ಸಾಇಲ್ ಹೇಳಿದ ಸಾವಿನ ರಹಸ್ಯ! : ರಾ-ಉಮ್ ಕಥೆಗಳು

ವಾ-ಐನ್ ಸಾಇಲ್‌ಗೆ ಸಾವಿನ ರಹಸ್ಯವನ್ನು ಅರಿತೇ ಬಿಡಬೇಕು ಎಂಬ ಹುಕಿ ಹುಟ್ಟಿತು. ರಾ-ಉಮ್‌ಳನ್ನು ಕೇಳಿದರೆ ಅವಳು ನಿಗೂಢವಾಗಿ ನಕ್ಕು, “ಅದು ಅರಿಯಬೇಕಾದ ವಿದ್ಯೆ. ಹೇಳಿಕೊಡುವುದಲ್ಲ” ಎಂದಳು. ಅವನೂ ರಾ-ಉಮ್ ಶಿಷ್ಯನಲ್ಲವೇ? ಅರಿವಿನ ಅನ್ವೇಷಣೆಗೆ ಹೊರಟೇ ಬಿಟ್ಟ. ಸಾವಿನ ರಹಸ್ಯ ಹುಡುಕುವ ಯಾತ್ರೆಯಲ್ಲಿ ಅವನು ಅದೆಷ್ಟೋ ಮಂದಿಯನ್ನು ಕಂಡ. ಸಾವನ್ನು ಜಯಿಸಿ ಬಂದವರೆಂದು ಪ್ರಸಿದ್ಧರಾದ ಹಲವರನ್ನು ಭೇಟಿಯಾದ. ಅವನಿಗೆ ಯಾತ್ರೆಯಿನ್ನೂ ಅಪೂರ್ಣ ಎನಿಸುತ್ತಿತ್ತು. ಆದರೆ ಆಶ್ರಮ ಅವನನ್ನು ತೀವ್ರವಾಗಿ ಸೆಳೆಯಿತು. ನೇರವಾಗಿ ಆಶ್ರಮಕ್ಕೆ ಹಿಂದಿರುಗಿದ. ಆಶ್ರಮದಲ್ಲಿ ಎಲ್ಲವೂ ಎಂದಿನಂತೆ […]

ಪಶ್ಚಿಮದ ಜ್ಞಾನಿಗೆ ಮಹಾಯೋಗಿನಿ ರಾ-ಉಮ್ ಪ್ರಶ್ನೆ

: ಯಾದಿರಾ ರಾ-ಉಮ್ ತನ್ನದೇ ಆದ ಆಶ್ರಮವನ್ನು ಆರಂಭಿಸುವ ಮುನ್ನ ಏನು ಮಾಡುತ್ತಿದ್ದಳು ಎಂಬುದಕ್ಕೆ ಸಂಬಂಧಿಸಿದ ವಿವರಗಳು ಹೆಚ್ಚೇನೂ ಲಭ್ಯವಿಲ್ಲ. ಆದರೆ ಅವಳು ಮಹಾಯೋಗಿನಿಯೊಬ್ಬಳ ಆಶ್ರಮದಲ್ಲಿ ಇದ್ದದ್ದಂತೂ ನಿಜ. ತನ್ನ ಶಿಷ್ಯತ್ವದ ದಿನಗಳನ್ನು ಅವಳೇ ಹೇಳಿಕೊಂಡದ್ದಿದೆ. ರಾ-ಉಮ್‌ನ ಗುರುವಾಗಿದ್ದ ಆ ಯೋಗಿನಿ ಪಾಠವನ್ನೇ ಮಾಡುತ್ತಿರಲಿಲ್ಲವಂತೆ. ಅಂತೇವಾಸಿಯಾಗಿ ಅವಳ ಜೊತೆ ಬದುಕುವುದೇ ಕಲಿಕೆಯಾಗಿತ್ತಂತೆ. ಒಂದು ದಿನ ಆ ಮಹಾಯೋಗಿನಿಯ ಆಶ್ರಮಕ್ಕೆ ಪಶ್ಚಿಮದ ಪ್ರಖ್ಯಾತ ಸಾಧುವೊಬ್ಬರು ಬಂದರು. ಜಗತ್ತಿನ ಎಲ್ಲ ಆಗುಹೋಗುಗಳನ್ನೂ ಲೌಕಿಕ ದೃಷ್ಟಿಯಿಂದಲೇ ಗ್ರಹಿಸಿ ವಿವರಿಸಲು ಸಾಧ್ಯ ಎಂಬುದು […]

ಜೀವನದಲ್ಲಿ ಅತಿ ಮುಖ್ಯವಾದ ದಿನಗಳು ಯಾವುವು?

~ ಯಾದಿರಾ ರಾ-ಉಮ್ ಎದುರು ಪ್ರಶ್ನೆಗಳನ್ನಿಡುವುದೆಂದರೆ ಶಿಷ್ಯರಿಗೆ ಬಹಳ ಇಷ್ಟ. ಗಂಭೀರ ಜಿಜ್ಞಾಸೆಯ ಲೇಪ ಹಚ್ಚಿಕೊಂಡು ಬರುವ ಪ್ರಶ್ನೆಗಳ ಮೂರ್ಖ ಆಯಾಮವನ್ನು ಅನಾವರಣಗೊಳಿಸುವ ಶಕ್ತಿ ರಾ-ಉಮ್‌ಗೆ ಇದ್ದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಯೇ ಮೂರ್ಖ ಪ್ರಶ್ನೆ ಎಂದು ಎಲ್ಲರೂ ಭಾವಿಸಿದ್ದ ಪ್ರಶ್ನೆಯಲ್ಲಿರುವ ಗಂಭೀರ ಜಿಜ್ಞಾಸೆಯನ್ನು ಗುರುತಿಸಿ ಉತ್ತರಿಸುವ ಸೂಕ್ಷ್ಮ ಒಳನೋಟವೂ ಆಕೆಗಿತ್ತು. ಸಂಜೆಯ ಹೊತ್ತಿನ ಪ್ರಶ್ನೋತ್ತರದಲ್ಲಿ ಹೊಸತಾಗಿ ಆಶ್ರಮ ಸೇರಿದ್ದ ವಿದ್ಯಾರ್ಥಿ ಒಂದು ಪ್ರಶ್ನೆ ಎತ್ತಿದ. ‘ಮನುಷ್ಯನಿಗೆ ಜೀವನದಲ್ಲಿ ಅತಿ ಮುಖ್ಯವಾದ ದಿನಗಳು ಯಾವುವು?’ ರಾ-ಉಮ್ ಪಾನೀಯದ […]

ವಾ-ಐನ್-ಸಾಇಲ್’ನ ಕುತೂಹಲ ಮತ್ತು ಗುರುವಿನಂಥ ವಿದ್ಯಾರ್ಥಿಯ ವಿನಯ

ರಾ-ಉಮ್ ಆಶ್ರಮಕ್ಕೆ ಅನೇಕ ಹಳೆಯ ವಿದ್ಯಾರ್ಥಿಗಳು ಮತ್ತೆ ಮತ್ತೆ ಬರುತ್ತಿದ್ದರು. ಇವರಲ್ಲಿ ಕೆಲವರು ಆಗಲೇ ಗುರುಗಳಾಗಿ ಹೆಸರು ಮಾಡಿದ್ದರು. ಆದರೂ ಅವರು ಆಗೀಗ ಮತ್ತೆ ಆಶ್ರಮಕ್ಕೆ ಬಂದು ಶಿಷ್ಯರಾಗಿ ಕೆಲಕಾಲ ಕಳೆಯುತ್ತಿದ್ದರು. ಹೀಗೆ ಬರುತ್ತಿದ್ದವರಲ್ಲಿ ಬಹುತೇಕ ರಾ-ಉಮ್‌ಳಷ್ಟೇ ಪ್ರಾಯವಿದ್ದ ಒಬ್ಬರಿದ್ದರು. ರಾ-ಉಮ್ ಕೂಡಾ ಇವರನ್ನು ಬಹಳ ಗೌರವದಿಂದ ಕಾಣುತ್ತಿದ್ದಳು. ಅನೇಕ ಹಳೆಯ ವಿದ್ಯಾರ್ಥಿಗಳೂ ಈ ವ್ಯಕ್ತಿಯನ್ನು ಗುರುವೆಂದೇ ಪರಿಗಣಿಸುತ್ತಿದ್ದರು. ಅವರಿಗೆ ಪೂರ್ವದ ಯಾವುದೋ ದ್ವೀಪದಲ್ಲಿ ಆಶ್ರಮವಿತ್ತು. ವಾ-ಐನ್-ಸಾಇಲ್‌ಗೆ ಈ ವ್ಯಕ್ತಿಯ ಬಗ್ಗೆ ಬಹಳ ಕುತೂಹಲ. ಒಂದು ದಿನ ಸಂಜೆಯ […]

ನೆಮ್ಮದಿಯ ಕ್ಷೇತ್ರವನ್ನು ತಲುಪುವುದು ಹೇಗೆ?

~ ಯಾದಿರಾ ರಾ-ಉಮ್ ಆಶ್ರಮದಲ್ಲಿ ಬೋಧಕರು, ವಿದ್ಯಾರ್ಥಿಗಳು, ಅತಿಥಿಗಳು ಮತ್ತು ಸಂದರ್ಶಕರಿಗೆಲ್ಲಾ ಅನ್ವಯಿಸುವ ಒಂದು ನಿಯಮವಿತ್ತು. ಮಧ್ಯಾಹ್ನದ ಊಟವಾದ ಮೇಲೆ ಸಣ್ಣ ನಿದ್ರೆ ತೆಗೆಯುವುದು. ಈ ನಿಯಮವನ್ನು ಆಶ್ರಮವಾಸಿಗಳೆಲ್ಲರೂ ಪಾಲಿಸಲೇಬೇಕಾಗಿತ್ತು. ನಿದ್ರೆ ಬಾರದವರು ಕನಿಷ್ಠ ಉಳಿದವರ ನಿದ್ರೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿತ್ತು. ಒಂದು ಮಧ್ಯಾಹ್ನ ಎಲ್ಲರೂ ಊಟ ಮುಗಿಸಿದ್ದರು. ನಿದ್ರೆಗೆ ತೆರಳುವ ಹೊತ್ತಿಗೆ ನೆರೆಯ ಹಳ್ಳಿಯ ಬುದ್ಧಿವಂತನೊಬ್ಬ ತನ್ನ ಸಮಸ್ಯೆಯ ಪರಿಹಾರಕ್ಕಾಗಿ ಬಂದ. ಆಶ್ರಮಕ್ಕೆ ಬಂದ ಅತಿಥಿಯನ್ನು ಗೌರವದಿಂದಲೇ ವಿದ್ಯಾರ್ಥಿಗಳು ಬರ ಮಾಡಿಕೊಂಡು ಏನು ವಿಷಯ ಎಂದು ಕೇಳಿದರು. […]