ತಾವೋ ತಿಳಿವು #1

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ತ

ಅನ್ಯರಿಗೆ ಕಲಿಸಬಹುದಾದ ತಾವೋ

ಅನನ್ಯ ಹೇಗಾದೀತು?

ಹೆಸರನ್ನು ಕಟಕಟೆಯಲ್ಲಿ ನಿಲ್ಲಿಸಬಹುದಾದರೆ

ಆ ಹೆಸರು ಕಳ್ಳ ಹೆಸರಲ್ಲವೇ?

ಹೆಸರಿಲ್ಲದ್ದು ಮಾತ್ರ ಅನನ್ಯ;

ಹೆಸರೇ ಸಂಕಟಗಳ ಮಹಾತಾಯಿ.

ಕಳಚಿದಾಗ ಕಂಗೊಳಿಸುವ ಅವ್ಯಕ್ತ

ಹೊದ್ದಾಗ ಮಾತ್ರ ದಾರಿ ತಪ್ಪಿಸುವ ವ್ಯಕ್ತ;

ವ್ಯಕ್ತ, ಅವ್ಯಕ್ತ ಇಬ್ಬರೂ ಕತ್ತಲೂರಿನ ವಾರಸದಾರರು.

ಕತ್ತಲೆ,

ಕಣ್ಣಿಗೆ ಪಟ್ಟಿ ಕಟ್ಟಿಕೊಂಡಾಗಲೇ ತೆರೆದುಕೊಂಡ ಬೆಳಕಿನೂರಿನ ದಾರಿ.

Leave a Reply