ವಸ್ತುವನ್ನು ಅದು ಇರುವ ಹಾಗೇ ನೋಡಲು ಸಾಧ್ಯವೇ? : ಯೂಜಿ ಜೊತೆ ಮಾತು ಕಥೆ #6

ನೀವು ಒಂದು ವಸ್ತುವನ್ನ ನೋಡಿದ್ದೀರಿ ಎಂದರೆ ನೀವು ಈಗಾಗಲೇ ಆ ವಸ್ತುವಿನಿಂದ ದೂರವಾಗಿದ್ದೀರಿ ಎಂದೇ ಅರ್ಥ…

ಯುಜಿ ಹೇಳಿದ್ದು…

“Fear is the very thing that you do not want to be free from”. “ನೀವು ಬಿಡುಗಡೆ ಹೊಂದಲು ಬಯಸದೆ ಇರುವ ಸಂಗತಿ ಏನಾದರೂ ಇದ್ದರೆ, ಅದು ಭಯ ಮಾತ್ರ!” Illustration Courtesy: Kiran Madalu Personal Colelction  ಭಯ ವಾಸ್ತವವಲ್ಲ. ಅದು ನಾವು ಆವಾಹಿಸಿಕೊಳ್ಳುವ ಭಾವ. ಸದಾ ಕಾಲ ಏನಾದರೊಂದು ಅಪಾಯವನ್ನು ಕಲ್ಪಿಸಿಕೊಂಡು ಭಯಪಡುತ್ತಲೇ ಇರುವುದು ನಮಗೆ ರೂಢಿಯಾಗಿಬಿಟ್ಟಿದೆ. ಭವಿಷ್ಯದ ಭಯ,  ಪ್ರಾಣಿಗಳ ಭಯ, ಕತ್ತಲೆಯ ಭಯ, ಕಾಯಿಲೆಯ ಭಯ… ಹೀಗೆ […]

ಯುಜಿ ಹೇಳಿದ್ದು …

“Illusion creates the idea of TRUTH to perpetuate illusion.” “ಭ್ರಮೆಯು ಭ್ರಮೆಯನ್ನು ಶಾಶ್ವತಗೊಳಿಸಲೆಂದೇ ಸತ್ಯವೆಂಬ ಕಲ್ಪನೆಯನ್ನು ಸೃಷ್ಟಿಸುತ್ತದೆ.” Illustration Courtesy: Kiran Madalu Personal Colelction  ಸತ್ಯವೆಂಬುದು ಕಾಲ್ಪನಿಕ. ಯಾವುದು ದೇಶ, ಕಾಲ, ವ್ಯಕ್ತಿ, ಸಂದರ್ಭಗಳ ಪಾಲಿಗೆ ಭಿನ್ನವಾಗಿರುತ್ತದೋ ಅದು ಕಲ್ಪನೆಯಲ್ಲದೆ ಮತ್ತೇನು? ಯುಜಿ ಕೃಷ್ಣಮೂರ್ತಿಯವರ ಮಾತು ಪ್ರತಿಪಾದಿಸುತ್ತಿರುವುದು ಇದನ್ನೇ. ಭ್ರಮೆ ಸುಳ್ಳನ್ನೇ ನಂಬಿಕೊಳ್ಳುವಂತೆ ಮಾಡುತ್ತದೆ ಅನ್ನುವುದು ಸರಿಯಷ್ಟೆ. ಸತ್ಯವೂ ಕೂಡ ನಮ್ಮನ್ನು ನಂಬಿಸುವ ಭ್ರಮೆಯೇ. “ಸತ್ಯವೆಂಬುದು ನಮ್ಮ ಕಲ್ಪನೆಯನ್ನು ಶಾಶ್ವತಗೊಳಿಸುವ ಭ್ರಮೆ” ಅನ್ನುವುದು […]