ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಹೆಣ್ಣಿನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನೀವು ವಿಫಲರಾಗುವಿರಾದರೆ, ಮತ್ತು ಅವರು ನಿಮ್ಮ ಜೊತೆ ಅನಾಸಕ್ತರಾಗಿರುವಾಗ (indifferent) ನೀವು ಅವರಿಗೆ cold ಎನ್ನುವ ಹಣೆಪಟ್ಟಿ ಹಚ್ಚುವಿರಾದರೆ, ನೀವು ಈ ಬಗ್ಗೆ ಮನಶಾಸ್ತ್ರ ಮತ್ತು ನ್ಯೂರೋಸೈನ್ಸ್ ಏನು ಹೇಳುತ್ತದೆ ಎನ್ನುವುದನ್ನ ಒಮ್ಮೆ ಗಮನಿಸಿ. ಒಮ್ಮೆ ಕಾರ್ಲ್ ಯೂಂಗ್ ಹೇಳಿದ ಪ್ರಸಿದ್ಧ ಮಾತಿನ ಪ್ರಕಾರ, we don’t meet people, we meet their defence mechanisms, ನಾವು ಜನರನ್ನ ಭೇಟಿ ಮಾಡುವುದಿಲ್ಲ, ನಾವು ಭೇಟಿ ಮಾಡುವುದು ಅವರ ರಕ್ಷಣಾತ್ಮಕತೆಯನ್ನ.
ಅವಳನ್ನು ನೋಡಿ, ಅವಳನ್ನು ಒಮ್ಮೆ ಸೂಕ್ಷ್ಮವಾಗಿ ನೋಡಿ, ನಿಮ್ಮ ನಡುವಿನ ಆ ಗೋಡೆಯನ್ನ ನೋಡಿ. That’s not she is. That’s what she became in response to you. ಆಕೆ ಹಾಗಿರುವುದು ನಿಮ್ಮ ವರ್ತನೆಯ ಕಾರಣವಾಗಿ. ನಮ್ಮ ನರ್ವಸ್ ಸಿಸ್ಟಂ, ಅಪಾಯ ಮತ್ತು ಅನಿರೀಕ್ಷಿತತೆಯ ನಡುವೆ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಅವಳ ಮೆದುಳಿಗೆ ನೀವು ಬೆದರಿಕೆ. ಅವಳು ತನ್ನ ಮೃದುತ್ವವನ್ನ ಸುಮ್ಮನೇ ಹಿಂದೆ ಹಿಡಿದಿಟ್ಟುಕೊಳ್ಳುತ್ತಿಲ್ಲ, ಅವಳು ಈಗ ಇರುವುದು ಬದುಕುಳಿಯುವಿಕೆಯ ಹೋರಾಟದಲ್ಲಿ (survival mode).
ಸಿಗ್ಮಂಡ್ ಫ್ರಾಯ್ಡ್ ಇದನ್ನ Repetition Compulsion (ಪುನರಾವರ್ತನೆಯ ಒತ್ತಡ) ಎಂದು ಕರೆದ. ಅವಳು ಯಾವಾಗಲೂ ತನ್ನ ಕವಚವನ್ನು ಧರಿಸಿರುತ್ತಾಳೆ ಏಕೆಂದರೆ ಆಕೆ ಆ ಕವಚವನ್ನು ಕಳಚಿದಾಗಲೆಲ್ಲ ಬೆದರಿಕೆಗೆ ಒಳಗಾಗಿದ್ದಾಳೆ. ಅತೃಪ್ತಿ, inconsistency, ಭಾವನಾತ್ಮಕ ಗೈರುಹಾಜರಿ ಅವಳನ್ನು ಮತ್ತೆ ಮತ್ತೆ ಕಾಡುತ್ತವೆ. ಆಕೆ ತನ್ನನ್ನು ನಿಮ್ಮಿಂದ ರಕ್ಷಿಸಿಕೊಳ್ಳುವಂತೆ ನೀವು ಅವಳನ್ನು ಕಂಡೀಷನ್ ಮಾಡಿದ್ದೀರಿ.
ನೀವು ಒಂದು ಸಂಗತಿಯನ್ನು ಸಂಪೂರ್ಣವಾಗಿ ಮಿಸ್ ಮಾಡಿಕೊಳ್ಳುತ್ತಿದ್ದೀರಿ. ಪುರುಷ ಸಾಮರ್ಥ್ಯ ಎಂದರೆ ಅದು ಇನ್ನೊಬ್ಬರ ಮೇಲೆ ಪ್ರಾಬಲ್ಯ (dominance) ಹೊಂದುವುದಲ್ಲ. ಅದು ವಿಶ್ವಾಸಾರ್ಹತೆ, ಅದು ಆಕೆ ಅವ್ಯವಸ್ಥೆಯ ಕಕ್ಷೆಯಲ್ಲಿ ಸುತ್ತುವುದನ್ನ ನಿಲ್ಲಿಸುವಂತೆ ಮಾಡುವ ಗುರುತ್ವ ಕೇಂದ್ರ. ಆಕೆ ಮುಕ್ತವಾಗಿರಬೇಕೆಂದು ನೀವು ಬಯಸುವಿರಾದರೆ, ನಿರಂತರವಾಗಿ ಬದಲಾಗುವುದನ್ನ (variable) ನಿಲ್ಲಿಸಿ, ನೀವು constant ( ಸ್ಥಿರ) ಆಗಿ. ಇಲ್ಲವಾದರೆ ನೀವು, ಬೆದರಿಕೆ ಎಂದು ಅವಳು ತಿಳಿದುಕೊಳ್ಳುವುದಕ್ಕಾಗಿ ನಿಮ್ಮನ್ನು ನೀವು ಮತ್ತೆ ಮತ್ತೆ ಪ್ರೂವ್ ಮಾಡಿಕೊಂಡಿರುವ ಅಂಥ ಇನ್ನೊಬ್ಬ ಗೊಂದಲದ ಮನುಷ್ಯ .
*******************************

