ಉತ್ತರ ನಿನ್ನ ಕೈಯಲ್ಲೇ ಇದೆ

ಮ್ಮೆ ಒಬ್ಬ ಯುವಕ ಬೆಟ್ಟದ ಮೇಲೆ ಇರುತ್ತಿದ್ದ ಝೆನ್ ಗುರುವನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿದನು. ಅದಕ್ಕಾಗಿ ಒಂದು ಪುಟ್ಟ ಹಕ್ಕಿಯನ್ನು ಮುಷ್ಟಿಯಲ್ಲಿ ಮುಚ್ಚಿಟ್ಟುಕೊಂಡು, ಬೆನ್ನ ಹಿಂದೆ ಕೈ ಕಟ್ಟಿಕೊಂಡು ಗುರುವಿನ ಬಳಿಗೆ ಹೋದನು.   

ಗುರು ಒಂದು ವೇಳೆ ಹಕ್ಕಿ ಬದುಕಿದೆ ಅಂದರೆ ಹಾಗೇ ಹಕ್ಕಿಯ ಕತ್ತು ಹಿಸುಕಿ ಕೊಂದುಬಿಡುವುದಾಗಿಯೂ, ಸತ್ತಿದೆ ಅಂದರೆ ಹಕ್ಕಿಯನ್ನು ಮುಷ್ಟಿ ತೆರೆದು ಹಾರಿಬಿಡುವುದಾಗಿಯೂ ಅವನು ಆಲೋಚಿಸಿ, “ಗುರುವೇ! ನನ್ನ ಕೈಯೊಳಗೆ ಇರುವ ಹಕ್ಕಿ ಬದುಕಿದೆಯೋ, ಸತ್ತಿದೆಯೋ?” ಎಂದು ಕೇಳಿದನು. 

ಯುವಕನ ಮುಖವನ್ನು ಶಾಂತವಾಗಿ ದಿಟ್ಟಿಸಿದ ಗುರು, “ಉತ್ತರ ನಿನ್ನ ಕೈಯಲ್ಲೇ ಇದೆ!” ಎಂದು ಮುಗುಳ್ನಕ್ಕನು. 

Leave a Reply