ಯುಜಿ ಹೇಳಿದ್ದು …

“Illusion creates the idea of TRUTH to perpetuate illusion.”

“ಭ್ರಮೆಯು ಭ್ರಮೆಯನ್ನು ಶಾಶ್ವತಗೊಳಿಸಲೆಂದೇ ಸತ್ಯವೆಂಬ ಕಲ್ಪನೆಯನ್ನು ಸೃಷ್ಟಿಸುತ್ತದೆ.”

Illustration Courtesy: Kiran Madalu Personal Colelction 

IMG-20180220-WA0001.jpg

ಸತ್ಯವೆಂಬುದು ಕಾಲ್ಪನಿಕ. ಯಾವುದು ದೇಶ, ಕಾಲ, ವ್ಯಕ್ತಿ, ಸಂದರ್ಭಗಳ ಪಾಲಿಗೆ ಭಿನ್ನವಾಗಿರುತ್ತದೋ ಅದು ಕಲ್ಪನೆಯಲ್ಲದೆ ಮತ್ತೇನು? ಯುಜಿ ಕೃಷ್ಣಮೂರ್ತಿಯವರ ಮಾತು ಪ್ರತಿಪಾದಿಸುತ್ತಿರುವುದು ಇದನ್ನೇ.

ಭ್ರಮೆ ಸುಳ್ಳನ್ನೇ ನಂಬಿಕೊಳ್ಳುವಂತೆ ಮಾಡುತ್ತದೆ ಅನ್ನುವುದು ಸರಿಯಷ್ಟೆ. ಸತ್ಯವೂ ಕೂಡ ನಮ್ಮನ್ನು ನಂಬಿಸುವ ಭ್ರಮೆಯೇ. “ಸತ್ಯವೆಂಬುದು ನಮ್ಮ ಕಲ್ಪನೆಯನ್ನು ಶಾಶ್ವತಗೊಳಿಸುವ ಭ್ರಮೆ” ಅನ್ನುವುದು ಯುಜಿ ಮಾತಿನ ಸಾರಾಂಶ.  

1 Comment

Leave a Reply