ತಾವೋ ತಿಳಿವು #49 ~ ಊರಿನ ದೊರೆ ಐಲಾದರೆ….

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಗುರ, ಸಾಮಾನ್ಯ ಅಲ್ಲ
ಬೇರು ಭಾರೀ ಗಟ್ಚಿ.

ಯಾವುದು ನಿಶ್ಚಲವೋ
ಅದೇ ಎಲ್ಲ ಚಲನೆಯ ಮೂಲ.

ಅಂತೆಯೇ ಸಂತ
ಎಲ್ಲ ಕಡೆ ಕಾಣಿಸಿಕೊಂಡರೂ
ಮನೆ ಮಾತ್ರ ಬಿಟ್ಟು ಹೋಗಿರುವುದಿಲ್ಲ.
ಎಷ್ಚೇ ಆಕರ್ಷಣೆಗಳಿದ್ದಾಗಲೂ
ಕೊಂಚವೂ ಉದ್ವಿಗ್ನನಾಗಿರುವುದಿಲ್ಲ.

ಆದರೆ,
ಊರಿನ ದೊರೆ ಐಲಾದರೆ
ಜನರ ಕಣ್ಣಲ್ಲಿ ಹಗುರ.
ಹಗುರ ಆಗುತ್ತಿದ್ದಂತೆಯೇ
ದಿಕ್ಕು ತಪ್ಪುತ್ತದೆ,
ಮನೆಯ ವಿಳಾಸ ಮರೆತುಹೋಗುತ್ತದೆ.

Leave a Reply