ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ  ~ ಪಾಟಲೀ – ಪುತ್ರಕರ ಮದುವೆ, ಪಾಟಲೀಪುತ್ರದ ನಿರ್ಮಾಣ

ವರ್ಷೋಪಾಧ್ಯಾಯನು ವರರುಚಿಗೆ ಪಾಟಲೀಪುತ್ರ ನಗರದ ವೈಭವಗಾಥೆಯನ್ನು ಹೇಳುತ್ತಿದ್ದಾನೆ. ಇಲ್ಲಿಯವರೆಗೆ… ತಂದೆಯ ವಂಚನೆಯಿಂದ ನೊಂದು ರಾಜ್ಯವನ್ನು ತೊರೆದು ಹೊರಟ ಪುತ್ರಕನಿಗೆ ಕಾಡಿನಲ್ಲಿ ಮಯಾಸುರನ ಮೂರ್ಖಮಕ್ಕಳ ಭೇಟಿಯಾಗುತ್ತದೆ. ಅವರ ಮಾಯಾ ಪರಿಕರಗಳನ್ನು ತೆಗೆದುಕೊಂಡು, ಮಾಯಾ ಚಪ್ಪಲಿ ತೊಟ್ಟು ಹಾರುತ್ತಾ ಅವನು ಆಕರ್ಷಿಕಾ ಎಂಬ ನಗರದಲ್ಲಿ ಇಳಿದು, ಮುರುಕು ಮನೆಯ ಮುದುಕಿಯೊಬ್ಬಳ ಆಶ್ರಯ ಪಡೆಯುತ್ತಾನೆ. ಮುಂದೆ… ಪುತ್ರಕನು ತನಗೆ ತೋಚಿದ ಕೆಲಸಗಳನ್ನು ಮಾಡಿಕೊಂಡು ಮುದುಕಿಯ ಮನೆಯಲ್ಲಿ ಆಕೆಯ ಮಗನಂತೆಯೇ ಇರತೊಡಗಿದನು. ಹೀಗಿರುತ್ತ ಒಮ್ಮೆ ಮುದುಕಿಯು ಪುತ್ರಕನಿಗೆ ಮದುವೆಯಾಗಿ ಮನೆಗೊಬ್ಬಳು ಸೊಸೆಯನ್ನು ತಾ […]

ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ ~ ತಂದೆಯಿಂದಲೇ ಪುತ್ರಕನ ಕೊಲೆಗೆ ಯತ್ನ

ವರ್ಷೋಪಾಧ್ಯಾಯನು ವರರುಚಿಗೆ ಪಾಟಲೀಪುತ್ರ ನಗರದ ವೈಭವಗಾಥೆಯನ್ನು ಹೇಳುತ್ತಿದ್ದಾನೆ. ಇಲ್ಲಿಯವರೆಗೆ… ಚಿಂಚಿನಿಯ ಸಹೋದರಿಯರು ವಾರಣಾಸಿಯ ಸಹೋದರರನ್ನುವರಿಸಿ, ಅವರಲ್ಲಿ ಮಧ್ಯಮಳಿಗೆ ಒಬ್ಬ ಮಗನು ಜನಿಸಿದನು. ಅವನು ಹುಟ್ಟುವ ಮೊದಲೇ ವಾರಣಾಸಿಯ ಸಹೋದರರು ಹೆಂಡತಿಯರನ್ನು ಬಿಟ್ಟು ದೇಶಾಂತರ ಹೋದರು. ಕುಮಾರಸ್ವಾಮಿಯ ವರಪ್ರಸಾದದಿಂದ ಪುತ್ರಕನು ಧನವಂತನಾಗಿ, ರಾಜನೂ ಆದನು. ಅವನ ತಂದೆ ಹಾಗೂ ಅವರ ಸಹೋದರರನ್ನು ರಾಜ್ಯಕ್ಕೆ ಕರೆಸುವ ಸಲುವಾಗಿ ದಾನಧರ್ಮಾದಿಗಳನ್ನು ಮಾಡುವಂತೆ ಪುತ್ರಕನಿಗೆ ಯಜ್ಞದತ್ತನು ಸೂಚಿಸಿದನು. ಅದಕ್ಕೆ ಪೂರಕವಾಗಿ ಬ್ರಹ್ಮದತ್ತನ ಕಥೆಯನ್ನು ಹೇಳಿದನು. ಮುಂದೆ… ಯಜ್ಞದತ್ತನು ಪುತ್ರಕನಿಗೆ ಬ್ರಹ್ಮದತ್ತ ರಾಜನ ಕಥೆಯನ್ನು […]

ಕಥಾ ಸರಿತ್ಸಾಗರ : ದಾಯಾದಿ ಸಹೋದರರು ಹೇಳಿದ ವರ್ಷೋಪಾಧ್ಯಾಯರ ಕಥೆ

ವರರುಚಿಗೆ ವೇತಸಪುರದ ದೇವಸ್ವಾಮಿ ಮತ್ತು ಕರಂಭಕ ಎಂಬ ಬ್ರಾಹ್ಮಣ ಸಹೋದರರ ಮಕ್ಕಳಾದ ವ್ಯಾಡಿ ಮತ್ತು ಇಂದ್ರದತ್ತರ ಪರಿಚಯವಾಯಿತು. ಅವರ ಪರಿಚಯವನ್ನು ಕೇಳಲು ಆ ದಾಯಾದಿ ಸಹೋದರರು ಹೇಳಲು ಆರಂಭಿಸಿದರು…  ಏಕಕಾಲಕ್ಕೆ ತಮ್ಮ ತಂದೆಯರನ್ನು ಕಳೆದುಕೊಂಡ ವೇತಸಪುರದ ವ್ಯಾಡಿ ಮತ್ತು ಇಂದ್ರದತ್ತರು ಉತ್ತಮ ವಿದ್ಯೆ ನೀಡಬಲ್ಲ ಗುರುವಿಗಾಗಿ ಅಲೆದಾಡಿ, ಕುಮಾರಸ್ವಾಮಿಯನ್ನು ಕುರಿತು ಪ್ರಾರ್ಥಿಸಿದರು. ಕುಮಾರಸ್ವಾಮಿಯು ಅವರಿಗೆ ನಂದ ಮಹಾರಾಜನ ಪಾಟಲಿಕ ಎಂಬ ನಗರದಲ್ಲಿ ವಾಸವಿರುವ ವರ್ಷೋಪಾಧ್ಯಾಯನನ್ನು ಆಶ್ರಯಿಸುವಂತೆ ಸೂಚಿಸಿದನು. ಅದರಂತೆ ಪಾಟಲಿಕ ನಗರಕ್ಕೆ ಬಂದ ದಾಯಾದಿಗಳು ಅಲ್ಲಿಯ ಜನರನ್ನು […]

ಕಥಾ ಸರಿತ್ಸಾಗರ : ಶಿವನು ಸ್ಮಶಾನವಾಸಿಯಾಗಿದ್ದು ಯಾಕೆ? : ಕಾಣಭೂತಿ ಹೇಳಿದ ಕಥೆ

ವಿಂಧ್ಯಾಟವಿಯಲ್ಲಿ ಕಾಣಭೂತಿ ಮತ್ತು ವರರುಚಿಯ ಭೇಟಿಯಾಯಿತು. ವರರುಚಿಯು ಕಾಣಭೂತಿಯ ಬಗ್ಗೆ ವಿಚಾರಿಸಿದಾಗ, ಅವನು ಶಿವ ಪಾರ್ವತಿಯರಿಂದ ತನ್ನ ಬಗ್ಗೆ ತನಗೆ ತಿಳಿದುಬಂದ ವಿಷಯಗಳನ್ನು ಹೇಳತೊಡಗಿದನು. ಅದರ ಜೊತೆಗೆ ಶಿವಪಾರ್ವತಿಯರು ಸೃಷ್ಟಿಯ ಬಗ್ಗೆ ನಡೆಸಿದ ಸಂವಾದವನ್ನೂ ಅವನು ಯಥಾವತ್ತಾಗಿ ಹೇಳಿದನು. ಪ್ರಳಯ ಉಂಟಾಗಿ ಯುಗಾಂತಗೊಂಡಾಗ ಎಲ್ಲೆಲ್ಲೂ ನೀರೇ ತುಂಬಿಕೊಂಡಿತ್ತು. ಆಗ ಶಿವನು ತನ್ನ ತೊಡೆಯನ್ನು ಸೀಳಿ ರಕ್ತದ ಹನಿಯೊಂದನ್ನು ಅದರಲ್ಲಿ ಬೀಳಿಸಿದನು. ನೀರಲ್ಲಿ ಬಿದ್ದ ಆ ಹನಿಯು ಮೊಟ್ಟೆಯಾಯಿತು. ಅದನ್ನು ಎರಡು ಭಾಗಗಳಾಗಿ ಒಡೆದಾಗ ಒಂದು ಭಾಗದಿಂದ ಪುರುಷನೂ […]