ತಾವೋ ತಿಳಿವು #46 : ಯಾರು ಈ ಸಂಯಮಿಗಳು?

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ದೇಶವನ್ನು ಮುನ್ನಡೆಸಲು
ತಕ್ಕಡಿ ಎಷ್ಟು ಮುಖ್ಯವೋ
ತಕ್ಕಡಿ ಹಿಡಿಯುವವನ ಸಂಯಮವೂ
ಅಷ್ಟೇ ಮುಖ್ಯ.

ಯಾರು ಈ ಸಂಯಮಿಗಳು?
ರುಚಿಯ ಬಗ್ಗೆ ತಕರಾರು ಮಾಡದವರು,
ಆಕಾಶವನ್ನು ಮೈತುಂಬ ಹೊದ್ದವರು,
ಬೆಳಕಿನಂತೆ ಹಬ್ಬಿಕೊಳ್ಳುವವರು,
ಪರ್ವತಗಳಂತೆ ನೆಲಕ್ಕೆ ಕಾಲೂರಿ ನಿಂತವರು,
ಬದುಕು ಕಟ್ಟಿಕೊಟ್ಟ ಬುತ್ತಿಯನ್ನೆಲ್ಲ
ಕಣ್ಣಿಗೊತ್ತಿಕೊಂಡು ಉಣ್ಣುವವರು.
ಕಣ್ಣಳತೆಯಲ್ಲಿ ಯಾವ ಮೈಲಿಗಲ್ಲೂ ಇಲ್ಲದವರು.

ಅವರು ಯಾವುದನ್ನೂ ಕಟ್ಚಿಹಾಕುವುದಿಲ್ಲ
ಅಂತೆಯೇ ಅವರಿಗೆ
ಯಾವುದೂ ಅಸಾಧ್ಯವಲ್ಲ.

ತಾಯಿ ಮಗುವನ್ನು ಕಾಡುವಂತೆ
ಅವರು ಜನರನ್ನು ಕಾಡುತ್ತಾರೆ.

Leave a Reply