ ಆವರಿಸಿಕೊಂಡಿದೆಯಾ? . ಆಗ ನಿಮಗೆ, ನಿಮ್ಮನ್ನು ಕೋಪದ ರೋಗ ಕಾಡುತ್ತಿದೆ ಎಂದು ಅನಿಸಬಹುದು.
ಆದರೆ ಸೈಕಾಲೊಜಿಯ ಪ್ರಕಾರ ಇದು ನಿಮ್ಮ ಕೋಪದ ಸಮಸ್ಯೆ ಅಲ್ಲ. ನಿಮ್ಮ ನರಮಂಡಲ ಒಂದು ವಿಷಮಯ ಮಾದರಿಯನ್ನು ( toxic pattern) ಗುರುತುಹಿಡಿಯುತ್ತಿದೆ. ನಿಮ್ಮಿಂದ ಈ ವಿಚಿತ್ರ ಪ್ರತಿಕ್ರಿಯೆ ಅಚಾನಕ್ ಆಗಿ ಹೊರಹೊಮ್ಮಿದ್ದಲ್ಲ. ಇದು ವರ್ಷಾನುಗಟ್ಟಲೇ ನೀವು ಅನುಭವಿಸಿದ ಅಂಥ ಸಣ್ಣ ಸಣ್ಣ ಅನುಭವಗಳ ಒಟ್ಟು ಫಲಿತಾಂಶವಾಗಿದೆ. ಆ ಸೂಕ್ಷ್ಮ ಅಗೌರವ, ಆ ಬೈಗುಳ, ಆ ನಿಷ್ಕ್ರೀಯ ಆಕ್ರಮಣಕಾರಿ ಮಾತುಗಳು, ಆ ತಣ್ಣಗಿನ ಟೀಕೆ, ಯಾವನ್ನೆಲ್ಲ ನೀವು ಜಗಳ ಅವೊಯಿಡ್ ಮಾಡಲು ಸುಮ್ಮನೇ ಸಹಿಸಿಕೊಂಡಿದ್ದಿರೋ, ಈ ಎಲ್ಲದರ ಒಟ್ಟು ಮೊತ್ತವಾಗಿ ನಿಮ್ಮಿಂದ ಇಂಥದೊಂದು ರಿಯಾಕ್ಷನ್ ಹೊರಬರುತ್ತಿದೆ. ಆಗ ಬಹುಶಃ ನಿಮ್ಮ ಬುದ್ಧಿ ಮನಸ್ಸು ಆವ್ಯಕ್ತಿಯನ್ನ, ಆ ಅಗೌರವವನ್ನ ಇಗ್ನೋರ್ ಮಾಡಿರಬಹುದು ಆದರೆ ನಿಮ್ಮ ಶರೀರ ಇವನ್ನೆಲ್ಲ ಕರಾರುವಾಕ್ಕಾಗಿ ನೆನಪಿಟ್ಟುಕೊಂಡಿದೆ.
ಸೈಕಾಲೊಜಿಯಲ್ಲಿ ಒಂದು ಪರಿಕಲ್ಪನೆಯಿದೆ, The body keeps the score ( ದೇಹ ಪ್ರತಿಯೊಂದರ ಲೆಕ್ಕ ಇಟ್ಟಿರುತ್ತದೆ). ಇದರ ಅರ್ಥ ನಿಮ್ಮ ದೇಹ ನೀವು ಅನುಭವಿಸಿದ ಆ ಎಲ್ಲ ಒತ್ತಡಗಳನ್ನು ಸಂಗ್ರಹಿಸಿಟ್ಟುಕೊಂಡಿದೆ. ಆದ್ದರಿಂದಲೇ ಆ ವ್ಯಕ್ತಿ ನಿಮಗೆ ಎದುರಾದಾಗ ನಿಮ್ಮ ಎದೆಯ ಬಡಿತ ಹೆಚ್ಚಾಗುತ್ತದೆ, ನಿಮಗೆ ಟೆನ್ಶನ್ ಆಗಲು ಶುರುವಾಗುತ್ತದೆ, ನಿಮ್ಮ ಬುದ್ಧಿ ಇದಕ್ಕೆಲ್ಲ ಕಾರಣ ಹುಡುಕುವ ಮೊದಲೇ ನಿಮ್ಮ ದೇಹ ಪ್ರತಿಕ್ರಯಿಸಲು ಶುರು ಮಾಡುತ್ತದೆ.
ಈ ಮಾತುಗಳನ್ನ ಗಮನವಿಟ್ಟು ಅರ್ಥಮಾಡಿಕೊಳ್ಳಿ. ನೀವು ಅತೀ ಸಂವೇದನಾಶೀಲ, ಸಮಸ್ಯೆ ಹುಟ್ಟುಹಾಕುವ ವ್ಯಕ್ತಿ ಅಲ್ಲ. ಆದರೆ ನಿಮ್ಮ ದೇಹ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ನೋವುಗಳಣ್ನು ಸಹನ ಮಾಡಿಕೊಂಡುಬಿಟ್ಟಿದೆ. ಇದರ ಪರಿಹಾರ ಸಹನೆ ಅಲ್ಲ, ಇದರ ಪರಿಹಾರ ನೀವು ನಿಮ್ಮ ಬೌಂಡರಿಯನ್ನು ಗುರುತಿಸಿಕೊಳ್ಳುವುದು. ನಿಮ್ಮ ಒಳಗಿನ ಶಾಂತಿಯನ್ನು ಕಲಕುತ್ತಿರುವ ಆ ವ್ಯಕ್ತಿಯಿಂದ ಯಾವಾಗ ನೀವು ದೂರವನ್ನು ಕಾಯ್ದುಕೊಳ್ಳುತ್ತೀರೋ ಆಗ ಮಾತ್ರ ನಿಮಗೆ ನಿಜದ ಶಾಂತಿ ಲಭ್ಯವಾಗುತ್ತದೆ, ಆ ವ್ಯಕ್ತಿ ಯಾರೇ ಆಗಿರಲಿ.
*********************************

