ನಮಗೆ ಈಗ ಸಾಧ್ಯವಾಗಿರುವ ಹೆಚ್ಚು ಹೆಚ್ಚು ಆಯ್ಕೆಗಳು, ಇನ್ನೂ ಉತ್ತಮವಾದ ಆಯ್ಕೆ ಒಂದೇ ಒಂದು swipe ಅಂತರದಲ್ಲಿದೆ ಎನ್ನುವ ಭ್ರಮೆಯನ್ನು ಸೃಷ್ಟಿ ಮಾಡುತ್ತವೆ. ಆದ್ದರಿಂದ ಬಹಳಷ್ಟು ಬಾರಿ ನಾವು ಇಂಟಿಮಸಿಯ ಹೊರತಾದ ಉತ್ಕಟತೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ, ಅಥವಾ ಕಮಿಟ್ಮೆಂಟ್ ಹೊರತಾದ ಇಂಟಿಮಸಿಯಲ್ಲಿ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಆಧುನಿಕ ಪ್ರೇಮವನ್ನ Sternberg’s triangular theory of love ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡೋಣ. ಮನಶಾಸ್ತ್ರಜ್ಞ Robert Sternberg ಆರೋಗ್ಯಕರವಾದ ಪ್ರೇಮ, ಮೂರು ಮುಖ್ಯ ಅಂಶಗಳನ್ನು ಒಳಗೊಂಡಿದೆ ಎಂದು ಪ್ರತಿಪಾದಿಸುತ್ತಾನೆ. ಆ ಮೂರು ಅಂಶಗಳು ಯಾವುದೆಂದರೆ ; Intimacy (ಆಪ್ತತೆ), passion (ಉತ್ಕಟತೆ) ಮತ್ತು Commitment (ಬದ್ಧತೆ).
ಇವತ್ತಿನ ಡೇಟಿಂಗ್ ಸಂಸ್ಕೃತಿ ಥಟ್ಟನೇ ನಮಗೆ ಉತ್ಕಟತೆಯನ್ನೇನೋ ಕೊಡುತ್ತದೆ ಮತ್ತು ಆಕರ್ಷಣೆ ಯಥಾಪ್ರಕಾರ ಸಿಕ್ಕಾಪಟ್ಟೆ ಫಾಸ್ಟ್, ಮತ್ತು ವ್ಯಾಲಿಡೇಶನ್ (ಧೃಡೀಕರಣ) ಅಂತೂ ಇನ್ನೂ ಫಾಸ್ಟ್. ಆದರೆ ಇಂಟಿಮಸಿ ಗೆ ಸಾಕಷ್ಟು ಸಮಯ ಬೇಕು. ಇದಕ್ಕೆ vulnerability (ಭೇದ್ಯತೆ), ವಿಶ್ವಾಸಾರ್ಹತೆ ಮತ್ತು ಭಾವನಾತ್ಮಕ ಆಳದ ಸಹಾಯ ಬೇಕು. ಈ ಎಲ್ಲದಕ್ಕೂ ಸಮಯ ಮತ್ತು ಕಮಿಟ್ಮೆಂಟ್ ಬೇಕು. ಎಲ್ಲ ಜನರೂ ಸೋಲುತ್ತಿರುವುದು ಈ ಕಮಿಟ್ಮೆಂಟ್ ಕಾರಣವಾಗಿಯೇ.
ನಮಗೆ ಈಗ ಸಾಧ್ಯವಾಗಿರುವ ಹೆಚ್ಚು ಹೆಚ್ಚು ಆಯ್ಕೆಗಳು, ಇನ್ನೂ ಉತ್ತಮವಾದ ಆಯ್ಕೆ ಒಂದೇ ಒಂದು swipe ಅಂತರದಲ್ಲಿದೆ ಎನ್ನುವ ಭ್ರಮೆಯನ್ನು ಸೃಷ್ಟಿ ಮಾಡುತ್ತವೆ. ಆದ್ದರಿಂದ ಬಹಳಷ್ಟು ಬಾರಿ ನಾವು ಇಂಟಿಮಸಿಯ ಹೊರತಾದ ಉತ್ಕಟತೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ, ಅಥವಾ ಕಮಿಟ್ಮೆಂಟ್ ಹೊರತಾದ ಇಂಟಿಮಸಿಯಲ್ಲಿ.
Sternberg ನ triangular theory of love ಪ್ರಕಾರ, ಈ ಮೂರೂ ಅಂಶಗಳು (passion, intimacy & commitment) ಸಮತೋಲನ ಸಾಧಿಸಿದಾಗ ಮಾತ್ರ ಪ್ರೇಮದ ಅತ್ಯಂತ ಪರಿಪೂರ್ಣ ಸ್ವರೂಪ ನಮಗೆ ಲಭ್ಯವಾಗುತ್ತದೆ.
ನಾವು ಬದುಕುತ್ತಿರುವುದು, ನಮಗೆ ಬೇಕಾದುದೆಲ್ಲ ಥಟ್ಟನೇ ನಮ್ಮ ಕೈಗೆ ಸಿಗುವ ಕಾಲದಲ್ಲಿ, ಆದರೆ ಪ್ರೇಮ ಮಾತ್ರ ಇನ್ನೂ ಹ್ಯೂಮನ್ ಸೈಕಾಲಜಿಯನ್ನ ಫಾಲೋ ಮಾಡುತ್ತಿದೆಯೇ ಹೊರತು ನಿಮ್ಮ ಯಾವುದೇ ಅಲ್ಗಾರಿದಂ ನ ಅಲ್ಲ. ಅದು ಇಂಟಿಮಸಿಗಾಗಿ ಸಹನೆಯನ್ನು, ಕಮಿಟ್ಮೆಂಟ್ ಗಾಗಿ ಧೈರ್ಯವನ್ನೂ ಒಟ್ಟುಗೂಡಿಸುತ್ತಿದೆ. ಆದ್ದರಿಂದ ಧೈರ್ಯದಿಂದ ಮುಂದುವರೆಯುತ್ತ ಪ್ರೇಮವನ್ನು ಎಲ್ಲ ಕಡೆಯಿಂದಲೂ ಅವರಿಸಿಕೊಳ್ಳಿ. ಆರೋಗ್ಯಕರ ಪ್ರೇಮವನ್ನು ಅನುಭವಿಸಲು ಈ ಬದುಕು ನಿಜವಾಗಿಯೂ ತುಂಬ ಚಿಕ್ಕದು. ನಿಮ್ಮ ಈ ಹಿಂಜರಿಕೆ ತುಂಬ ನಿರಾಶಾದಾಯಕ.

