ಕೈದಿಗಳ ಸಂದಿಗ್ಧತೆಯ ವಾಸ್ತವ

ಸಂಗ್ರಹಾನುವಾದ: ಚಿದಂಬರ ನರೇಂದ್ರ

ನೀವು ಎಷ್ಟೇ ಜಾಣರಾಗಿದ್ದರೂ ಈ ಸನ್ನಿವೇಶದಲ್ಲಿ ತಪ್ಪು ಮಾಡೇ ಮಾಡುತ್ತೀರಿ. ಕಲ್ಪನೆ ಮಾಡಿಕೊಳ್ಳಿ ನೀವು ಮತ್ತು ನಿಮ್ಮ ಗೆಳೆಯ ಒಂದು ಜೈಲಿನಲ್ಲಿ ಬಂಧಿಯಾಗಿದ್ದೀರಿ. ನಿಮ್ಮ ಬಳಿ ಒಂದು ಬಟನ್ ಇದೆ, ಅದನ್ನು ಒತ್ತಿದಾಗ ನೀವು ಜೈಲಿನಿಂದ ಪಾರಾಗುತ್ತೀರಿ. ಆದರೆ ನಿಮ್ಮ ಗೆಳೆಯನಿಗೆ ನಾಲ್ಕು ವರ್ಷ ಶಿಕ್ಷೆ ಹೆಚ್ಚಾಗುತ್ತದೆ. ಇಂಥದೇ ಒಂದು ಬಟನ್ ನಿಮ್ಮ ಗೆಳೆಯನ ಬಳಿ ಕೂಡ ಇದೆ. ಮತ್ತು ಅವನಿಗೂ ಇದೇ ಸೌಲಭ್ಯಗಳಿವೆ. ನೀವು ಇಬ್ಬರೂ ಬಟನ್ ಒತ್ತದೇ ಹೋದರೆ ನಿಮಗೆ ಒಂದು ವರ್ಷದ ಶಿಕ್ಷೆ ಮತ್ತು ನೀವು ಇಬ್ಬರೂ ಬಟನ್ ಒತ್ತಿದರೆ ನಿಮಗೆ ಮೂರು ವರ್ಷದ ಶಿಕ್ಷೆ ಗ್ಯಾರಂಟಿ. ಇಂಥ ಸಂದರ್ಭದಲ್ಲಿ ನೀವು ಏನು ಮಾಡುತ್ತೀರಿ?

ನಿಮ್ಮ ಮನಸ್ಸಿನಲ್ಲಿ ಈ ವಿಚಾರ ಬಂದೇ ಬರುತ್ತದೆ, ಅಕಸ್ಮಾತ್ ನಾನು ಬಟನ್ ಒತ್ತದಿದ್ದರೂ,  ಅವನು ಒತ್ತಿದರೆ, ನನಗೆ ನಾಲ್ಕು ವರ್ಷ ಸಜೆ ಖಚಿತ. ಇದೇ ವಿಚಾರ ಅವನ ಮನಸ್ಸಿನಲ್ಲೂ ಬಂದಿರುವುದರಿಂದ ನೀವು ಇಬ್ಬರು ಕೂಡ ಬಟನ್ ಒತ್ತಿ ಬಿಡುತ್ತೀರಿ. ಹಾಗಾಗಿ ನೀವಿಬ್ಬರೂ ಎಷ್ಟೇ ಜಾಣರಾಗಿದ್ದರೂ ಒಂದು ಕೆಟ್ಟ ಫಲಿತಾಂಶಕ್ಕೆ ಆಹ್ವಾನ ನೀಡುತ್ತೀರಿ. Game theory ಯ ಒಂದು ಪರಿಕಲ್ಪನೆಯಾದ ಈ Prisoners dilemma (ಕೈದಿಗಳ ಸಂದಿಗ್ಧತೆ) ವಾಸ್ತವ ಜಗತ್ತಿಗೂ ಸಂಬಂಧಿಸಿದ್ದಾಗಿದೆ.

ಈಗ AI safety paradox ಎನ್ನುವ ಸಮಸ್ಯೆಯ ಬಗ್ಗೆ ಪರಿಶೀಲಿಸೋಣ. AI ಸಂಶೋಧಕ Connor Leahy ಅವರ ಪ್ರಕಾರ, AI ಹೆಚ್ಚು ಬಲಿಷ್ಠವಾಗುತ್ತ ಹೋದಂತೆ ಅದು ಹೆಚ್ಚು ಅಪಾಯಕಾರಿಯಾಗುತ್ತ ಹೋಗುತ್ತದೆ. ಹಾಗಾದರೆ ಈ ಜಗತ್ತಿನ ನಾಯಕರು ಯಾಕೆ ಈ AI ಯುದ್ಧವನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ?  Why are they not slowing down? ಅಮೇರಿಕ ನಿಧಾನ ಮಾಡಿದರೆ, ಚೀನ ಮುಂದೆ ಹೋಗಿ ಜಯಶಾಲಿಯಾಗುತ್ತದೆ. ಹಾಗೆಯೇ ಚೀನ ನಿಧಾನ ಮಾಡಿದರೆ, ಅಮೇರಿಕ ಈ ಸ್ಪರ್ಧೆಯಲ್ಲಿ ಮುಂದಾಗುತ್ತದೆ. ಆದರೆ ಎರಡು ದೇಶಗಳಿಗೂ ಬೇರೆ ದೇಶ ಗೆಲ್ಲುವುದು ಬೇಕಾಗಿಲ್ಲ. ಆದ್ದರಿಂದ ಈ ಎರಡು ದೇಶಗಳೂ ಬಿರುಸಿನಿಂದ ಈ ಸ್ಫರ್ಧೆಯಲ್ಲಿ ಭಾಗವಹಿಸುತ್ತವೆ. ದ್ವಂದ್ವ ಏನೆಂದರೆ ಈ ಯುದ್ಧ ಗೆಲ್ಲಲು ಈ ಎರಡು ದೇಶಗಳೂ ಹೆಚ್ಚು ಪ್ರಯತ್ನ ಮಾಡಿದಷ್ಟು ಬೇಗ ಎಲ್ಲ ದೇಶಗಳೂ ಅಷ್ಟು ಬೇಗ ಸೋಲನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಇಂದೊಂದು ಸೋಲಲೆಂದೇ ಆಡಲಾಗುತ್ತಿರುವ ಯುದ್ಧ. ಈ ಯುದ್ಧದ ಅಪಾಯದಿಂದ ಪಾರಾಗಲು ಅಪಾರ ವಿವೇಕ, ಸಹನೆ ಬೇಕಾಗುತ್ತದೆ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.