ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಗಂಡು ಮತ್ತು ಹೆಣ್ಣಿನ ಅಪ್ಪುಗೆಗಳು ವಿಭಿನ್ನವಾಗಿರುತ್ತವೆ.
ಗಂಡು ರಕ್ಷಣೆ ಮಾಡುವುದಕ್ಕಾಗಿ ಅಪ್ಪುತ್ತಾನೆಯಾದರೆ,
ಹೆಣ್ಣು ಭಾವನಾತ್ಮಕವಾಗಿ ಕನೆಕ್ಟ್ ಆಗಲು ಆಲಂಗಿಸುತ್ತಾಳೆ.
ಗಂಡಿನ ಬಿಗಿ ಅಪ್ಪುಗೆಯೆಂದರೆ ಅಟ್ಯಾಚ್ಮೆಂಟ್
ಮತ್ತು ಹೆಣ್ಣಿನ ಸುದೀರ್ಘ ಅಪ್ಪುಗೆಯೆಂದರೆ ವಿಶ್ವಾಸ
ಮಾತುಗಳು ಸೋತಾಗ ಗಂಡು ಅಪ್ಪಿಕೊಳ್ಳುತ್ತಾನೆಯಾದರೆ,
ಭಾವನೆಗಳು ಉಕ್ಕಿ ಹರಿಯುವಾಗ ಹೆಣ್ಣು ಆಲಿಂಗನಕ್ಕೆ ಮುಂದಾಗುತ್ತಾಳೆ.
ಅಪ್ಪಿಕೊಂಡಾಗ ಗಂಡು ಸುರಕ್ಷತೆಯನ್ನು ಅನುಭವಿಸುತ್ತಾನೆಯಾದರೆ,
ಅಪ್ಪಿಕೊಂಡಾಗ ಹೆಣ್ಣು ಭಾವನಾತ್ಮಕವಾಗಿ ಅರ್ಥೈಸಿಕೊಂಡ ಭಾವವನ್ನು ಅನುಭವುಸುತ್ತಾಳೆ, feels emotionally understood.
ಗಂಡು ಹಟಾತ್ ನೇ ಅಪ್ಪಿಕೊಳ್ಳುವುದು ಅವನು ನಿಮ್ಮನ್ನು ಆಳವಾಗಿ ಮಿಸ್ ಮಾಡಿಕೊಂಡಿರುವುದರ ಧ್ಯೋತಕವಾದರೆ,
ಹೆಣ್ಣು ಹೀಗೆ ಮಾಡುವಾಗ ಆಕೆ ಸಾಮಿಪ್ಯವನ್ನು ಬಯಸುತ್ತಿರುತ್ತಾಳೆ.
ಅಪ್ಪುಗೆಯ ಮೂಲಕ ಗಂಡು ತನ್ನ ಒತ್ತಡಗಳನ್ನು ರಿಲೀಸ್ ಮಾಡುತ್ತಾನೆ,
ಮತ್ತು ಅಪ್ಪುಗೆ ಹೆಣ್ಣಿಗೆ ಭಾವನಾತ್ಮಕ ಹೀಲಿಂಗ್ ನ ಪ್ರದಾನ ಮಾಡುತ್ತದೆ.
ಇಬ್ಬರೂ ಬಹಳ ಹೊತ್ತು ಅಪ್ಪಿಕೊಂಡಾಗ ಅದು ಪರಸ್ಪರರ ನಡುವಿನ ಆಳವಾದ ಬಂಧ, deep mutual bonding.
ಅಪ್ಪಿಕೊಳ್ಳುವ ಬಗೆ, ಅಪ್ಪಿಕೊಳ್ಳುವವರ ನಿಜವಾದ ಭಾವನೆಗಳನ್ನು ವ್ಯಕ್ತ ಮಾಡುತ್ತಿರುತ್ತದೆ.

