ತಾವೋ ತಿಳಿವು #3

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

 

2015-07-25 10.00.25

ಳ್ಳೆಯತನ

ಎಷ್ಟು ಒಳ್ಳೆಯದಾಗಬಲ್ಲದು

ಎಂಬುದಕ್ಕೆ

ನೀರು, ಒಂದು ಉತ್ತಮ ಉದಾಹರಣೆ

~

ಜಗತ್ತಿನ ಪ್ರತೀ ಜೀವವನ್ನು

ಬೆಳೆಸುತ್ತದೆಯಾದರೂ

ನೀರು, ಎಂದೂ ಯಾವದನ್ನೂ

ಕ್ಲೇಮ್ ಮಾಡಿಲ್ಲ.

ಎತ್ತರದಲ್ಲಿ ಹುಟ್ಟಿದರೂ

ಜನ ಹೆದರುವ,

ಬಾಳಲು ನಾಚುವ ತಗ್ಗುಗಳಲ್ಲೂ

ನಿರಾತಂಕವಾಗಿ ಮನೆ ಮಾಡುತ್ತದೆ

ಇದು ಪಕ್ಕಾ ತಾವೋ ಸ್ವಭಾವ.

~

ನೀರು

ಸೂಕ್ಷ್ಮದಲ್ಲಿ ನುಗ್ಗುತ್ತದೆ

ಆಳದಲ್ಲಿ ಇಳಿಯುತ್ತದೆ

ಒಮ್ಮೆ ಅಂತಃಕರಣ, ಒಮ್ಮೊಮ್ಮೆ ಆಗ್ರಹ

ಎಲ್ಲವನ್ನೂ ಒಳಗೊಳ್ಳೋದು

ಅನ್ಯಾಯದ ವಿರುದ್ಧ ಆಕ್ರೋಶ

ಒಗ್ಗಟ್ಟಿನ ಮಾತು

ಚಾಣಾಕ್ಷ ಸಮಯ ಸಾಧಕತನ

ಸೋಗಿಲ್ಲದ ನಡೆ

ಜೀವದ್ರವ, ನುಂಗಲಾರದ ತುತ್ತು

ಸರಳ, ಸಂಕೀರ್ಣ

ಹೀಗೇ ಅಪಾರ ವೈರುಧ್ಯ.

~

ನೀರಿಗೆ

ಸ್ಪರ್ಧೆ ಎಂಬುದೇ ಇಲ್ಲ

ಅದಕ್ಕೆ ತಕರಾರೂ ಇಲ್ಲ.

 

Leave a Reply