ಸುಳ್ಳುಗಾರರ ವಿರೋಧಾಭಾಸ

‘ಸುಳ್ಳುಗಾರನ ವಿರೋಧಾಭಾಸ’ ಎಂದರೆ, ಒಬ್ಬ ವ್ಯಕ್ತಿ “ನಾನು ಯಾವಾಗಲೂ ಸುಳ್ಳು ಹೇಳುತ್ತೇನೆ” ಎಂದು ಹೇಳುವುದು. ಇದು ಒಂದು ಸಮಸ್ಯೆಯಂತೆ ಕಾಣುತ್ತದೆ. ಏಕೆಂದರೆ ಆ ಮಾತು ಸತ್ಯವಾಗಿದ್ದರೆ, ಅದು ಸುಳ್ಳಾಗುತ್ತದೆ; ಅದು ಸುಳ್ಳಾಗಿದ್ದರೆ, ಅದು ಸತ್ಯವಾಗುತ್ತದೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಕೆಲವು ರಾಜಕಾರಣಿಗಳು, ಅದು ಎಷ್ಟೇ ಅತಿರೇಕದ ಅಥವಾ ಅಸಂಬದ್ಧ ಮಾತುಗಳನ್ನು ಆಡಿದರೂ, ಜನರು ಅವರನ್ನು ಇನ್ನೂ ಏಕೆ ಇಷ್ಟಪಡುತ್ತಾರೆ? ಕೆಲವರು ಭಯಾನಕವಾದ ಕೆಲಸಗಳನ್ನು ಮಾಡಿದರೂ, ಅವರ ‘ವೈಬ್‌’ ಅಥವಾ ವ್ಯಕ್ತಿತ್ವದ ಕಾರಣದಿಂದ ಅದು ಸರಿ ಎಂಬಂತೆ ಕಾಣುತ್ತದೆ, ಏಕೆ? ಕೆಲವೊಮ್ಮೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅಥವಾ ಅವರ ವರ್ತನೆಯ ರೀತಿ, ಅವರು ಮಾಡಿರುವ ಅನೇಕ ತಪ್ಪುಗಳಿಂದಲೂ ಸುಲಭವಾಗಿ ಪಾರಾಗುವಂತೆ ಮಾಡುತ್ತದೆ.

ಇದೇ ವಿಷಯವನ್ನು ಸ್ಲಾವೊಯ್ ಝಿಝೆಕ್ ಅವರು ಇತ್ತೀಚೆಗೆ Philosophy Now ಪತ್ರಿಕೆಯಲ್ಲಿ ಬರೆದ ಒಂದು ಪ್ರಬಂಧದಲ್ಲಿ ಪರಿಶೀಲಿಸುತ್ತಾರೆ. ಅಲ್ಲಿ ಅವರು ‘ಸುಳ್ಳುಗಾರನ ವಿರೋಧಾಭಾಸ’ ದ liar paradox) ಬಗ್ಗೆ ಮಾತನಾಡುತ್ತಾರೆ. ‘ಸುಳ್ಳುಗಾರನ ವಿರೋಧಾಭಾಸ’ ಎಂದರೆ, ಒಬ್ಬ ವ್ಯಕ್ತಿ “ನಾನು ಯಾವಾಗಲೂ ಸುಳ್ಳು ಹೇಳುತ್ತೇನೆ” ಎಂದು ಹೇಳುವುದು. ಇದು ಒಂದು ಸಮಸ್ಯೆಯಂತೆ ಕಾಣುತ್ತದೆ. ಏಕೆಂದರೆ ಆ ಮಾತು ಸತ್ಯವಾಗಿದ್ದರೆ, ಅದು ಸುಳ್ಳಾಗುತ್ತದೆ; ಅದು ಸುಳ್ಳಾಗಿದ್ದರೆ, ಅದು ಸತ್ಯವಾಗುತ್ತದೆ.

ಆದರೆ ಝಿಝೆಕ್ ಅವರ ಪ್ರಕಾರ, ಇದನ್ನು ಸಮಸ್ಯೆಯಾಗಿ ಪರಿಗಣಿಸುವ ಅಗತ್ಯವಿಲ್ಲ. ಏಕೆಂದರೆ ಅವರು ಲಕಾನ್ ಮಾಡಿದ ಒಂದು ಪ್ರಮುಖ ವ್ಯತ್ಯಾಸವನ್ನು ಎತ್ತಿ ತೋರಿಸುತ್ತಾರೆ. ಅದು ‘Enunciation’ , ಅಂದರೆ ಒಬ್ಬ ವ್ಯಕ್ತಿ ಮಾತನಾಡುವ ಕ್ರಿಯೆ ಅಥವಾ ಪ್ರದರ್ಶನ, ಮತ್ತು ‘Enunciated content’ , ಅಂದರೆ ಅವರು ನಿಜವಾಗಿ ಹೇಳುತ್ತಿರುವ ವಿಷಯ, ಇವೆರಡರ ನಡುವಿನ ವ್ಯತ್ಯಾಸ. ಸರಳವಾಗಿ ಹೇಳುವುದಾದರೆ, ಇದು ಒಬ್ಬ ವ್ಯಕ್ತಿಯ ‘ವೈಬ್’ ಮತ್ತು ಅವರು ನಿಜವಾಗಿ ಹೇಳುತ್ತಿರುವ ಮಾತಿನ ನಡುವಿನ ವ್ಯತ್ಯಾಸ.

ಉದಾಹರಣೆಗೆ, ಒಬ್ಬ ವ್ಯಕ್ತಿ “ನಾನು ಯಾವಾಗಲೂ ಸುಳ್ಳು ಹೇಳುತ್ತೇನೆ” ಎಂದು ಹೇಳಿದರೆ, ಆ ಮಾತು ತಾರ್ಕಿಕವಾಗಿ ಸುಳ್ಳಾಗಿರಬಹುದು. ಆದರೆ ಅದರ ಆತ್ಮ ಅಥವಾ ಭಾವದಲ್ಲಿ ಅದು ಸತ್ಯವಾಗಿರಬಹುದು. ಅಂದರೆ, ಆ ಮಾತು ಒಂದು ರೀತಿಯ ತೀಕ್ಷ್ಣ ಪ್ರಾಮಾಣಿಕತೆಯನ್ನು ಮತ್ತು ಪಾಲಿಶ್ಡ್ ರಾಜಕೀಯ ಸಂಪ್ರದಾಯಗಳಿಗೆ ಹೊಂದಿಕೊಳ್ಳಲು ನಿರಾಕರಿಸುವ ಮನೋಭಾವವನ್ನು ವ್ಯಕ್ತಪಡಿಸಬಹುದು. ಅವನ ಅನುಯಾಯಿಗಳು ಅದನ್ನು ಒಂದು ರೀತಿಯ ನೈಜತೆ ಅಥವಾ ಅಸಲಿತನ (authenticity) ಎಂದು ನೋಡುತ್ತಾರೆ, ಅದು ನಿಜವಾಗಿ ಸುಳ್ಳಾಗಿದ್ದರೂ ಸಹ.

ಝಿಝೆಕ್ ರಾಜಕೀಯವನ್ನು ಒಂದು ರೀತಿಯ ‘ರಾಜಕೀಯ ನಾಟಕ’ (political theatre) ಎಂದು ಬಹಳಷ್ಟು ಚರ್ಚಿಸುತ್ತಾರೆ. ಮತ್ತು ಇದು ಇಂದಿನ ಕಾಲದಲ್ಲಿ ಪ್ರಬಲವಾದ ತಂತ್ರವಾಗಿದೆ. ಜನರು ವಾಸ್ತವಾಂಶಗಳು ಸರಿಯಾಗಿರುವುದನ್ನು ನಂಬುವುದಿಲ್ಲ, ಅಥವಾ ಅದರ ಬಗ್ಗೆ ಹೆಚ್ಚು ಕಾಳಜಿಯನ್ನೇ ಹೊಂದಿರುವುದಿಲ್ಲ. ಬದಲಾಗಿ, ಅವರು ಒಬ್ಬ ವ್ಯಕ್ತಿಯ ಮನೋಭಾವ, ವರ್ತನೆ ಮತ್ತು ವ್ಯಕ್ತಿತ್ವಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ.

“ನಾನು ಸುಳ್ಳು ಹೇಳುತ್ತೇನೆ” ಎಂದು ಒಪ್ಪಿಕೊಳ್ಳುವ ವ್ಯಕ್ತಿಯನ್ನು ಅವರು ಹೆಚ್ಚು ಇಷ್ಟಪಡಬಹುದು. ಏಕೆಂದರೆ ಕನಿಷ್ಠ ಆ ವ್ಯಕ್ತಿ ಪ್ರಾಮಾಣಿಕವಾಗಿ ಸುಳ್ಳು ಹೇಳುತ್ತಿದ್ದಾನೆ ಎಂಬ ಭಾವನೆ ಮೂಡುತ್ತದೆ. ಅದಕ್ಕಿಂತ, ಸತ್ಯವನ್ನೇ ಹೇಳುತ್ತಿದ್ದರೂ ಎಲ್ಲವನ್ನೂ ತುಂಬಾ ಪಾಲಿಶ್ ಮಾಡಿದಂತೆ , ಪೂರ್ವಸಿದ್ಧಪಡಿಸಿದ ಭಾಷಣದಲ್ಲಿ, ಸ್ಕ್ರಿಪ್ಟ್‌ನಂತೆ ಮಾತನಾಡುವ ವ್ಯಕ್ತಿ ಅವರಿಗೆ ಕಡಿಮೆ ನೈಜವಾಗಿ ಕಾಣಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಪಾಲಿಶ್ ಮಾಡಿದ ಅಥವಾ ಸ್ಕ್ರಿಪ್ಟ್ ಮಾಡಿದ ಸತ್ಯಕ್ಕಿಂತ, ವ್ಯಕ್ತಿಯ ‘ವೈಬ್’ ಮತ್ತು ಆಕರ್ಷಕ ವ್ಯಕ್ತಿತ್ವಕ್ಕೆ (charisma) ನಾವು ಹೆಚ್ಚು ಮಹತ್ವ ನೀಡುತ್ತೇವೆ. ಮತ್ತು ಇದು ನಿಜಕ್ಕೂ ಅತ್ಯಂತ ಆಧುನಿಕವಾದ ಆದರೆ ಅಪಾಯಕಾರಿಯಾದ ಒಂದು ಕಲ್ಪನೆ.

*********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.