ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ವಿದಾಯ ಹೇಳಿದವರಿಗಿಂತ, ನಮ್ಮ ಕೈತಪ್ಪಿ ಹೋದವರ ಬಗ್ಗೆ ಯಾಕೆ ನಾವು ಹೆಚ್ಚು ಯೋಚಿಸುತ್ತೇವೆ?
ನಾವು ಎಂದಿಗೂ ಕಳೆದುಕೊಳ್ಳಬಾರದೆಂದು ಭಾವಿಸಿದ್ದ ಸ್ನೇಹಿತರನ್ನು ಯಾಕೆ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇವೆ?
ಇದನ್ನೇ ‘ಜೈಗಾರ್ನಿಕ್ ಪರಿಣಾಮ’ (Zeigarnik Effect) ಎಂದು ಕರೆಯಲಾಗುತ್ತದೆ.
1920ರ ದಶಕದಲ್ಲಿ ಸಂಶೋಧಕಿ Bluma Zeigarnik ಒಂದು ವಿಚಿತ್ರ ಸಂಗತಿಯನ್ನು ಗಮನಿಸಿದರು.
ಹೋಟೆಲ್‌ಗಳಲ್ಲಿ ಕೆಲಸ ಮಾಡುವ ವೇಟರ್‌ಗಳು ಇನ್ನೂ ಮುಗಿಯದ ಆರ್ಡರ್‌ಗಳ ಪ್ರತಿಯೊಂದು ವಿವರವನ್ನು ನೆನಪಿಟ್ಟುಕೊಳ್ಳುತ್ತಿದ್ದರು.
“ಟೇಬಲ್ ನಾಲ್ಕಿಗೆ ಮೀನು ಬೇಕು”, “ಟೇಬಲ್ ಒಂಬತ್ತು ತಮ್ಮ ವೈನ್ ಬದಲಿಸಿದ್ದಾರೆ” ಇತ್ಯಾದಿಯಾಗಿ. ಆದರೆ ಬಿಲ್ ಪಾವತಿಯಾದ ಕ್ಷಣದಲ್ಲೇ, ಆ ಆರ್ಡರ್ ಅವರ ನೆನಪಿನಿಂದ ಮಾಯವಾಗುತ್ತಿತ್ತು. ಕೆಲಸ ಮುಗಿದ ತಕ್ಷಣ , ಮೆದುಳು ಅದನ್ನು ಮರೆತು ಬಿಡುತ್ತಿತ್ತು.
ಜೈಗಾರ್ನಿಕ್ ತಮ್ಮ ಲ್ಯಾಬೋರೆಟರಿ ಗೆ ಹಿಂತಿರುಗಿ, ಒಂದು ಮಹತ್ವದ ಸಂಗತಿಯನ್ನು ಸಾಬೀತುಪಡಿಸಿದರು
ಮುಗಿಯದ ಕೆಲಸಗಳನ್ನು, ಮುಗಿದ ಕೆಲಸಗಳಿಗಿಂತ ಮೈಂಡ್ ಹೆಚ್ಚು ತೀವ್ರತೆಯಿಂದ ಹಿಡಿದುಕೊಳ್ಳುತ್ತದೆ. ಆದರೆ ಇದು ಕೇವಲ ಕೆಲಸಗಳಿಗೆ ಅಥವಾ ಬರೆಯಬೇಕಾದ ಪ್ರಬಂಧಗಳಿಗೆ ಮಾತ್ರ ಸತ್ಯವಲ್ಲ;
ನಮ್ಮ ವೈಯಕ್ತಿಕ ಸಂಬಂಧಗಳಿಗೂ ಇದು ಅನ್ವಯಿಸುತ್ತದೆ.
ಬಹಳ ಹಿಂದೆ ನಿಮ್ಮಿಂದ ದೂರವಾದ ಸ್ನೇಹಿತನೊಂದಿಗೆ ನಿಮ್ಮ ಮನಸ್ಸಿನಲ್ಲಿ ಇನ್ನೂ ಮುಗಿಯದ ಮಾತುಗಳು ಉಳಿದಿದ್ದರೆ, ನೀವು ಅವನ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತೀರಿ. ಅವನ ಬಗ್ಗೆ ಕನಸು ಕಾಣುತ್ತೀರಿ. ನಿಮಗೆ ಯಾರಾದರೂ ಪ್ರೀತಿಪಾತ್ರ ವ್ಯಕ್ತಿಯನ್ನು ನಿಮ್ಮಿಂದ ಕಸಿದುಕೊಂಡಂತೆ ಅನಿಸಿದರೆ, ನೀವು ಸ್ವತಃ ಅವರನ್ನು ಬಿಟ್ಟು ನಡೆದಿದ್ದಕ್ಕಿಂತ ಅದು ನಿಮಗೆ ಹೆಚ್ಚು ನೋವುಂಟುಮಾಡುತ್ತದೆ. ಇದಕ್ಕಾಗಿಯೇ “ಘೋಸ್ಟಿಂಗ್” (ghosting) ಅಷ್ಟು ಕ್ರೂರ. ಏಕೆಂದರೆ ಅದು ಕೇವಲ ಒಂದು ಸಂಬಂಧವನ್ನು ಮಾತ್ರ ಅಂತ್ಯಗೊಳಿಸುವುದಲ್ಲ; ಅದು ಮುಂದೆ ಸಾಗಲು ಮತ್ತೊಬ್ಬರ ಮನಸ್ಸಿಗೆ ಅತ್ಯಗತ್ಯವಾದ ಒಂದು ವಿಷಯವನ್ನು ಕಸಿದುಕೊಳ್ಳುತ್ತದೆ, ಒಂದು ಸ್ಪಷ್ಟ ಅಂತ್ಯ ಸಾಧ್ಯ ಮಾಡುವುದನ್ನು.
ಇದರಿಂದ ಕಲಿಯಬೇಕಾದ ಪಾಠ ಏನೆಂದರೆ,
ಮೈಂಡ್ ಗೆ “ಸುಖಾಂತ್ಯ” ಬೇಕೆಂದಿಲ್ಲ. ಅದಕ್ಕೆ ಬೇಕಾಗಿರುವುದು ಯಾವುದಾದರೂ ಒಂದು ಅಂತ್ಯ ಮಾತ್ರ. ಹಾಗಾಗಿ, ಯಾರಾದರೂ ಇನ್ನೂ ನಿಮ್ಮ ಆಲೋಚನೆಗಳಲ್ಲಿ ಅಲೆದಾಡುತ್ತಿದ್ದರೆ,
ಅವರಿಗೆ ಒಂದು ಪತ್ರ ಬರೆಯಿರಿ, ಅಥವಾ ಒಂದು ಸಂದೇಶ ಕಳುಹಿಸಿ. ನೀವು ಅದನ್ನು ನಿಜವಾಗಿ ಅವರಿಗೆ ಕಳುಹಿಸದೇ ಇರಬಹುದು.
ಆದರೂ ಅದನ್ನು ಬರೆಯುವ ಕ್ರಿಯೆಯೇ,
ನಿಮ್ಮ ಮೈಂಡ್ ಗೆ ಬಿಡುವು ಪಡೆಯಲು ಅಗತ್ಯವಾದ “ಪೂರ್ಣ ವಿರಾಮ”ವನ್ನು ನೀಡುತ್ತದೆ.

